ಮಲ್ಲಿಕಾ ಕಾರಿನ ಗಾಜು ಪುಡಿ ಮಾಡಿದ್ಯಾಕೆ ಓಬೆರಾಯ್

Mallika Sherawat car windshield smashed
ಮಲ್ಲಿಕಾ ಶೆರಾವತ್ ಅಮೆರಿಕ ಪ್ರವಾಸ ಮುಗಿಸಿ ವಾಪಸ್ ಬಂದದಷ್ಟೇ. ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಲ್ಲಿಗೆ ನಗುವಿನೊಂದಿಗೆ ಹೊರಬಂದರು. ಅವರ ಹಾವಭಾವಗಳನ್ನು ಸೆರೆಹಿಡಿಯುವಲ್ಲಿ ಕ್ಯಾಮರಾ, ವಿಡಿಯೋಗಳು ಮಗ್ನವಾಗಿದ್ದವು.

ತನ್ನ ಕಾರಿನ ಪಕ್ಕಕ್ಕೆ ಬಂದವಳಿಗೆ ಅಚ್ಚರಿ ಕಾದೀತು. ತನ್ನ ದುಬಾರಿ ಕಾರಿನ ಮುಂಭಾಗದ ವೈಂಡ್ ಸ್ಕ್ರೀನ್ ಪುಡಿಪುಡಿ. ಓಹ್ ಗಾಡ್ ನನ್ನ ಕಾರಿಗೆ ಏನಾಯ್ತು ಎಂದು ಕಕ್ಕಾಬಿಕ್ಕಿಯಾಗಿ ಕೇಳಿದರು. ಆಗ ಕಾರಿನ ಪಕ್ಕದಿಂದ ಹೊರಬಂದ ಸಹನಟ ವಿವೇಕ್ ಓಬೆರಾಯ್ ನನ್ನು ನೋಡಿ ಆಕೆಗೆ ಮತ್ತೂ ಅಚ್ಚರಿ.

ಕೈನಲ್ಲಿ ಹೂವಿನ ಬೊಕೆ ಹಿಡಿದುಕೊಂಡು ವಿನೀತ ವಿದ್ಯಾರ್ಥಿಯಂತೆ ವಿವೇಕ್ ಓಬೆರಾಯ್ ಹೇಳಿದ್ದು ಹೀಗೆ... "ಸಾರಿ ಮ್ಯಾಡಮ್, ನಿಮ್ಮ ಕಾರಿನ ವೈಂಡ್ ಸ್ಕ್ರೀನ್ ಗೆ ಏನಾಯ್ತು ಅಂದ್ರೆ.....

ಆಕೆಯ ಮುಖವನ್ನೇ ನೋಡುತ್ತಿದ್ದ ವಿವೇಕ್. ಮಲ್ಲಿಕಾ ಮುಖದಲ್ಲಿ ಕುತೂಹಲ ನೋವು ಹತಾಶೆ ಎದ್ದು ಕಾಣುತ್ತಿತ್ತು. ನನ್ನ ಪ್ರೀತಿಯ ಕಾರಿನ ಕನ್ನಡಿ ಪುಡಿ ಮಾಡಿದೆಯಾ ಅಂತ ಹಲ್ಲು ಮಸೆಯುತ್ತ ಆತನ ಮುಖ ನೋಡುತ್ತಿದ್ದರು. ಕೋಪಗೊಂಡಾಗ ಮಲ್ಲಿಕಾ ಶೆರಾವತ್ ತುಂಬಾ ಕ್ಯೂಟ್ ಆಗಿ ಕಾಣುತ್ತಿದ್ದರು.

ಸಾರಿ ಮ್ಯಾಡಂ ನಿಮ್ಮ ಕಾರಿಗೆ ಏನಾಯ್ತು ಅಂದ್ರೆ.... ಅಂತ ಕಳ್ಳ ನಗೆ ನಕ್ಕ ವಿವೇಕ್ ಓಬೆರಾಯ್ ಆ ಕಾರಿನ ವೈಂಡ್ ಸ್ಕ್ರೀನ್ ಮುಂಭಾಗದಲ್ಲಿದ್ದ ಇಲ್ಯುಷನ್ ತೆಗೆದ. ಆಕೆಯ ಕಾರಿಗೆ ಏನೂ ಆಗಿರಲಿಲ್ಲ. ಕಾರಿನ ಗಾಜು ಪುಡಿಯಾದ ಗ್ರಾಫಿಕ್ಸ್ ವಿತ್ರ ಬಿಡಿಸಿ ಗಾಜಿಗೆ ಅಂಟಿಸಲಾಗಿತ್ತು.

ತನ್ನನ್ನು ಬೆಸ್ತು ಬೀಳಿಸಿದ್ದ ವಿವೇಕ್ ನನ್ನು ಕಂಡು ಆಕೆಗೆ ಕೋಪನೇ ಬಂದಿಲ್ಲವಂತೆ. ವಾಟ್ ಎ ಸರ್ ಪ್ರೈಸ್ ಅಂತ ಉಲಿದಳು ಮಲ್ಲಿಕಾ ಶೆರಾವತ್.

(ಪ್ರತಿದಿನ ಕಾರು ಬೈಕು ಲಾರಿ ಜೀಪು ಸ್ಟೋರಿ ಓದಿ ಬೋರಾದವರಿಗೆ ಮುನ್ನೆ ಮುಂಬೈನಲ್ಲಿ ಮಲ್ಲಿಕಾಳಿಗೆ ವಿವೇಕ್ ಓಬೆರಾಯ್ ನೀಡಿದ ಸ್ವಾಗತದ ಸತ್ಯಘಟನೆ ಆಧರಿತ ಸ್ಟೋರಿ)

ಇದನ್ನು ಓದಿ: ಬಾಲಿವುಡ್ ಬೆಡಗಿಯರ ಫೇವರಿಟ್ ಕಾರು ಲೋಕ

More from DriveSpark

Article Published On: Thursday, December 15, 2011, 17:19 [IST]
English summary
Mallika Sherawat flew in from the US and shocked. Because her car windshield smashed. What happens her car windshield. Read this celebrity car story.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+