ದೆಹಲಿ ವಾಹನ ಪ್ರದರ್ಶನಕ್ಕೆ ದಿನಕ್ಕೆ ಎಷ್ಟು ಜನರು ಬರುತ್ತಾರೆ?

New Delhi Auto Expo 2012
ದೇಶದ ಬೃಹತ್ ವಾಹನ ಪ್ರದರ್ಶನ ದೆಹಲಿಯಲ್ಲಿ ಮುಂದಿನ ತಿಂಗಳು ಆರಂಭವಾಗಲಿದೆ. ಆದರೆ ಇಲ್ಲಿಗೆ ಆಗಮಿಸಲು ದೇಶ ವಿದೇಶದ ಲಕ್ಷ ಲಕ್ಷ ಜನರು ತುದಿಗಾಲಿನಲ್ಲಿ ನಿಂತಿದ್ದಾರೆ. ಆದರೆ ಇಲ್ಲಿ ಬೇಗ ಟಿಕೇಟ್ ಪಡೆದವರು ಅದೃಷ್ಟವಂತರು. ಯಾಕೆಂದರೆ ಪ್ರದರ್ಶನ ಆಯೋಜಕರು ಇಲ್ಲಿಗೆ ದಿನಕ್ಕೆ ಇಂತಿಷ್ಟೇ ಜನರಿಗೆ ಟಿಕೇಟ್ ನೀಡಬೇಕೆಂದು ನಿರ್ಧರಿಸಿಯಾಗಿದೆ.

ಪ್ರಗತಿ ಮೈದಾನದಲ್ಲಿ ನಡೆಯಲಿರುವ ವಾಹನ ಪ್ರದರ್ಶನಕ್ಕೆ ಪ್ರತಿದಿನ ಭೇಟಿ ನೀಡುವ ಜನಮಿತಿಯನ್ನು ಸಂಘಟಕರು ಒಂದು ಲಕ್ಷಕ್ಕೆ ಸೀಮಿತಗೊಳಿಸಿದ್ದಾರೆ. ಹೀಗಾಗಿ ದೆಹಲಿ ವಾಹನ ಪ್ರದರ್ಶನಕ್ಕೆ ಹೋಗಲು ಬಯಸುವರು ಬೇಗ ಟಿಕೇಟ್ ಬುಕ್ ಮಾಡೋದು ಒಳ್ಳೆಯದು. ಸಾರ್ವಜನಿಕ ಪ್ರವೇಶ ಶುಲ್ಕ ಸುಮಾರು 150 ರುಪಾಯಿ.

"ವಾಹನ ಪ್ರದರ್ಶನದ ಮೂಲಸೌಕರ್ಯ ಮುಂತಾದ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿದಿನದ ಜನಮಿತಿಯನ್ನು ಒಂದು ಲಕ್ಷಕ್ಕೆ ಸೀಮಿತಗೊಳಿಸಲಾಗಿದೆ" ಎಂದು ಆಟೋ ಎಕ್ಸ್ ಪೋ 2012 ಆಯೋಜನಾ ಸಮಿತಿ ಚೇರ್ಮೆನ್ ರಾಜೀವ್ ಕೌಲ್ ಹೇಳಿದ್ದಾರೆ.

ಈ ಒಂದು ಲಕ್ಷ ಪ್ರವೇಶಮಿತಿಯಲ್ಲಿ ಸುಮಾರು 70 ಸಾವಿರ ಸಾರ್ವಜನಿಕರು ಆಗಮಿಸಬಹುದು. ಉಳಿದ 30 ಸಾವಿರದಲ್ಲಿ ಪ್ರದರ್ಶಕರು, ಮಾಧ್ಯಮದವರು, ಪೊಲೀಸ್ ಸಿಬ್ಬಂದಿ ಸೇರಿದ್ದಾರೆ. ಈ ವಾಹನ ಪ್ರದರ್ಶನದಲ್ಲಿ 50 ಹೊಸ ವಾಹನಗಳು ಬಿಡುಗಡೆಯಾಗುವುದು ವಿಶೇಷ. ಜೊತೆಗೆ ವಿಶ್ವದ ಪ್ರಮುಖ ಆಕರ್ಷಕ ಕಾರು, ಬೈಕುಗಳು ಇರಲಿವೆ.

More from DriveSpark

Article Published On: Thursday, December 22, 2011, 12:35 [IST]
English summary
Delhi Auto Expo 2012 set one lakh visitors per day limit. The Auto Expo 2012 will be a week-long affair, beginning January 5 in Delhi's Pragati Maidan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+