ಅಬ್ಬಾ..! 15 ಲಕ್ಷುರಿ ಕಾರುಗಳ ಭಯಾನಕ ಅಪಘಾತ!!

ದುಬಾರಿ ಕಾರುಗಳ ಈ ಅಪಘಾತದಲ್ಲಿ ಪುಣ್ಯಕ್ಕೆ ಯಾರೂ ಜೀವ ಕಳೆದುಕೊಂಡಿಲ್ಲ. ಆದರೆ ಎಷ್ಟು ದುಡ್ಡು ನಷ್ಟವಾಗಿರಬಹುದು ಎಂಬ ಖಚಿತ ಲೆಕ್ಕ ಇನ್ನು ಸಿಕ್ಕಿಲ್ಲ. ಪೊಲೀಸರು ಹೇಳುವ ಪ್ರಕಾರ ಈ ಅಪಘಾತದಲ್ಲಿ 8 ಫೆರಾರಿ, ಮೂರು ಮರ್ಸಿಡಿಸ್ ಬೆಂಝ್, ಒಂದು ಲಂಬೊರ್ಗಿನಿ ಡಿಯಾಲೊ ಕಾರು ಕೂಡ ಇತ್ತು. ಈ ಘಟನೆ ಜಪಾನ್ ನೈರುತ್ಯ ಭಾಗದ ಚುಗೊಕು ಹೆದ್ದಾರಿಯಲ್ಲಿ ನಡೆದಿದೆ.
ಇದರಲ್ಲಿ ಹದಿನಾಲ್ಕು ವಾಹನಗಳು(ಜಪಾನಿನ ಸೂಪರ್ ಕಾರು ನಿಸ್ಸಾನ್ ಜಿಟಿ-ಆರ್ ಸ್ಕೈಲೈನ್ ಮತ್ತು ಟೊಯೊಟಾ ಪ್ರೀಯೊಸ್ ಸೇರಿದಂತೆ) ಒಂದೇ ದಿಕ್ಕಿನಲ್ಲಿ ಚಲಿಸುತ್ತಿದ್ದವು. ಒಂದು ಮರ್ಸಿಡಿಸ್ ಸಿಎಲ್600 ಸೂಪರ್ ಕಾರು ವಿರುದ್ಧ ದಿಕ್ಕಿನಿಂದ ಬರುತ್ತಿತ್ತು. ಇವರೆಲ್ಲರಿಗೂ ಸ್ಪೋರ್ಟ್ ಕಾರು ಕ್ರೇಝು. ಒಟ್ಟಾಗಿ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದರು.
ವಾಯು ವೇಗದಲ್ಲಿ ಚಲಿಸುತ್ತಿದ್ದ ಈ ಒಂದು ವಾಹನಕ್ಕೆ ಡಿಕ್ಕಿ ಹೊಡೆದಾಗ ಬೆಂಕಿಪೊಟ್ಟಣಗಳು ಉರುಳುವಂತೆ ಎಲ್ಲಾ ವಾಹನಗಳು ಅಡ್ಡದಿಡ್ಡಿಯಾಗಿ ಡಿಕ್ಕಿಹೊಡೆದಿವೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಈ ಸಂದರ್ಭದಲ್ಲಿ ಉಂಟಾದ ಸದ್ದು ಬೆಚ್ಚಿಬೀಳಿಸುವಂತ್ತಿತ್ತು. ಅಪಘಾತದಲ್ಲಿ ಹೆಚ್ಚಿನ ವಾಹನಗಳಿಗೆ ಹಾನಿಯಾಗಿವೆ.
ಈ ಸೂಪರ್ ಕಾರುಗಳು ಅತ್ಯಧಿಕ ಗುಣಮಟ್ಟದ ಸುರಕ್ಷತೆಯ ಫೀಚರುಗಳನ್ನು ಹೊಂದಿವೆ. ಹೀಗಾಗಿ ಯಾರ ಪ್ರಾಣಕ್ಕೂ ಅಪಾಯವಾಗಿಲ್ಲ. ಒಬ್ಬ ಡ್ರೈವರಿಗೆ ಮಾತ್ರ ಸೀರಿಯಸ್ ಅಂತೆ. ಇದು ವಿಶ್ವದ ದುಬಾರಿ ಕಾರುಗಳ ಮೊದಲ ಸರಣಿ ಅಪಘಾತವೆಂಬ ದಾಖಲೆ ಬರೆದಿದೆ!
ಅಪಘಾತದ ಒಟ್ಟು ಮೌಲ್ಯ ಹಲವು ಮಿಲಿಯನ್ ಪೌಂಡ್ ಎನ್ನಲಾಗಿದೆ. ಇದರಲ್ಲಿ ಹೊಸ ಫೆರಾರಿ 355 ಕಾರಿಗೆ ಹೆಚ್ಚು ಹಾನಿಯಾಗಿದ್ದು, ಇದಕ್ಕೆ ಹಲವು ಕೋಟಿ ವೆಚ್ಚವಾಗಲಿದೆಯಂತೆ. ಉಳಿದಂತೆ ಎಫ್512, ಎಫ್355, ಎಫ್430 ಮತ್ತು ಎಫ್360 ಕಾರುಗಳಿಗೂ ಹಾನಿಯಾಗಿವೆ.
ಸುರಕ್ಷಿತ ಪ್ರಯಾಣಕ್ಕೆ ಬೇಕಾದಷ್ಟು ಟಿಪ್ಸ್ ಗಳು ಇಲ್ಲಿವೆ


Click it and Unblock the Notifications








