ಶೀಘ್ರದಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ಸೆಡಾನ್ ರಸ್ತೆಗೆ

Maruti Suzuki Swift sedan unveiled soon
ಜನಪ್ರಿಯ ಸ್ವಿಫ್ಟ್ ಕಾರಿನ ಸೆಡಾನ್ ಆವೃತ್ತಿಯನ್ನು ಮುಂದಿನ ವರ್ಷದ ಫೆಬ್ರವರಿ ವೇಳೆಗೆ ಪರಿಚಯಿಸಲು ಮಾರುತಿ ಸುಜುಕಿ ಯೋಜಿಸಿದೆ. ಸರಕಾರವು ನಾಲ್ಕು ಮೀಟರಿಗಿಂತ ಕಡಿಮೆ ಉದ್ದದ ಕಾರುಗಳಿಗೆ ವಿಧಿಸುವ ಅಬಕಾರಿ ಸುಂಕ ಲಾಭ ಪಡೆಯಲು ಕಂಪನಿಯು ಸೆಡಾನ್ ಕಾರು ಮಾರುಕಟ್ಟೆಯತ್ತ ಗಮನ ಹರಿಸಿದೆ.

ಸ್ವಿಫ್ಟ್ 3.99 ಹೆಸರಿನಲ್ಲಿ ಸೆಡಾನ್ ಕಾರು ರಸ್ತೆಗಿಳಿಯಲಿದೆಯಂತೆ. ಇದರ ದರ ಕೂಡ ಅಗ್ಗವಾಗಿರುವ ನಿರೀಕ್ಷೆಯಿದೆ. ಈ ಕಾರು ಡಿಜೈರ್ ದರಕ್ಕಿಂತ ಕನಿಷ್ಠ 50 ಸಾವಿರ ರು. ಅಗ್ಗವಾಗಿರುವ ನಿರೀಕ್ಷೆಯನ್ನು ಕಂಪನಿ ವ್ಯಕ್ತಪಡಿಸಿದೆ. ಈ ಕಾರಿನ ಟ್ರಯಲ್ ಉತ್ಪಾದನೆ ಈಗಾಗಲೇ ಆರಂಭವಾಗಿದೆಯೆಂದು ಬಿಸಿನೆಸ್ ಲೈನ್ ವರದಿ ಮಾಡಿದೆ. (ಡಿಜೈರ್ ಖರೀದಿಸುವ ಮುನ್ನ ಓದಿ)

"ಈಗಾಗಲೇ ಡಿಜೈರ್ ಮಾರಾಟ ಅತ್ಯುತ್ತಮವಾಗಿದೆ. ಸ್ವಿಫ್ಟ್ ಕಾರಿಗೆ ಹೊಸ ಬಾಡಿ ಸ್ಟೈಲ್ ಅಳವಡಿಸುವುದರಿಂದ ಇನ್ನಷ್ಟು ಬೇಡಿಕೆ ಪಡೆದುಕೊಳ್ಳುವ ನಿರೀಕ್ಷೆಯಿದೆ" ಎಂದು ವಾಹನ ವಿಶ್ಲೇಷಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಸ್ವಿಫ್ಟ್ 3.99 ಕಾರು ಮಾನೆಸರ್ ಘಟಕದಲ್ಲಿ ಉತ್ಪಾದನೆಯಾಗಲಿದೆಯಂತೆ. ಈ ಘಟಕವು ನೌಕರರ ಪ್ರತಿಭಟನೆಯಿಂದ ಕೆಲವು ತಿಂಗಳ ಹಿಂದೆ ಹಿನ್ನಡೆ ಅನುಭವಿಸಿತ್ತು. ಆದರೆ ಈ ಘಟಕದಲ್ಲಿ ಮುಂದಿನ ತಿಂಗಳಿನಿಂದ ದಿನನಿತ್ಯದ ವಾಹನ ಉತ್ಪಾದನೆ 900 ಯುನಿಟ್ ಗೆ ತಲುಪುವ ನಿರೀಕ್ಷೆಯಿದೆ.

ಡ್ಯೂಯಲ್ ಎಕ್ಸೈಸ್ ಡ್ಯೂಟಿ ಅಥವಾ ಎರಡು ಅಬಕಾರಿ ಸುಂಕ ಲಾಭ ಪಡೆಯಲು ಹೆಚ್ಚಿನ ವಾಹನ ಕಂಪನಿಗಳು ನೂತನ ಕಾರು ಬಾಡಿ ಆವೃತ್ತಿಗಳನ್ನು(ಮುಖ್ಯವಾಗಿ ಸೆಡಾನ್) ಪರಿಚಯಿಸುತ್ತವೆ.

ನಾಲ್ಕು ಮೀಟರಿಗಿಂತ ಕಡಿಮೆ ಉದ್ದವಿರುವ ಕಾರುಗಳಿಗೆ ಶೇಕಡ 10ಕ್ಕಿಂತ ಕಡಿಮೆ ಅಬಕಾರಿ ಸುಂಕವಿದೆ. ಈ ಕಾರುಗಳು 1.2 ಲೀಟರ್ ಪೆಟ್ರೋಲ್ ಎಂಜಿನ್ ಅಥವಾ 1.5 ಲೀಟರ್ ಡೀಸೆಲ್ ಎಂಜಿನ್ ಗಿಂತ ಕಡಿಮೆ ಸಾಮರ್ಥ್ಯ ಹೊಂದಿರಬೇಕಿದೆ. ಇದಕ್ಕಿಂತ ಹೆಚ್ಚಿನ ವಿಶೇಷತೆ ಹೊಂದಿರುವ ಕಾರುಗಳಿಗೆ ಶೇಕಡ 22ರಷ್ಟು ಅಬಕಾರಿ ಸುಂಕ ವಿಧಿಸಲಾಗುತ್ತದೆ.

ಟಾಟಾ ಮೋಟರ್ಸ್ ಕೂಡ ಇದೇ ರೀತಿ ಮಾಡಿತ್ತು. ಇಂಡಿಕಾ/ಇಂಡಿಗೊ ಬಾಡಿ ಉದ್ದ ನಾಲ್ಕು ಮೀಟರ್ ಕಡಿಮೆಯಿದೆ. ಇಂಡಿಕಾ ಹ್ಯಾಚ್, ಇಂಡಿಗೊ ಸೆಡಾನ್, ಇಂಡಿಗೊ ಸಿಎಸ್ ಬಾಡಿ ಗಾತ್ರ ನಾಲ್ಕು ಮೀಟರಿಗಿಂತ ಕಡಿಮೆಯಿದೆ. ಮಹೀಂದ್ರ ವೆರಿಟೊ ಕೂಡ ಇದೇ ಕೆಟಗರಿಯಲ್ಲಿದೆ.(ಕನ್ನಡ ಡ್ರೈವ್ ಸ್ಪಾರ್ಕ್)

More from DriveSpark

Article Published On: Monday, December 12, 2011, 12:58 [IST]
English summary
Maruti Suzuki Swift Sedan variant launch expected on February 2012. Company working desperately to launch a three box sedan. New Swift 3.99 to take advantage of the excise duty slabs for passenger vehicles announced in the 2008-09 Budget.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+