ನಿಸ್ಸಾನ್ ಸನ್ನಿ ಡೀಸೆಲ್ ಬುಕ್ಕಿಂಗ್ ಆರಂಭ, ದರವೆಷ್ಟು?
ಮೈಕ್ರಾದ ವಿ ಪ್ಲಾಟ್ ಫಾರ್ಮ್ ನಿಂದ ಬಂದಿರುವ ಸನ್ನಿ ಕಾರು 1.5 ಲೀಟರ್ ಎಂಜಿನ್ ಹೊಂದಿದೆ. ನೂತನ ಸನ್ನಿ ಡೀಸೆಲ್ ಎಕ್ಸ್ಎಲ್ ಆವೃತ್ತಿ ದರ 7.98 ಲಕ್ಷ ರು. ಮತ್ತು ಎಕ್ಸ್ ವಿ ಆವೃತ್ತಿ ದರ 8.98 ಲಕ್ಷ ರುಪಾಯಿ ಆಗಿದೆ.
ಇದು 1.5 ಲೀಟರಿನ ಕೆ9ಕೆ ಎಂಜಿನ್ ಹೊಂದಿದ್ದು ಪ್ರತಿಲೀಟರಿಗೆ 21.64 ಕಿ.ಮೀ. ಮೈಲೇಜ್ ನೀಡುತ್ತದೆ. ಪೆಟ್ರೋಲ್ ಆವೃತ್ತಿ ಮೈಲೇಜ್ ಪ್ರತಿಲೀಟರಿಗೆ 14 ಕಿ.ಮೀ. ಆಸುಪಾಸಿನಲ್ಲಿದೆ. ಡೀಸೆಲ್ ಎಂಜಿನ್ 86 ಪಿಎಸ್ ಮತ್ತು 200ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಇದು 4 ಸಿಲಿಂಡರ್ ಎಂಜಿನ್ ಮತ್ತು 5 ಸ್ಪೀಡ್ ಮ್ಯಾನುಯಲ್ ಟ್ರಾನ್ಸ್ ಮಿಷನ್ ಹೊಂದಿದೆ.
"ನಿಸ್ಸಾನ್ ತಂತ್ರಜ್ಞಾನದ ನೆರವಿನಿಂದ ನಿಸ್ಸಾನ್ ಸನ್ನಿ ಡೀಸೆಲ್ ಆವೃತ್ತಿಯು ಅತ್ಯಧಿಕ ಕಾರ್ಯಕ್ಷಮತೆ ಮತ್ತು ಇಂಧನ ದಕ್ಷತೆಯನ್ನು ಹೊಂದಿದೆ. ದೇಶದಲ್ಲಿ ಡೀಸೆಲ್ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಡೀಸೆಲ್ ಸನ್ನಿಯನ್ನು ಪರಿಚಯಿಸಿದ್ದೇವೆ" ಎಂದು ನಿಸ್ಸಾನ್ ಮೋಟರ್ ಇಂಡಿಯಾ ಸಿಇಒ ಕಿಮಿನೊಡು ತೊಕುಯಮಾ ಹೇಳಿದ್ದಾರೆ.
ನೂತನ ಕಾರಿನಲ್ಲಿ ಎಬಿಎಸ್, ಇಬಿಡಿ, ಬ್ರೇಕ್ ಅಸಿಸ್ಟ್, ಎಂಜಿನ್ ಇಮೊಬಿಲೈಜರ್, ಏರ್ ಬ್ಯಾಗ್ ಇತ್ಯಾದಿ ಸುರಕ್ಷತೆಯ ಫೀಚರುಗಳಿವೆ. ಸನ್ನಿ ಡೀಸೆಲ್ ಕಾರು ಆರು ಬಣ್ಣಗಳಲ್ಲಿ ದೊರಕುತ್ತದೆ. ಸಂಪೂರ್ಣ ವಿಮರ್ಶೆಗಾಗಿ ನಿಮ್ಮ ಕಣ್ಣು ಕನ್ನಡ ಡ್ರೈವ್ ಸ್ಪಾರ್ಕ್ ಮೇಲಿರಲಿ.


Click it and Unblock the Notifications









