ರೇವಾ ಮೈಲೇಜ್: ಪೆಟ್ರೋಲ್ ಕಾರುಗಳಿಗೆ ಷಾಕ್

ನೂತನ ಮಹೀಂದ್ರ ಎನ್ಎಕ್ಸ್ಆರ್ ಕಾರಿನ ಮೈಲೇಜ್ ಪೆಟ್ರೋಲ್ ಕಾರುಗಳ ಇಂಧನ ದಕ್ಷತೆಗಿಂತ ಒಂಬತ್ತು ಪಟ್ಟು ಹೆಚ್ಚಿರಲಿದೆಯಂತೆ. ನೂತನ ಎನ್ಎಕ್ಸ್ಆರ್ ಕಾರು ಒಂದು ಚಾರ್ಜಿಗೆ ಸುಮಾರು 160 ಕಿ.ಮೀ. ಮೈಲೇಜ್ ನೀಡಲಿದೆಯಂತೆ. ಇದರ ಸ್ಥಳಾವಕಾಶ ಕೂಡ ಈಗಿನ ರೇವಾಕ್ಕಿಂತ ಹೆಚ್ಚಿರಲಿದ್ದು, ಹೆಚ್ಚು ಆರಾಮವಾಗಿ ಪ್ರಯಾಣ ಮಾಡಬಹುದಂತೆ. ಈ ಕಾರಿನಲ್ಲಿ ಪ್ರತಿಗಂಟೆಗೆ ಸುಮಾರು 100 ಕಿ.ಮೀ. ಸಾಗಬಹುದು ಎಂದು ಮೂಲಗಳು ಹೇಳಿವೆ.
"ಪೆಟ್ರೋಲ್ ದರ ದುಬಾರಿಯಾಗಿರುವ ಈ ಸಮಯದಲ್ಲಿ ರೆವಾ ನೂತನ ಆವೃತ್ತಿ ಸಮರ್ಥ ಆಯ್ಕೆ. ಇದು ಅಗ್ಗದ ಸಾರಿಗೆ ಮತ್ತು ಅತ್ಯುತ್ತಮ ಮೈಲೇಜ್ ನೀಡುವ ಕಾರಾಗಲಿದೆ" ಎಂದು ಮಹೀಂದ್ರ ರೇವಾ ಕಂಪನಿಯ ತಂತ್ರಜ್ಞಾನ ಮತ್ತು ಕಾರ್ಯತಂತ್ರ ವಿಭಾಗದ ಮುಖ್ಯಸ್ಥರಾದ ಚೇತನ್ ಮೈನಿ ಹೇಳಿದ್ದಾರೆ.
ಮಹೀಂದ್ರ ಎನ್ಎಕ್ಸ್ಆರ್ ಕಾರನ್ನು ಮೊತ್ತಮೊದಲ ಬಾರಿಗೆ ಫ್ರಾಂಕ್ ಫರ್ಟ್ ವಾಹನ ಪ್ರದರ್ಶನದಲ್ಲಿ ಪ್ರದರ್ಶಿಸಲಾಗಿತ್ತು. ಇದೀಗ ಇದು ರಸ್ತೆಗಿಳಿಯಲು ಸಿದ್ಧವಾಗಿದ್ದು, ದೆಹಲಿ ವಾಹನ ಪ್ರದರ್ಶನದಲ್ಲಿ ಈ ಕಾರನ್ನು ನೋಡಬಹುದಾಗಿದೆ. ಈ ಕಾರನ್ನು ವಿನ್ಯಾಸ ಮಾಡಿದ್ದು ಜನಪ್ರಿಯ ವಾಹನ ವಿನ್ಯಾಸಕ ದಿಲೀಪ್ ಚೌಬ್ರಿಯಾ. ಇವರು ಕಾರನ್ನು ಮರುವಿನ್ಯಾಸ ಮಾಡುವುದರಲ್ಲಿ ಹೆಚ್ಚು ಖ್ಯಾತಿ ಪಡೆದಿದ್ದಾರೆ.
ಈಗ ರಸ್ತೆಯಲ್ಲಿರುವ ರೇವಾ ಎನ್ಎಕ್ಸ್ಆರ್ ಮೈಲೇಜ್ ಪೆಟ್ರೋಲ್ ಕಾರುಗಳಿಗಿಂತ ಕಡಿಮೆಯಿದೆ. ಮಹೀಂದ್ರ ರೇವಾ ಈಗ ಒಂದು ರುಪಾಯಿ ಕರೆಂಟ್ ಚಾರ್ಜ್ ಗೆ ಸುಮಾರು 3.2 ಕಿ.ಮೀ. ಮತ್ತು ಮೂರು ರುಪಾಯಿ(1 ಯುನಿಟ್ ಕರೆಂಟ್)ಗೆ ಸುಮಾರು 9.6 ಕಿ.ಮೀ. ಇಂಧನ ದಕ್ಷತೆ ನೀಡುತ್ತದೆ.


Click it and Unblock the Notifications








