ಇನ್ನೋವಾ ಕಾರಿಗಿಂತ ಮಹೀಂದ್ರ XUV ಉತ್ತಮವೇ?

Will The Mahindra XUV 500 Be As Good As Innova?
ಮಹೀಂದ್ರ ಎಕ್ಸ್ ಯುವಿ 5ಒಒ ದೇಶದ ರಸ್ತೆಗಿಳಿದ ನೂತನ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್. ಇದು ಮೊದಲ ನೋಟಕ್ಕೆ ಇಷ್ಟವಾಗುವ ಸ್ಪೋರ್ಟ್ಸ್ ಯುಟಿಲಿಟಿ ಕಾರು. ಆದರೆ ಈ ಕಾರು ದೇಶದ ಅತ್ಯಧಿಕ ಮಾರಾಟದ ಮಲ್ಟಿ ಪರ್ಪೊಸ್ ವೆಹಿಕಲ್ ಇನ್ನೋವಾಕ್ಕೆ ಪೈಪೋಟಿ ನೀಡುವುದೇ? ಯಾವುದು ಉತ್ತಮ?

ನಿಮಗೆ ಅಚ್ಚರಿಯಾದೀತು. ಇವೆರಡು ಕಾರುಗಳ ನಡುವೆ ಹೋಲಿಕೆ ಅಗತ್ಯವಿದೆಯೇ ಎಂದು. ಆದರೆ ನಮ್ಮಲ್ಲಿ ಹೆಚ್ಚು ಜನರು ಇವೆರಡು ಕಾರುಗಳಲ್ಲಿ ಯಾವುದು ಉತ್ತಮವೆಂಬ ಪ್ರಶ್ನೆ ಕೇಳಿದ್ದಾರೆ. ಏನಂತ ಹೇಳಬಹುದು. ಇನ್ನೋವಾ ರಸ್ತೆಗಿಳಿದು ಹಲವು ದಶಕಗಳೇ ಕಳೆದಿದೆ. ಮಹೀಂದ್ರ ಎಕ್ಸ್ ಯುವಿ ರಸ್ತೆಗಿಳಿದು ತಿಂಗಳು ಕಳೆದಿದೆಯಷ್ಟೇ.

ಇನ್ನೋವಾ ಕಾರು ಕಾರು ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಆರಾಮದಾಯಕತೆಯ ಸವಾರಿಗೆ ಸೂಕ್ತವಾಗಿರುವ ಕಾರು. ನೂತನ ಎಕ್ಸ್ ಯುವಿ 500 ಕಾರು ಕೂಡ ಅತ್ಯುತ್ತಮ ಕಾರ್ಯಕ್ಷಮತೆಯ ಕಾರು ಎಂಬ ಭರವಸೆಯನ್ನು ಮಹೀಂದ್ರ ನೀಡಿದೆ. ಇದು ಇನ್ನೋವಾಕ್ಕಿಂತ ಶಕ್ತಿಶಾಲಿ ಕೂಡ ಹೌದು.

ಇನ್ನೋವಾ ಗೆಲುವಿಗೆ ಅದರ ರೈಡ್, ಕಂಪರ್ಟ್ ಮತ್ತು ಸ್ಥಳಾವಕಾಶ ಮಾತ್ರ ಕಾರಣವಲ್ಲ. ಅದರ ತಾಂತ್ರಿಕ ಅಂಶಗಳು ಅದರ ಸಕ್ಸಸ್ ಸ್ಟೋರಿಗೆ ಪ್ರಮುಖ ಕಾರಣವಾಗಿದೆ.

ಟೊಯೊಟಾ ಇನ್ನೋವಾ ಸರ್ವಿಸಸ್ ವೆಚ್ಚ ಕೂಡ ಕಡಿಮೆ ಎಂದು ಅದರ ಓನರ್ ಗಳು ಅಭಿಪ್ರಾಯಪಡುತ್ತಾರೆ. ಆದರೆ ಇನ್ನೊರ್ವ ಇನ್ನೋವಾ ಗ್ರಾಹಕನ ಪ್ರಕಾರ ಈ ಕಾರಿಗೆ ಹೆಚ್ಚು ಇಂಧನ ವೆಚ್ಚವಾಗುತ್ತದೆಯಂತೆ.

ಇನ್ನೋವಾಕ್ಕಿಂತ XUV 500 ಅತ್ಯುತ್ತಮ ಕಾರು ಹೌದೇ ಅಲ್ಲವೇ ಎಂದು ತಿಳಿಯಲು ಇನ್ನಷ್ಟು ಕಾಲ ಕಾಯಬೇಕು. ಯಾಕೆಂದರೆ ಈ ಕಾರು ಸದ್ಯ ಗ್ರಾಹಕರ ಕೈ ಸೇರಿದೆಯಷ್ಟೇ. ಇದರ ಒಲಿತು ಕೆಡುಕು ತಿಳಿಯಲು ಇನ್ನಷ್ಟು ಸಮಯ ಬೇಕು.

XUV ಕಾರು ಜಾಗತಿಕ ಕಾರಾಗಿ ಅಭಿವೃದ್ಧಿಪಡಿಸಲಾಗಿದೆ. ಇಲ್ಲಿ ಕೆಲವು ವಿಷಯಗಳನ್ನು ಕಡೆಗಣಿಸಿರಲೂಬಹುದು. ಒಂದು ವರ್ಷ ಕಳೆದ ನಂತರ ಎಲ್ಲಾ ಸಮಸ್ಯೆಗಳು ಪರಿಹಾರವಾಗಬಹುದು. ಸಮಸ್ಯೆ ತಿಳಿಯಲು ಕೂಡ ಅಷ್ಟು ಸಮಯ ಬೇಕಾದೀತು.

ಏತನ್ಮಧ್ಯೆ ಟೊಯೊಟಾ ಕೂಡ ಪರಿಷ್ಕೃತ ಇನ್ನೋವಾ ಕಾರನ್ನು ಶೀಘ್ರದಲ್ಲಿ ಹೊರತರಲಿದೆ. ಇದರಲ್ಲಿ ತಾಂತ್ರಿಕವಾಗಿ ಯಾವುದೇ ಬದಲಾವಣೆಯಾಗುವ ನಿರೀಕ್ಷೆಯಿಲ್ಲ. ಅಂದರೆ ವಿನ್ಯಾಸ ಸೇರಿದಂತೆ ಕಾಸ್ಮೆಟಿಕ್ ಬದಲಾವಣೆಯಾಗುವ ನಿರೀಕ್ಷೆಯಿದೆ. ಆದರೆ ಕೊಂಚ ಮೆಕಾನಿಕ್ ಆಗಿ ಬದಲಾವಣೆ ಕಂಡು ಮೈಲೇಜ್ ಜಾಸ್ತಿಯಾದರೆ ಚೆನ್ನಾಗಿರುತ್ತಿತ್ತು.

More from DriveSpark

Article Published On: Wednesday, November 9, 2011, 15:36 [IST]
English summary
The Mahindra XUV 500 is the latest Indian built SUV. It has impressed every who has seen it with its looks and those who have driven it truly loved it. But the topic that we are looking at today is how good is it against the likes of the Toyota Innova, by far India's best selling MUV.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+