ಅಂಬಾಸಡರ್ ಕಾರು ಗ್ರಾಹಕರಿಗೆಲ್ಲ ಒಂದು ಸೂಚನೆ

Posted By:
To Follow DriveSpark On Facebook, Click The Like Button
ಹಿಂದೂಸ್ತಾನ್ ಮೋಟರ್ಸ್ ಕಂಪನಿಯು ಮುಂಗಾರು ಪೂರ್ವ ಉಚಿತ ಕಾರು ಚೆಕಪ್ ಕ್ಯಾಂಪ್ ಆರಂಭಿಸಿದೆ. ದೇಶಾದ್ಯಂವಿರುವ ಕಂಪನಿಯ ಎಲ್ಲಾ ಡೀಲರ್ಷಿಪ್ ಕೇಂದ್ರಗಳಲ್ಲೂ ಅಂಬಾಸಡರ್ ಕಾರುಗಳಿಗೆ ಕಂಪನಿಯು ಉಚಿತ ಚೆಕಪ್ ಸೇವೆ ಆರಂಭಿಸಿದೆ. ಜೂನ್ 7ರಿಂದ ಆರಂಭವಾದ ಈ ಕ್ಯಾಂಪ್ ಜೂನ್ 9ಕ್ಕೆ ಕೊನೆಗೊಳ್ಳಲಿದೆ.

ಮಳೆ ಸಮಯದಲ್ಲಿ ಅಂಬಾಸಡರ್ ಕಾರು ಗ್ರಾಹಕರು ಆರಾಮವಾಗಿ ಪ್ರಯಾಣಿಸಲು ಸಾಧ್ಯವಾಗುವಂತೆ ಕಂಪನಿಯು ಈ ಉಚಿತ ಸೇವೆಯನ್ನು ಆರಂಭಿಸಿದೆ.

ಗ್ರಾಹಕರು ಅಂಬಾಸಡರ್ ಕಾರಿನ ಏರ್ ಕಂಡಿಷನ್, ವಾಹನದ ಸ್ಥಿತಿಗತಿ ಅವಲೋಕನ, ಬ್ಯಾಟರಿ ಮತ್ತು ಎಲೆಕ್ಟ್ರಿಕಲ್ ವಿಭಾಗಗಳನ್ನು ಇತ್ಯಾದಿಗಳನ್ನು ಈ ಉಚಿತ ಕ್ಯಾಂಪಿನಲ್ಲಿ ಪರೀಕ್ಷಿಸಿಕೊಳ್ಳಬಹುದು ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ. ಈ ಉಚಿತ ಚೆಕಪ್ ಕ್ಯಾಂಪಿನಲ್ಲಿ ಲೇಬರ್ ಮತ್ತು ಬಿಡಿಭಾಗ ದರದಲ್ಲಿ ವಿನಾಯಿತಿಯನ್ನು ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಕಂಪನಿಯನ್ನು ಸಂಪರ್ಕಿಸಬಹುದು.

ದೇಶದಲ್ಲಿ ಈಗ ಅಂಬಾಸಡರ್ ಕಾರುಗಳಿಗೆ ಬೇಡಿಕೆ ಕಡಿಮೆಯಾಗಿದೆ. ಕಂಪನಿಯು ಐಕಾನಿಕ್ ಕಾರನ್ನು ಜಾಗತಿಕ ಮಾರುಕಟ್ಟೆಗೆ ರಫ್ತು ಮಾಡುವ ಮೂಲಕ ಬೇಡಿಕೆ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಕಂಪನಿಯು ಇತ್ತೀಚೆಗೆ ಅಂಬಾಸಡರ್ ಕಾರುಗಳನ್ನು ಬಾಂಗ್ಲಾ ದೇಶಕ್ಕೆ ರಫ್ತು ಮಾಡಿತ್ತು.

English summary
Hindustan Motors has announced for a special pre-monsoon check-up camp for its Ambassador cars from June 7 to 9 at its dealerships all over the country.
Story first published: Thursday, June 7, 2012, 15:01 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark