ಬಿಡುಗಡೆಗೆ ಸಜ್ಜುಗೊಂಡಿದೆ ಹೊಸ ತಲೆಮಾರಿನ ನಿಸ್ಸಾನ್ ಸನ್ನಿ ಸೆಡಾನ್ ಕಾರು..!

Written By:

ಜಪಾನ್ ಮೂಲದ ಆಟೋಮೊಬೈಲ್ ಉತ್ಪಾದನಾ ಸಂಸ್ಥೆ ನಿಸ್ಸಾನ್ ಮಧ್ಯಮ ದರ್ಜೆಯ ಹೊಸ ತಲೆಮಾರಿನ ಸೆಡಾನ್ ಕಾರು ಸನ್ನಿಯನ್ನು 2018ರ ಮೊದಲ ತ್ರೈಮಾಸಿಕ ಅವಧಿಗೆ ಬಿಡುಗಡೆಗೊಳಿಸುತ್ತಿದ್ದು, ಹೊಸ ಕಾರಿನ ವೈಶಿಷ್ಟ್ಯತೆಗಳ ಬಗೆಗೆ ಇಲ್ಲಿದೆ ಮಾಹಿತಿ.

ಬಿಡುಗಡೆಗೆ ಸಜ್ಜುಗೊಂಡಿದೆ ಹೊಸ ತಲೆಮಾರಿನ ನಿಸ್ಸಾನ್ ಸನ್ನಿ ಕಾರು.!

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ತಲೆಮಾರಿನ ಸನ್ನಿ ಸೆಡಾನ್ ಕಾರನ್ನು ಬಿಡುಗಡೆ ಮಾಡಲು ಮುಂದಾಗಿರುವ ನಿಸ್ಸಾನ್ ಇಂಡಿಯಾ ಸಂಸ್ಥೆಯು, ಹಿಂದಿನ ಆವೃತ್ತಿಗಳಿಂತಲೂ ಅತ್ಯುತ್ತಮ ಸೆಡಾನ್ ಮಾದರಿಯೊಂದನ್ನು 2018ಕ್ಕೆ ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಬಿಡುಗಡೆಗೆ ಸಜ್ಜುಗೊಂಡಿದೆ ಹೊಸ ತಲೆಮಾರಿನ ನಿಸ್ಸಾನ್ ಸನ್ನಿ ಕಾರು.!

ದೂರದ ಪ್ರಯಾಣಕ್ಕೆ ಅನುಕೂಲಕರವಾಗುವಂತೆ ಸನ್ನಿ ಕಾರಿನ ಒಳವಿನ್ಯಾಸಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದ್ದು, ಮಾರುತಿ ಸುಜುಕಿ ಸಿಯಾಜ್ ಹಾಗೂ ಹೋಂಡಾ ಸಿಟಿ ಸೆಡಾನ್ ಮಾದರಿಗಳಿಗೆ ತೀವ್ರ ಸ್ಪರ್ಧೆ ಒಡ್ಡುವ ನೀರಿಕ್ಷೆಯಲ್ಲಿದೆ.

ಬಿಡುಗಡೆಗೆ ಸಜ್ಜುಗೊಂಡಿದೆ ಹೊಸ ತಲೆಮಾರಿನ ನಿಸ್ಸಾನ್ ಸನ್ನಿ ಕಾರು.!

ಇನ್ನು ಪೆಟ್ರೋಲ್, ಡೀಸಲ್ ವೇರಿಯಂಟ್‌ಗಳಲ್ಲಿ ಸನ್ನಿ ಕಾರು ಅಭಿವೃದ್ಧಿಯಾಗುತ್ತಿದ್ದು, ಈ ಹಿಂದಿನ ಸನ್ನಿ ಮಾದರಿಗಳಾದ ಪೆಟ್ರೋಲ್ ಇಂಜಿನ್ 1,498 ಸಿಸಿ ಸಾಮರ್ಥ್ಯ ಹೊಂದಿದ್ದರೇ ಡೀಸೆಲ್ ಇಂಜಿನ್ 1,461 ಸಿಸಿ ಸಾಮರ್ಥ್ಯ ಹೊಂದಿದ್ದವು. ಆದ್ರೆ ಹೊಸ ಮಾದರಿ ಬಗೆಗೆ ಯಾವುದೇ ನಿಖರ ಮಾಹಿತಿ ಲಭ್ಯವಾಗಿಲ್ಲ.

