ದುಡ್ಡಿದ್ರೆ ಕಾರು; ಎಸ್‌ಬಿಐ ಕಾರು ಸಾಲ ವೇತನ ಮಿತಿ ಏರಿಕೆ

Written By:

ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕಿಂಗ್ ಆಗಿರುವ ಎಸ್‌ಬಿಐ, ಕಾರು ಖರೀದಿಗೆ ನೀಡಿ ಬರುತ್ತಿದ್ದ ಸಾಲದ ವೇತನ ಮಿತಿಯನ್ನು ಹೆಚ್ಚಳಗೊಳಿಸಿದ್ದು, ನೂತನ ಕಾರು ಖರೀದಿಗಾರರನ್ನು ನಿರಾಸೆಗೊಳಪಡಿಸಿದೆ.

ಇನ್ನು ನಿಮ್ಮ ವೇತನ ಮಿತಿ ಆರು ಲಕ್ಷ ರು. ಇದ್ದರೆ ಮಾತ್ರ ಕಾರು ಖರೀದಿಗೆ ಬ್ಯಾಂಕ್‌ನಿಂದ ಸಾಲ ದೊರಕಲಿದೆ. ಇದುವರೆಗೆ 2.5 ಲಕ್ಷ ರು. ವರೆಗೆ ವೇತನ ಪಡೆಯುವವರಿಗೆ ವಾಹನ ಸಾಲ ನೀಡಲಾಗುತ್ತಿತ್ತು. ಆದರೆ ಈ ಹೊಸ ನಿಯಮದಿಂದ ಮಧ್ಯಮ ವರ್ಗದ ಜನತೆಯ ಕಾರು ಖರೀದಿ ಕನಸು ಭಗ್ನವಾಗಿದೆ.

ಎಸ್‌ಬಿಐ ವೆಬ್‌ಸೈಟ್‌ನಲ್ಲಿ ಸೂಚಿಸಿರುವಂತೆಯೇ ಪ್ರಸ್ತುತ 10.45 ಬಡ್ಡಿದರದಲ್ಲಿ ಕಾರು ಸಾಲ ನೀಡಲಾಗುತ್ತಿದೆ. ದೇಶದ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿಯ ಅಲ್ಟೊ, ಎ ಸ್ಟಾರ್ ಹಾಗೂ ವ್ಯಾಗನಾರ್‌ಗಳಂತಹ ಬಜೆಟ್ ಕಾರುಗಳಿಗೆ ಸಾಲ ಒದಗಿಸುತ್ತಿದ್ದ ಎಸ್‌ಬಿಐ ತನ್ನ ನಿಯಮಗಳನ್ನು ಬಿಗುಗೊಳಿಸಿರುವುದರಿಂದ ಗ್ರಾಹಕರು ಇತರ ಪರ್ಯಾಯ ವ್ಯವಸ್ಥೆ ಕಂಡುಕೊಳ್ಳುವ ಸಾಧ್ಯತೆಯಿದೆ.

ಒಟ್ಟಿನಲ್ಲಿ 'ದುಡ್ಡಿದ್ದವನೇ ದೊಡ್ಡಪ್ಪ' ಎನ್ನುವ ರೀತಿಯಲ್ಲಿ ಎಸ್‌ಬಿಐ ನೂತನ ಕ್ರಮ ವಾಹನಕೊಳ್ಳಲು ಬಯಸಿದ್ದ ನೂತನ ಗ್ರಾಹಕರಿಗೆ ಆಘಾತವನ್ನುಂಟು ಮಾಡಿದೆ.

English summary
In an attempt to curtail exposure to automobile loans, State Bank of India, the country's largest public sector bank, today tightened the criteria for disbursal of such loans, according to market sources
Story first published: Monday, September 2, 2013, 14:54 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark