ನೂತನ ಅಗ್ಗದ ಮಹೀಂದ್ರ ಸ್ಕಾರ್ಪಿಯೊ ರಸ್ತೆಗೆ

ಸ್ಕಾರ್ಪಿಯೊ ಎಸ್ಎಲ್ಎಕ್ಸ್ ದರ ಸುಮಾರು 9.17 ಲಕ್ಷ ರು. ಇದು ದೆಹಲಿ ಎಕ್ಸ್ ಶೋರೂಂ ದರವಾಗಿದೆ. ಇದು ನೋಡಲು ಎಲ್ಎಕ್ಸ್ ಆವೃತ್ತಿಯಂತೆ ಕಂಡರೂ ಇದರ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಆದರೆ ತಾಂತ್ರಿಕವಾಗಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ನೂತನ ಸ್ಕಾರ್ಪಿಯೊ ಆವೃತ್ತಿ ಹಳೆಯ 2.2 ಲೀಟರಿನ mHawk CRDe ಟರ್ಬೊ ಎಂಜಿನ್ ಹೊಂದಿದೆ. ಇದು 120 ಅಶ್ವಶಕ್ತಿ ಮತ್ತು 290 ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಎರಡು ವೀಲ್ ಡ್ರೈವ್ ಸ್ಕಾರ್ಪಿಯೊಗಿಂತ ನೂತನ ಫೋರ್ ವೀಲ್ಹ್ ಡ್ರೈವ್ ಸ್ಕಾರ್ಪಿಯೊ ಸುಮಾರು ಒಂದು ಕ್ವಿಂಟಾಲಿನಷ್ಟು ಹೆಚ್ಚು ಭಾರವಿದೆ. ಇದರಿಂದ ಕೊಂಚ ಮೈಲೇಜ್ ಕಡಿಮೆಯಾಗಬಹುದು.
ಕೆಲವು ಸುರಕ್ಷತೆಯ ಫೀಚರುಗಳು ಸೇರಿದಂತೆ ನೂತನ ಸ್ಕಾರ್ಪಿಯೊ ಸ್ಪೋರ್ಟ್ಸ್ ಕಾರಿನಲ್ಲಿ ಹಲವು ಫೀಚರುಗಳನ್ನು ಮಹೀಂದ್ರ ತೆಗೆದುಬಿಟ್ಟಿದೆ. ಎಲ್ಲಕ್ಕಿಂತ ಮುಖ್ಯವಾಗಿ ಏರ್ ಬ್ಯಾಗ್ ಮತ್ತು ಎಬಿಎಸ್ ಸಾಧನಗಳೇ ಮಿಸ್ ಆಗಿವೆ. ಹೀಗಾಗಿ ಇದು ಆಫ್ ರೋಡ್ ಸವಾರಿಗೆ ಸುರಕ್ಷಿತವಲ್ಲ.


Click it and Unblock the Notifications