ಬಿಡುಗಡೆಗೆ ಸಜ್ಜುಗೊಂಡಿದೆ ಹೊಸ ತಲೆಮಾರಿನ ನಿಸ್ಸಾನ್ ಸನ್ನಿ ಕಾರು.!

ಒಂದು ಹಿಂದಿನ ಮಾದರಿಗಳ ಎಂಜಿನ್ ಸಾಮರ್ಥ್ಯ‌ಗಳನ್ನೇ ಮುಂದುವರಿಸಿಕೊಂಡು ವಿನ್ಯಾಸದಲ್ಲಿ ಮಾತ್ರ ಬದಲಾವಣೆ ತಂದಿದ್ದೇ ಆದಲ್ಲಿ ಸದ್ಯದ ಸಮಿ ಸೆಡಾನ್ ಆವೃತ್ತಿಗಳಿಗೆ ತೀವ್ರ ಹೊಡೆತ ಬಿಳುವುದರಲ್ಲಿ ಯಾವುದೇ ಅನುಮಾನವಿಲ್ಲ.

ಬಿಡುಗಡೆಗೆ ಸಜ್ಜುಗೊಂಡಿದೆ ಹೊಸ ತಲೆಮಾರಿನ ನಿಸ್ಸಾನ್ ಸನ್ನಿ ಕಾರು.!

ಆದರೂ ಮಾರುತಿ ಸುಜುಕಿ ಸಿಯಾಜ್ ಮತ್ತು 2017ರ ಹೋಂಡಾ ಸಿಟಿ ಆವೃತ್ತಿಗಳನ್ನು ಹಿಂದಿಕ್ಕುವ ಉದ್ದೇಶದಿಂದಲೇ ನಿಸ್ಸಾನ್ ಸನ್ನಿ ಹೊಸ ತಲೆಮಾರಿನ ಕಾರು ಸಿದ್ಧಗೊಳ್ಳುತ್ತಿದ್ದು, ಬಿಡುಗಡೆ ಮುನ್ನ ಹೊಸ ಕಾರಿನ ಮತ್ತಷ್ಟು ಮಾಹಿತಿ ಲಭ್ಯವಾಗಲಿವೆ.

ಬಿಡುಗಡೆಗೆ ಸಜ್ಜುಗೊಂಡಿದೆ ಹೊಸ ತಲೆಮಾರಿನ ನಿಸ್ಸಾನ್ ಸನ್ನಿ ಕಾರು.!

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಈ ಹಿಂದಿನ ಸೆಡಾನ್ ಮಾದರಿಗಳಿಗೆ ಹೋಲಿಕೆ ಮಾಡಿದರೆ ಸದ್ಯ ಅಭಿವೃದ್ಧಿಯಾಗುತ್ತಿರುವ ನಿಸ್ಸಾನ್ ಸನ್ನಿ ಮಾದರಿಯೂ ಅತ್ಯುತ್ತಮ ಮಾದರಿಯಾಗಿ ಹೊರಹೊಮ್ಮುವ ಸಾಧ್ಯತೆಗಳಿದ್ದು, ಕೈಗೆಟುವ ದರದಲ್ಲಿ ಸನ್ನಿ ಕಾರು ಬಿಡುಗಡೆಯಾಗುವ ನೀರಿಕ್ಷೆಗಳು ಕೂಡಾ ಇವೆ.

English summary
Read in Kannada about New Generation Nissan Sunny India Launch Details Revealed.
Story first published: Thursday, July 13, 2017, 13:12 [IST]
Please Wait while comments are loading...

Latest Photos