ಪಜೆರೊ ಎಸ್‌ಎಫ್‌ಎಕ್ಸ್, ಲ್ಯಾನ್ಸರ್‌ಗೆ ಬೀಗ ಜಡಿದ ಮಿಟ್ಸುಬಿಸಿ
ನೀವು ಪಜೆರೊ ಎಸ್‌ಎಫ್‌ಎಕ್ಸ್ ಅಥವಾ ಲಾನ್ಸರ್ ಡೀಸೆಲ್ ಆವೃತ್ತಿಗಳನ್ನು ಖರೀದಿಸಲು ಬಯಸಿದ್ದೀರಾ? ಹಾಗಿದ್ದರೆ ನಿಮ್ಮ ಯೋಜನೆಯನ್ನು ತತ್ ಕ್ಷಣದಿಂದಲೇ ಕೈಬಿಡಬೇಕು. ಯಾಕೆಂದರೆ ದೇಶದಲ್ಲಿನ ಪಜೆರೊ ಎಸ್‌ಎಫ್‌ಎಕ್ಸ್ ಹಾಗೂ ಲ್ಯಾನ್ಸರ್ ಡೀಸೆಲ್ ಆವೃತ್ತಿಗಳನ್ನು ಮಿಟ್ಸುಬಿಸಿ ಸ್ಥಗತಿಗೊಳಿಸಿದೆ.
ಪಜೆರೊ ಎಸ್‌ಎಫ್‌ಎಕ್ಸ್ ಪರಿಷ್ಕೃತ ಆವೃತ್ತಿಯಾದ ಪಜೆರೊ ಸ್ಪೋರ್ಟ್ಸ್ ಎಸ್‌ಯುವಿ ಈಗಾಗಲೇ ಮಾರುಕಟ್ಟೆಯನ್ನು ಪ್ರವೇಶಿಸಿದ್ದರಿಂದ ಔಟ್ ಡೇಟಡ್ ಮಾದರಿಯನ್ನು ಬದಿಗಿರಿಸಲಾಗುತ್ತಿದೆ. ಹಾಗಿದ್ದರೂ ಈಗಾಗಲೇ ಡೀಲರ್‌ಶಿಪ್‌ನಲ್ಲಿ ಬುಕ್ಕಿಂಗ್ ಮಾಡಿದ ಕಾರುಗಳನ್ನು ಗ್ರಾಹಕರಿಗೆ ತಲುಪಿಸಲು ವ್ಯವಸ್ಥೆ ಮಾಡಲಾಗಿದೆ.
ದೇಶದಲ್ಲಿ ಹಿಂದೂಸ್ತಾನ್ ಮೋಟಾರ್ಸ್ ಜತೆ ಪಾಲುದಾರಿಕೆ ಹೊಂದಿರುವ ಮಿಟ್ಸುಬಿಸಿ ಕಾರುಗಳನ್ನು ಮಾರಾಟ ಮಾಡಲಾಗುತ್ತಿದೆ. ಈಗಾಗಲೇ ಹಬ್ಬದ ಸಂಭ್ರಮವಿರುವಂತಯೇ ಪಜೆರೊ ಸ್ಪೋರ್ಟ್ಸ್ ಕಾರಿಗೆ ಡಿಸ್ಕೌಂಟ್ ದರಗಳನ್ನು ಬಿಡುಗಡೆ ಮಾಡಲಾಗಿದೆ.
ಮತ್ತೊಂದೆಡೆ ಲ್ಯಾನ್ಸರ್ ಡೀಸೆಲ್ ಮಾದರಿಯ ಪರಿಷ್ಕೃತ ಆವೃತ್ತಿ ಬಿಡುಗಡೆಯಾಗದ ಹೊರತಾಗಿಯೂ ಈ ಸಿ ಸೆಗ್ಮೆಂಟ್ ಕಾರಿನ ಉತ್ಪಾದನೆ ಸ್ಥಗಿತಗೊಳಿಸಲು ಕಂಪನಿ ನಿರ್ಧರಿಸಿದೆ.

ಪಜೆರೊ ಎಸ್‌ಎಫ್‌ಎಕ್ಸ್ ಹಾಗೂ ಲಾನ್ಸರ್ ಡೀಸೆಲ್ ಆವೃತ್ತಿಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲು ಮಿಟ್ಸುಬಿಸಿ ನಿರ್ಧಾರ

ಲ್ಯಾನ್ಸರ್ ಡೀಸೆಲ್ ಆವೃತ್ತಿಗಳಿಗೂ ಬೇಡಿಕೆ ಕುಸಿದಿದೆ.

ಕೆಲವು ತಿಂಗಳುಗಳ ಹಿಂದೆಯಷ್ಟೇ ಪಜೆರೊ ಪರಿಷ್ಕೃತ ಆವೃತ್ತಿಯನ್ನು ಮಿಟ್ಸುಬಿಸಿ ಬಿಡುಗಡೆಗೊಳಿಸಿತ್ತು.

ದೇಶದಲ್ಲಿ ಹಿಂದೂಸ್ತಾನ್ ಮೋಟಾರ್ಸ್ ಜತೆ ಜಪಾನ್ ಕಂಪನಿಯಾದ ಮಿಟ್ಸುಬಿಸಿ ಪಾಲುದಾರಿಕೆಯನ್ನು ಹೊಂದಿದೆ.

ಪರಿಷ್ಕೃತ ಪಜೆರೊ ಆವೃತ್ತಿಯೊಂದಿಗೆ ಹೆಚ್ಚಿನ ಮಾರಾಟ ಗಿಟ್ಟಿಸಿಕೊಳ್ಳುವ ನಿರೀಕ್ಷೆಯನ್ನು ಮಿಟ್ಸುಬಿಸಿ ಹೊಂದಿದೆ.


Click it and Unblock the Notifications








