ಮಿಟ್ಸುಬಿಸಿ ಹೊಸ ಪಜೆರೊ ಎಸ್ ಯುವಿ ಶೀಘ್ರದಲ್ಲಿ ರಸ್ತೆಗೆ

2012ರ ಪಜೆರೊ ಆವೃತ್ತಿಯು ಮುಂದಿನ ತಿಂಗಳು ದೆಹಲಿಯಲ್ಲಿ ನಡೆಯಲಿರುವ ವಾಹನ ಪ್ರದರ್ಶನದಲ್ಲಿ ಅನಾವರಣಗೊಳ್ಳುವ ನಿರೀಕ್ಷೆಯಿದೆ. ಆದರೆ ವಾಹನ ಪ್ರದರ್ಶನದಲ್ಲಿ ಈ ಕಾರಿನ ಬುಕ್ಕಿಂಗ್ ಮಾಡಲಾಗುವುದಿಲ್ಲವೆಂದು ಮೂಲಗಳು ಹೇಳಿವೆ.
ಮಿಟ್ಸುಬಿಸಿ ಪಾಲುದಾರ ಕಂಪನಿ ಹಿಂದೂಸ್ತಾನ್ ಮೋಟರ್ಸ್ ಮುಂದಿನ ತಿಂಗಳು ನಡೆಯಲಿರುವ ವಾಹನ ಪ್ರದರ್ಶನದಲ್ಲಿ ಪಾಲ್ಗೊಳ್ಳುವುದಿಲ್ಲವಂತೆ. ಆದರೆ ಮಿಟ್ಸುಬಿಸಿ ನೂತನ ಪಜೆರೊ ಮೂಲಕ ವಾಹನ ಪ್ರದರ್ಶನದಲ್ಲಿ ಗ್ರಾಹಕರನ್ನು ಸೆಳೆಯಲು ಯತ್ನಿಸುವ ನಿರೀಕ್ಷೆಯಿದೆ.
"ಪಜೆರೊ ಮತ್ತು ಪಜೆರೊ ನೂತನ ಆವೃತ್ತಿಯನ್ನು ದೆಹಲಿ ವಾಹನ ಪ್ರದರ್ಶನದಲ್ಲಿ ಪ್ರದರ್ಶಿಸಲು ನಿರ್ಧರಿಸಿದ್ದೇವೆ. ಮಿಟ್ಸುಬಿಸಿ ಥೈಲಾಂಡ್ ಘಟಕದಲ್ಲಿ ಉತ್ಪಾದನೆ ಕುಂಠಿತಗೊಂಡಿರುವುದರಿಂದ ಬುಕ್ಕಿಂಗ್ ಆರಂಭಿಸದಿರಲು ಯೋಚಿಸಿದ್ದೇವೆ" ಎಂದು ಹಿಂದೂಸ್ತಾನ್ ಮೋಟರ್ಸ್ ಎಂಡಿ ಮನೋಜ್ ಝಾ ಹೇಳಿದ್ದಾರೆ.


Click it and Unblock the Notifications








