ಗ್ಯಾಸ್ ಟ್ರಬಲ್, ಆಟೋ ಮುಷ್ಕರ; ಬಿಎಂಟಿಸಿಯಿಂದ ಹೆಚ್ಚುವರಿ ಬಸ್ ಸೇವೆ

Written By:

ಆಟೋ ಎಲ್‌ಪಿಜಿ ಬೆಲೆ ಹೆಚ್ಚಳವನ್ನು ವಿರೋಧಿಸಿ ಆಟೋ ಚಾಲಕರು ನಗರದಲ್ಲಿ ಭಾನುವಾರ ಮಧ್ಯರಾತ್ರಿಯಿಂದ ಸೋಮವಾರ ಮಧ್ಯರಾತ್ರಿಯ ವರೆಗೆ 24 ಗಂಟೆಗೆ ಮುಷ್ಕರ ಹಮ್ಮಿಕೊಂಡಿದ್ದಾರೆ.

ವರದಿಗಳ ಪ್ರಕಾರ ಒಂದು ಲಕ್ಷಕ್ಕೂ ಹೆಚ್ಚು ಆಟೋ ರಿಕ್ಷಾಗಳು ಪ್ರತಿಭಟನೆಯಲ್ಲಿ ಭಾಗವಹಿಸಲಿದೆ. ಇದರಿಂದ ಸಾರ್ವಜನಿಕರಿಗೆ ಎದುರಾಗುವ ತೊಂದರೆಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಹೆಚ್ಚುವರಿ ಬಸ್ ಸೇವೆಗಳನ್ನು ರಸ್ತೆಗೆ ಬಿಟ್ಟಿದೆ.

Auto Strike

ಇಂದಿನ ದಿನದಲ್ಲಿ ಸಿಬ್ಬಂದಿಯ ಕೆಲಸ ಅವಧಿಯನ್ನು ವಿಸ್ತರಿಸಲು ಬಿಎಂಟಿಸಿ ನಿರ್ಧರಿಸಿದೆ. ಅಲ್ಲದೆ 3000ದಷ್ಟು ಹೆಚ್ಚುವರಿ ಟ್ರಿಪ್‌ಗಳ ಓಡಾಟ ನಡೆಸಲಿದೆ. ಇದು ಬಿಎಂಟಿಸಿ ಬಸ್ ದಿನದ ಕೂಡಾ ಭಾಗವಾಗಿರಲಿದೆ.

ಜನ ವಿರೋಧಿ ನೀತಿ ಅನುಸರಿಸಿದ್ದ ಕೇಂದ್ರ ಸರಕಾರ ಡಿಸೆಂಬರ್ 31ರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಆಟೋ ಗ್ಯಾಸ್ ದರದಲ್ಲಿ 11.50 ರು.ಗಳ ಏರಿಕೆ ಮಾಡಿತ್ತು. ಇದರ ವಿರುದ್ಧ ಆಟೋ ಚಾಲಕರ ಸಂಘಟನೆಗಳಿಂದ ನಗರದ್ಯಾಂತ ವ್ಯಾಪಕ ಪ್ರತಿಭಟನೆ ಎದುರಾಗುತ್ತಿದೆ.

ಇನ್ನಷ್ಟು ಮಾಹಿತಿ ಹಾಗೂ ಸಹಾಯಕ್ಕಾಗಿ ಸಂಪರ್ಕಿಸಿ '103' ಹಾಗೂ '100'

English summary
Today auto drivers have called-up for a strike. There will be no autos for hire today. Please do not get panic. BMTC are running extra buses. For further help and information call 103 and 100.
Story first published: Monday, January 6, 2014, 10:42 [IST]
Please Wait while comments are loading...

Latest Photos