ಎಐಎಡಿಎಂಕೆ ಜಯಲಲಿತಾ ಕಣ್ಣು ಹ್ಯುಂಡೈ ಮ್ಯಾಲೆ

Hyundai Union Trouble Triples As AIADMK Joins Fray
ಹ್ಯುಂಡೈ ಮೋಟರ್ಸ್ ಇಂಡಿಯಾದ ಚೆನ್ನೈ ಘಟಕಕ್ಕೆ ಮತ್ತಷ್ಟು ಸಮಸ್ಯೆ ಕಾಡಲಿದೆ. ಸದ್ಯ ಆಡಳಿತ ಪಕ್ಷವಾಗಿರುವ ಎಐಎಡಿಎಂಕೆ ಸಂಘಟನೆಯು ಈ ಘಟಕದಲ್ಲಿ ನೂತನ ಕಾರ್ಮಿಕ ಸಂಘಟನೆ ಸ್ಥಾಪಿಸಲು ನಿರ್ಧರಿಸಿದೆ.

ಹ್ಯುಂಡೈ ಘಟಕದಲ್ಲಿ ಈಗಾಗಲೇ ಎರಡು ಕಾರ್ಮಿಕ ಸಂಘಟನೆಗಳಿವೆ. ಇಲ್ಲಿ ಈಗಾಗಲೇ ನೌಕರರ ಪ್ರತಿಭಟನೆ ಆರಂಭವಾಗುವ ಸೂಚನೆಯೂ ದೊರಕಿದೆ. ಇನ್ನೊಂದು ಹೊಸ ಸಂಘಟನೆ ಆಗಮಿಸಿದರೆ ಹ್ಯುಂಡೈ ಕಂಪನಿಗೆ ಇನ್ನಷ್ಟು ಸಮಸ್ಯೆ ಕಾಡುವ ನಿರೀಕ್ಷೆಯಿದೆ.

ಜಯಲಲಿತಾ ನೇತೃತ್ವದ ಎಐಎಡಿಎಂಕೆಯ ಸಂಘಟನೆ ಅಣ್ಣಾ ತೊಲಿಲಾರ್ ಸಂಘಮ್ ಪೆರವಾಯಿ(ಎಟಿಎಸ್ಪಿ) ಹ್ಯುಂಡೈ ಪ್ರವೇಶಿಸಲು ನಿರ್ಧರಿಸಿದೆ. ಹ್ಯುಂಡೈನಲ್ಲಿ ಶೀಘ್ರದಲ್ಲಿ ಹೊಸ ಕಾರ್ಮಿಕ ಸಂಘಟನೆ ಆರಂಭಿಸುವುದಾಗಿ ಎಟಿಎಸ್ಪಿ ಪ್ರಕಟಣೆಯಲ್ಲಿ ತಿಳಿಸಿದೆ.

"ನಾವು ಕೆಲವು ದಿನಗಳ ಹಿಂದೆ ಹ್ಯುಂಡೈ ಫ್ಯಾಕ್ಟರಿ ಹೊರಗಡೆ ನಮ್ಮ ಧ್ವಜವನ್ನು ಹಾಕಿದ್ದೇವೆ. ಅಲ್ಲಿನ ಕೆಲಸಗಾರರು ಅಲ್ಲಿನ ಎರಡು ಕಾರ್ಮಿಕ ಸಂಘಟನೆಗಳಿಂದ ತೃಪ್ತರಾಗದಿದ್ದರೆ ನೂತನ ಸಂಘಟನೆ ಸೇರಬಹುದು. ನಾವು ಕೆಲಸಗಾರರ ಹಕ್ಕುಗಳನ್ನು ರಕ್ಷಿಸಲು ಬದ್ಧರಾಗಿದ್ದೇವೆ" ಎಂದು ಎಟಿಎಸ್ ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಚಿನ್ನಸ್ವಾಮಿ ಹೇಳಿದ್ದಾರೆ.

ಹ್ಯುಂಡೈನಲ್ಲೂ ನೌಕರರ ಮುಷ್ಕರ, ಪ್ರತಿಭಟನೆ, ಹೋರಾಟ ಗರಿಗೆದರುವ ಸೂಚನೆಗಳು ದಟ್ಟವಾಗಿವೆ.

More from DriveSpark

Article Published On: Wednesday, December 14, 2011, 12:07 [IST]
English summary
Hyundai Motors India is set to face fresh union trouble in Chennai after the ruling AIADMK’s trade union wind decided to enter the fray by launching a new workers union in the plant. Hyundai’s plant has two workers unions already and there have been signs of a strike since a fortnight.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+