15ನೇ ದಿನಕ್ಕೆ ಕಾಲಿರಿಸಿದ ಬಜಾಜ್ ಚಕನ್ ಘಟಕ ಮುಷ್ಕರ

ವೇತನ ಪರಿಷ್ಕರಣೆ ಜತೆ ಹಲವು ಬೇಡಿಕೆಗಳನ್ನು ಮುಂದುವರಿಸಿ ಬಜಾಜ್ ಚಕನ್ ಘಟಕದಲ್ಲಿ ನೌಕರರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರ 15ನೇ ದಿನಕ್ಕೆ ಕಾಲಿರಿಸಿದೆ.

ಆದರೆ ಸದ್ಯಕ್ಕಂತೂ ದೇಶದ ಎರಡನೇ ಅತಿದೊಡ್ಡ ಮೋಟಾರ್ ಸೈಕಲ್ ಉತ್ಪಾದಕ ಬಜಾಜ್ ಸಂಸ್ಥೆಯ ಸಮಸ್ಯೆಗಳು ಬಗೆಹರಿಯುವ ಲಕ್ಷ್ಮಣಗಳು ಕಾಣಿಸುತ್ತಿಲ್ಲ. ಯಾಕೆಂದರೆ ನ್ಯಾಯಾಲಯ ಜುಲೈ 16ರಂದು ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ.

ಬಜಾಜ್ ಪುಣೆಯ ಚಕನ್ ಘಟಕದಲ್ಲಿ ನೌಕರರ ಮುಷ್ಕರದಿಂದಾಗಿ ಕೆಟಿಎಂ ಡ್ಯೂಕ್ ಉತ್ಪಾದನೆಗೆ ತೊಡಕುಂಟಾಗಿದೆ. ಇದೇ ಪ್ರದೇಶದಲ್ಲಿ ಟಾಟಾ ಮೋಟಾರ್ಸ್, ಬಜಾಜ್ ಆಂಡ್ ಬಜಾಜ್, ಮರ್ಸಿಡಿಸ್ ಬೆಂಝ್ ಹಾಗೂ ಫೋಕ್ಸ್‌ವ್ಯಾಗನ್ ಸಂಸ್ಥೆಗಳ ಘಟಕಗಳು ಸಹ ನೆಲೆಗೊಂಡಿವೆ.

ಈ ನಡುವೆ 88ರಷ್ಟು ಕಾರ್ಮಿಕ ಸಂಘಟನೆಗಳು ಲೇಬರ್ ಯೂನಿಯನ್ ಕಮಿಷನರ್ ಶೀಘ್ರದಲ್ಲೇ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕೆಂದು ಕೋರಿದೆ. ನೌಕರರು ವೇತನ ಪರಿಷ್ಕರಣೆ ಜತೆಗೆ ಕಂಪನಿಗಳ ಶೇರುಗಳ ಹಂಚಿಕೆ, ವಜಾಗೊಳಿಸಿದ ಕಾರ್ಮಿಕರ ಮರು ಪ್ರವೇಶ ಮುಂತಾದ ಬೇಡಿಕೆಗಳನ್ನು ಮುಂದಿರಿಸಿದ್ದರು.

ಪ್ರಸ್ತುತ ಪ್ರಕರಣವು ಪುಣೆ ಕೈಗಾರಿಕಾ ನ್ಯಾಯಾಲದಲ್ಲಿದೆ. ಅಲ್ಲದೆ ಚಕನ್ ಉತ್ಪಾದನೆಯನ್ನು ಔರಾಂಗಬಾದ್ ಘಟಕಕ್ಕೆ ಸ್ಥಳಾಂತರಿಸಲಾಗಿದೆ. ಆದರೆ ಚಕನ್ ಘಟಕದಲ್ಲಿ ಮಾತ್ರ ನಿರ್ಮಾಣವಾಗುತ್ತಿರುವ ಕೆಟಿಎಂ ರೇಂಜ್ ಬೈಕ್‌ಗಳು ಮುಷ್ಕರದಿಂದಾಗಿ ಉತ್ಪಾದನೆ ನಿಲುಗಡೆಗೊಳ್ಳುವ ಭೀತಿಯಲ್ಲಿದೆ. ಇತ್ತೀಚೆಗಷ್ಟೇ 1.8 ಲಕ್ಷ ರು. ಬೆಳೆಬಾಳುವ ಕೆಟಿಎಂ 390 ಡ್ಯೂಕ್ ಬೈಕನ್ನು ಲಾಂಚ್ ಮಾಡಲಾಗಿತ್ತು. ಇದರ ಕಾಯುವಿಕೆ ಅವಧಿ ಮೂರು ತಿಂಗಳಾಗಿದೆ.

Most Read Articles

Kannada
English summary
Bajaj Auto, the second largest motorcycle manufacturer in the country, is facing a workers strike at their plant in Chakan, Pune. The strike enters it’s 15th day today, and seems to have no end as of now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X