ಹೊಸ ಫೋರ್ಡ್ ಫಿಯೆಸ್ಟಾ: ಆಟೋಮ್ಯಾಟಿಕ್ ಆವೃತ್ತಿ

ಇಂತಹ ಫೀಚರು ಇರುವ ಕಾರುಗಳು ದೇಶದ ರಸ್ತೆಯಲ್ಲಿ ಅಪರೂಪ. ಸ್ಕೋಡಾ ಲೌರಾ ಮತ್ತು ಫೋಕ್ಸ್ ವ್ಯಾಗನ್ ಜೆಟ್ಟಾ ಇತ್ಯಾದಿ ಪ್ರೀಮಿಯಂ ಸೆಡಾನ್ ಕಾರುಗಳಲ್ಲಿ ಇಂತಹ ಪವರ್ ಶಿಫ್ಟ್ ಆಟೋಮ್ಯಾಟಿಕ್ ಗೇರ್ ಗಳಿವೆ. ಇನ್ನು ಮುಂದೆ ನೂತನ ಫಿಯೆಸ್ಟಾ ಕೂಡ ಆಟೋಮ್ಯಾಟಿಕ್ ಆಯ್ಕೆಯಲ್ಲಿ ದೊರಕಲಿದೆ.
ಪವರ್ ಶಿಫ್ಟ್ ಆಟೋಮ್ಯಾಟಿಕ್ ಗೇರ್ ಬಾಕ್ಸಿನಿಂದಾಗಿ ಫೋರ್ಡ್ ಫಿಯೆಸ್ಟಾ ಹೆಚ್ಚು ಶಕ್ತಿಶಾಲಿ, ಹೆಚ್ಚು ಇಂಧನ ದಕ್ಷತೆ ಮತ್ತು ಆರಾಮದಾಯಕತೆ ಸವಾರಿಗೆ ಸೂಕ್ತವಾಗಿದೆ. ಆದರೆ ಕಾರಿನ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಮ್ಯಾನುಯಲ್ ಗೇರ್ ಕಾರಿಗೂ ಆಟೋಮ್ಯಾಟಿಕ್ ಆವೃತ್ತಿ ಫಿಯೆಸ್ಟಾಕ್ಕೂ ವಿನ್ಯಾಸದಲ್ಲಿ ಯಾವುದೇ ವ್ಯತ್ಯಾಸವಿಲ್ಲ.
ಫೋರ್ಡ್ ಸೆಡಾನ್ ಕಾರಿನ ಕಾರ್ಯಕ್ಷಮತೆ ಹೆಚ್ಚಿಸುವ ಗುರಿಯೊಂದಿಗೆ ಕಂಪನಿಯ ಎಂಜಿನಿಯರ್ ಗಳು ವಿಶ್ವಾಸನೀಯತೆ ಮತ್ತು ಮೈಲೇಜ್ ಹೆಚ್ಚಿಸಲು ಹೆಚ್ಚು ಆದ್ಯತೆ ನೀಡಿದ್ದಾರೆ. ಹೀಗಾಗಿ ಇಂಟಿರಿಯರ್ ಮತ್ತು ಎಕ್ಸ್ ಟೀರಿಯರ್ ಹಳೆಯ ಆವೃತ್ತಿಯಂತೆಯೇ ಇದೆ.
ಪವರ್ ಶಿಫ್ಟ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಅಳವಡಿಸಿರುವುದರಿಂದ ಸಿಟಿ ಟ್ರಾಫಿಕ್ ನಲ್ಲಿ ಫಿಯೆಸ್ಟಾ ಸವಾರಿ ಹೆಚ್ಚು ಆರಾಮದಾಯಕವಾಗಲಿದೆ. ಈ ಕಾರು 1.5 ಲೀಟರ್ ಟಿ-ವಿಸಿಟಿ ಪೆಟ್ರೋಲ್ ಎಂಜಿನ್ ಹೊಂದಿದೆ. ಹಳೆಯ ಮ್ಯಾನುಯಲ್ ಆವೃತ್ತಿಗೆ ಹೋಲಿಸಿದರೆ ಆಟೋಮ್ಯಾಟಿಕ್ ಫಿಯೆಸ್ಟಾ ದರ ಸುಮಾರು 70 ಸಾವಿರ ರು.ನಿಂದ 1 ಲಕ್ಷ ರು.ವರೆಗೆ ಹೆಚ್ಚಾಗಲಿದೆ.


Click it and Unblock the Notifications








