ಮಹೀಂದ್ರ ಸ್ಯಾಂಗ್ಯೊಂಗ್ ವಾಹನಗಳಿಗೆ ಸುಸ್ವಾಗತ

"ಕಂಪನಿಯ ತಂತ್ರಜ್ಞಾನಗಳನ್ನು ಮತ್ತು ಅನ್ವೇಷಣೆಗಳನ್ನು ಪ್ರದರ್ಶಿಸಲು ದೆಹಲಿ ಆಟೋ ಎಕ್ಸ್ ಪೊ ಸೂಕ್ತ ವೇದಿಕೆ. ನಾವು ಇಲ್ಲಿ ದ್ವಿಚಕ್ರ ವಾಹನದಿಂದ ಟ್ರಕ್ ಗಳವರೆಗೆ ನೂತನ ಅನ್ವೆಷಣೆಗಳನ್ನು ಪ್ರದರ್ಶಿಸಲಿದ್ದೇವೆ. ನಮ್ಮ ಪರಿಸರ ಸ್ನೇಹಿ, ಇಂಧನ ದಕ್ಷತೆಯ ವಾಹನಗಳ ಮೂಲಕ ದೇಶದ ವಾಹನ ಮಾರುಕಟ್ಟೆಯಲ್ಲಿ ಹೊಸ ಭಾಷ್ಯ ಬರೆಯಲಿದ್ದೇವೆ" ಎಂದು ಕಂಪನಿಯ ಅಧ್ಯಕ್ಷರಾದ ಪವನ್ ಗೋಯೆಂಕಾ ಹೇಳಿದ್ದಾರೆ.
"ಗ್ರಾಹಕರು ಕಂಪನಿಯ ಉತ್ಪನ್ನಗಳನ್ನು ಹೆಚ್ಚು ಹೆಚ್ಚು ಇಷ್ಟಪಡುತ್ತಿದ್ದಾರೆ. ಇದಕ್ಕೆ ಮಹೀಂದ್ರ ಎಕ್ಸ್ ಯುವಿ 5ಒಒ, ಸ್ಕಾರ್ಪಿಯೊ, ಬೊಲೆರೊ ಮತ್ತು ಕ್ಷೈಲೊ ಮಾರಾಟವೇ ಪ್ರಮುಖ ಸಾಕ್ಷಿ" ಎಂದು ಗೋಯೆಂಕಾ ಹೇಳಿದ್ದಾರೆ.
ದೇಶದ ಗ್ರಾಹಕರಿಗೆ ವಿಶ್ವದರ್ಜೆಯ ವಾಹನಗಳನ್ನು ಪರಿಚಯಿಸಲು ಕಂಪನಿಯು ಸ್ಯಾನ್ಸೊಂಗ್ ಮೋಟರ್ಸ್ ಸ್ವಾಧೀನ ಪಡಿಸಿಕೊಂಡಿರುವುದಾಗಿ ಅವರು ಹೇಳಿದ್ದಾರೆ. ಕಂಪನಿಯು ರೆಕ್ಷಟನ್ ಮತ್ತು ಕೊರಾಂಡೊ ಇ ವಾಹನಗಳನ್ನು ದೇಶಕ್ಕೆ ಪರಿಚಯಿಸುವ ನಿರೀಕ್ಷೆಯಿದೆ.
ಇಷ್ಟು ಮಾತ್ರವಲ್ಲದೇ ಮಹೀಂದ್ರ ಕಂಪನಿಯು ಭವಿಷ್ಯದ ವಾಹನಗಳನ್ನು ಪ್ರದರ್ಶಿಸಲಿದೆಯಂತೆ. ಮಹೀಂದ್ರ ಎಲೆಕ್ಟ್ರಿಕ್ ವಾಹನ ವಿಭಾಗ ಅಭಿವೃದ್ಧಿಪಡಿಸಿರುವ ರೇವಾ ಎನ್ಎಕ್ಸ್ ಆರ್ ಪ್ರದರ್ಶನದಲ್ಲಿ ಪ್ರಮುಖ ಆಕರ್ಷಣೆಯಾಗಿರುವ ನಿರೀಕ್ಷೆಯಿದೆ. ಇದರೊಂದಿಗೆ ವೆರಿಟೊ ಸೆಡಾನ್ ಕಾರಿನ ಎಲೆಕ್ಟ್ರಿಕ್ ಆವೃತ್ತಿಯನ್ನು ಕೂಡ ಕಂಪನಿ ಪರಿಚಯಿಸಲಿದೆ.


Click it and Unblock the Notifications








