ನಿಸ್ಸಾನ್-ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೈತ್ರಿ

ಒಪ್ಪಂದದ ಪ್ರಕಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸದ್ಯದ ಮಾರುಕಟ್ಟೆ ದರಕ್ಕಿಂತ ಕಡಿಮೆಗೆ ಬಡ್ಡಿದರಕ್ಕೆ ನಿಸ್ಸಾನ್ ಗ್ರಾಹಕರಿಗೆ ಹಣಕಾಸು ನೆರವು ನೀಡಲಿದೆ.
ಜಗತ್ತಿನ ಪ್ರಮುಖ ಕಾರು ಕಂಪನಿ ಮತ್ತು ದೇಶದ ಪ್ರಮುಖ ಖಾಸಗಿ ವಲಯದ ಬ್ಯಾಂಕ್ ನಡುವಿನ ಒಪ್ಪಂದದಿಂದ ನಿಸ್ಸಾನ್ ಬ್ರಾಂಡಿನತ್ತ ಹೆಚ್ಚು ಗ್ರಾಹಕರು ಒಲವು ತೋರುವ ನಿರೀಕ್ಷೆಯನ್ನು ನಿಸ್ಸಾನ್ ಇಂಡಿಯಾ ವ್ಯಕ್ತಪಡಿಸಿದೆ.
"ದೇಶದಲ್ಲಿ ಹೆಚ್ಚು ಹೆಚ್ಚು ಜನರನ್ನು ಸೆಳೆಯುವ ಪ್ರಯತ್ನವನ್ನು ನಿಸ್ಸಾನ್ ಮುಂದುವರೆಸಿದೆ. ಗ್ರಾಹಕರು ಎಸ್ ಬಿಐ ಹಣಕಾಸು ನೆರವಿನಿಂದ ನಮ್ಮ ವಿವಿಧ ಕಾರು ಆವೃತ್ತಿಗಳನ್ನು ಗ್ರಾಹಕರು ಆಯ್ಕೆಮಾಡಿಕೊಳ್ಳಬಹುದು" ಎಂದು ಕಂಪನಿಯ ಹಣಕಾಸು ಮುಖ್ಯಸ್ಥ ಸುನಿಲ್ ರೇಖಿ ಹೇಳಿದ್ದಾರೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿಸ್ಸಾನ್ ಗ್ರಾಹಕರಿಗೆ ದೇಶದಲ್ಲಿರುವ ಸುಮಾರು 14 ಸಾವಿರ ಶಾಖೆಗಳ ಮೂಲಕ ಶೇಕಡ 11.25ರಿಂದ ಶೇಕಡ 11.75ರಷ್ಟು ಬಡ್ಡಿದರದಲ್ಲಿ ಸಾಲ ಒದಗಿಸಲಿದೆ. ಇದು ಇತರ ಬ್ಯಾಂಕ್ ಗಳು ಒದಗಿಸುವ ಸಾಲಕ್ಕಿಂತ ಶೇಕಡ 1ರಷ್ಟು ಕಡಿಮೆ ಇರಲಿದೆ.


Click it and Unblock the Notifications








