ಹಮ್ಮರ್ ಹಮ್ಮೀರ ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್

ಧೋನಿಯಲ್ಲಿ ಹಮ್ಮರ್ ಇದೆ. ಅದು ತನಗೂ ಬೇಕು ಎಂದು ಹಮ್ಮರ್ ಎಚ್ 3 ಖರೀದಿಸಿದ್ದರು ಭಜ್ಜಿ. ಕನ್ನಡ ನಟ ದರ್ಶನ್ ಗೂ ಇಂತದ್ದೇ ಕ್ರೇಝು. ಭಜ್ಜಿಯ ಹಮ್ಮರ್ 3 ಕೊಂಚ ವಿವಾದಕ್ಕೂ ಸಿಲುಕಿಕೊಂಡಿತ್ತು. ಲೈಸನ್ಸ್ ಪ್ಲೇಟ್ ಇಲ್ಲದೇ ಡ್ರೈವಿಂಗ್ ಮಾಡಿದಕ್ಕೆ ಟ್ರಾಫಿಕ್ ಪೊಲೀಸ್ ಈ ಕಾರಿಗೆ ಫೈನ್ ಹಾಕಿದ್ದರು.
ಹರ್ಭಜನ್ ಸಿಂಗ್ ಸೆಲೆಬ್ರಿಟಿ ಆದ ಕಾರಣ ಅವರಿಗೆ ಟ್ರಾಫಿಕ್ ಪೊಲೀಸ್ ಫೈನ್ ಹಾಕಿದ್ದು ದೊಡ್ಡ ಸುದ್ದಿಯಾಗಿತ್ತು. ನಮ್ಮ ಬೆಂಗಳೂರು ಟ್ರಾಫಿಕ್ ಪೊಲೀಸರು ಎಷ್ಟು ಫೈನ್ ಹಾಕುತ್ತಾರೆ ಎಂದು ನಿಮಗೆ ಗೊತ್ತಿರಬಹುದು. ಟ್ರಾಫಿಕ್ ಪೊಲೀಸರು ಫೇಸ್ ಬುಕ್ ನಲ್ಲೂ ಫೇಮಸ್ಸು ಬಿಡಿ.
ಹರ್ಭಜನ್ ಸಿಂಗ್ ಡಿಪ್ಲಸ್ ಸೆಗ್ಮೆಂಟ್ ಕಾರು ಹಮ್ಮರ್ ಸೆಲೆಬ್ರಿಟಿಗಳ ನೆಚ್ಚಿನ ಬಂಡಿ. ಹಮ್ಮರ್ ಎಚ್3 3.7 ಲೀಟರಿನ ಡೀಸೆಲ್ ಎಂಜಿನ್ ಹೊಂದಿದೆ. ಇದು 4 ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹೊಂದಿದ್ದು, ಆಕರ್ಷಕ ಕಾರ್ಯಕ್ಷಮತೆಯ ವಾಹನವಾಗಿದೆ. ಭಜ್ಜಿಯಲ್ಲಿ ಇರುವ ಇನ್ನೊಂದು ಪ್ರಮುಖ ಕಾರೆಂದರೆ ಫೋರ್ಡ್ ಎಂಡೊವರ್.
ಹೆಚ್ಚಿನ ಓದಿಗೆ ಇಲ್ಲಿ ನೋಡಿ: ಸೆಲೆಬ್ರಿಟಿ ಕಾರುಲೋಕ


Click it and Unblock the Notifications








