ನೆರೆದೇಶ ಪ್ರವೇಶಿಸಿದ ಐಕಾನಿಕ್ ಅಂಬಾಸಡರ್ ಕಾರು

Hindustan Motors launched Ambassador car in Bangladesh
ಹಿಂದೂಸ್ತಾನ್ ಮೋಟರ್ಸ್ ಕಂಪನಿಯು ತನ್ನ ಐಕಾನಿಕ್ ಅಂಬಾಸಡರ್ ಕಾರನ್ನು ಇಂದು(ಡಿ 09) ಬಾಂಗ್ಲಾದೇಶದಲ್ಲಿ ಅನಾವರಣ ಮಾಡಿದೆ. ಕಂಪನಿಯ ಐಕಾನಿಕ್ ಕಾರು ದೇಶದ ರಸ್ತೆಯಲ್ಲಿ ಮೋಡಿ ಕಡಿಮೆ ಮಾಡಿದರೂ ಬಾಂಗ್ಲಾದ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಕಂಪನಿಯು ಇಟ್ರಾಕೊ ಮೋಟರ್ಸ್ ಮೂಲಕ ಬಾಂಗ್ಲಾದಲ್ಲಿ ಅಂಬಾಸಡರ್ ಕಾರು ಮಾರಾಟ ಮಾಡಲಿದೆ. ನಮ್ಮ ನೆರೆರಾಜ್ಯದಲ್ಲಿ ಅಂಬಾಸಡರ್ ಕಾರು ಪೆಟ್ರೋಲ್, ಡೀಸೆಲ್ ಮತ್ತು ಸಿಎನ್ ಜಿ ಎಂಜಿನ್ ಆಯ್ಕೆಯಲ್ಲಿ ದೊರಕಲಿದೆ.

ಅಂಬಾಸಡರ್ ಪೆಟ್ರೋಲ್ ಆವೃತ್ತಿ 1,800 ಸಿಸಿ ಎಂಜಿನ್, ಏರ್ ಕಂಡಿಷನ್ ಹೊಂದಿದೆ. ಸಿಎನ್ ಜಿ ಆವೃತ್ತಿಯು 1,350 ಸಿಸಿ ಮತ್ತು ಎಸಿ ಹೊಂದಿದೆ. ಬಾಂಗ್ಲಾದಲ್ಲಿ ಅಂಬಾಸಡರ್ ಕಾರನ್ನು ಅನಾವರಣ ಮಾಡಿದ ಸಂದರ್ಭದಲ್ಲಿ ಬಾಂಗ್ಲಾದಲ್ಲಿರುವ ಭಾರತದ ಕಮಿಷನರ್ ಸಂಜಯ್ ಭಟ್ಟಾಚಾರ್ಯ, ಹಿಂದೂಸ್ತಾನ್ ಮೋಟರ್ಸ್ ಎಂಡಿ ಮನೋಜ್ ಝಾ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಮೋಟರ್ಸ್ ಬಾಂಗ್ಲಾದಲ್ಲಿ ಘಟಕವನ್ನು ಆರಂಭಿಸಿದರೆ ಇಂಟ್ರಾಕೊ ಮೋಟರ್ಸ್ ಸಹಭಾಗಿತ್ವದಲ್ಲಿ ಆರಂಭಿಸಲಿದೆ. ಇದಕ್ಕಾಗಿ ಕಂಪನಿಯು ಸುಮಾರು 1 ಕೋಟಿ ಡಾಲರ್ ಹೂಡಿಕೆ ಮಾಡಲಿದೆ ಎಂದು ಮೂಲಗಳು ಹೇಳಿವೆ. ಕಂಪನಿಯು ಬಾಂಗ್ಲಾದಲ್ಲಿ ಮುಂದಿನ ಮೂರು ವರ್ಷದಲ್ಲಿ ಸುಮಾರು 10 ಸಾವಿರ ಕಾರು ಮಾರಾಟ ಮಾಡುವ ಗುರಿ ಹೊಂದಿದೆ.

ಅಂಬಾಸಡರ್ ಮರುವಿನ್ಯಾಸ: ಪ್ರಸಕ್ತ ತಲೆಮಾರಿಗೆ ಮತ್ತು ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಐಕಾನಿಕ್ ಅಂಬಾಸಡರ್ ಕಾರು ಬ್ರಾಂಡನ್ನು ಕಂಪನಿಯು ಮರುವಿನ್ಯಾಸ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಏರೋಡೈನಾಮಿಕ್ಸ್ ಬಾನೆಟ್, ಸುರಕ್ಷತೆಯ ಸವಾರಿಗೆ ಪೂರಕವಾಗಿರುವ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ ಇತ್ಯಾದಿ ಫೀಚರುಗಳೊಂದಿಗೆ ಅಂಬಾಸಡರ್ ಆಗಮಿಸಲಿದೆ.

"ವೀರ್" ಮದಕರಿ: ಐಕಾನಿಕ್ ಅಂಬಾಸಡರ್ ಕಂಪನಿಯು ನೂತನ ವಾಣಿಜ್ಯವಾಹನವೊಂದನ್ನು ಇತ್ತೀಚೆಗೆ ಅನಾವರಣ ಮಾಡಿತ್ತು. ಇದನ್ನು ಹಿಂದಿನಿಂದ ನೋಡಿದರೆ ಪಿಕಪ್ ನಂತಿದ್ದು, ಎದುರು ಮೂತಿ ಥೇಟ್ ಅಂಬಾಸಡರ್ ಕಾರಿನಂತೆ ಕಾಣುತ್ತದೆ. (ಹೆಚ್ಚಿನ ಓದಿಗೆ ಇಲ್ಲಿಗೆ ಬನ್ನಿ)

More from DriveSpark

Article Published On: Friday, December 9, 2011, 17:08 [IST]
English summary
Hindustan Motors launched iconic Ambassador car in Bangladesh. The iconic car will be available in petrol, diesel and CNG variants for the neighboring country of India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+