ಕಾರ್ಪ್ ಬ್ಯಾಂಕ್: ಕಾರು, ಗೃಹ ಸಾಲ ಅಗ್ಗ

ಬೆಂಗಳೂರು, ಆ 31: ಮುಂಬರುವ ಹಬ್ಬದ ಸೀಸನ್ ಕೊಡುಗೆಯಾಗಿ ಗೃಹ ಮತ್ತು ಕಾರು ಸಾಲಗಳ ಮೇಲಿನ ಬಡ್ಡಿದರಗಳನ್ನು ಸೆಪ್ಟೆಂಬರ್ ಒಂದರಿಂದ ಅನ್ವಯವಾಗುವಂತೆ ಕಡಿತಗೊಳಿಸಲು ಕಾರ್ಪೊರೇಷನ್ ಬ್ಯಾಂಕ್ ನಿರ್ಧರಿಸಿದೆ.

ಈ ಎಲ್ಲಾ ಸಾಲಗಳ ಪ್ರೊಸೆಸಿಂಗ್ ಶುಲ್ಕವನ್ನು ಮನ್ನಾ ಮಾಡಲು ಕೂಡ ಬ್ಯಾಂಕ್ ನಿರ್ಧರಿಸಿದೆ. ಸೆ 1ರಿಂದ ಅನ್ವಯವಾಗುವಂತೆ ಸುಮಾರು 50 ಲಕ್ಷ ರು.ವರೆಗಿನ ಗೃಹ ಸಾಲಕ್ಕೆ ಶೇಕಡ 10.50ರಷ್ಟು ಬಡ್ಡಿದರ ವಿಧಿಸಲಾಗುವುದು ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರಾದ ಅಜಯ್ ಕುಮಾರ್ ಹೇಳಿದ್ದಾರೆ.

1 ಕೋಟಿ ರು.ವರೆಗಿನ ಸಾಲಕ್ಕೆ ಶೇ. 10.75, 1 ಕೋಟಿ ರು.ಗಿಂತ ಹೆಚ್ಚು ಸಾಲಕ್ಕೆ ಶೇಕಡ 11ರಷ್ಟು ಬಡ್ಡಿದರ ವಿಧಿಸಲಾಗುವುದು ಎಂದು ಬ್ಯಾಂಕ್ ಹೇಳಿದೆ. ಇಲ್ಲಿವರೆಗೆ ಕಾರ್ಪ್ ಬ್ಯಾಂಕ್ ಗೃಹಸಾಲಕ್ಕೆ ಶೇಕಡ 11.25ರವರೆಗೆ ಬಡ್ಡಿದರ ವಿಧಿಸುತ್ತಿತ್ತು.

ವಾಹನ ಸಾಲ: ಕಾರ್ಪೊರೇಷನ್ ಬ್ಯಾಂಕ್ ವಾಹನ ಸಾಲ ದರವನ್ನೂ ಕಡಿತ ಮಾಡಿದೆ. ಸೆಪ್ಟೆಂಬರ್ 1ರಿಂದ ಸುಮಾರು 7 ವರ್ಷ ಕಾಲಾವಧಿಯ ವಾಹನ ಸಾಲಕ್ಕೆ ಶೇಕಡ 11.75ರಷ್ಟು ಬಡ್ಡಿವಿಧಿಸಲಿದೆ. ಇಲ್ಲಿವರೆಗೆ ಇದು ಶೇಕಡ 12 ಆಗಿತ್ತು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಾಹನ ಸಾಲದ ಮೇಲಿನ ಬಡ್ಡಿದರವು ಆಗಸ್ಟ್ 7ರಿಂದ ಅನ್ವಯವಾಗುವಂತೆ ಶೇಕಡ 0.5ರಷ್ಟು ಕಡಿಮೆ ಮಾಡಿತ್ತು. ಆರ್‌ಬಿಐ ಎಸ್ಎಲ್ಆರ್ ದರ ಕಡಿತ ಮಾಡಿದ ತರುವಾಯ ಬ್ಯಾಂಕುಗಳು ಗೃಹ ಮತ್ತು ವಾಹನ ಸಾಲದ ಮೇಲಿನ ಬಡ್ಡಿದರ ತಗ್ಗಿಸಲು ಆರಂಭಿಸಿವೆ.

More from DriveSpark

Article Published On: Friday, August 31, 2012, 12:14 [IST]
English summary
Corporation Bank decided to slash home, car loan interest rate from September 1 for 3 months period.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+