ಮಾರುತಿ ಆಯ್ತು, ಹ್ಯುಂಡೈ ನೌಕರರ ಪ್ರತಿಭಟನೆ ಸುರು

Now Its Hyundai's Turn To Face Strikes
ನೌಕರರ ಪ್ರತಿಭಟನೆಯಿಂದ ಮಾರುತಿ ಸುಜುಕಿ ಅನುಭವಿಸಿದ ಕಸಿವಿಸಿ ಇನ್ನೂ ಮರೆಯಾಗಿಲ್ಲ. ಈಗ ಚೆನ್ನೈ ಸಮೀಪದ ಹ್ಯುಂಡೈ ಘಟಕದ ನೌಕರರು ಪ್ರತಿಭಟನೆ ನಡೆಸಲು ಯೋಜಿಸಿದ್ದಾರೆ. ಕೆಲಸದ ಒತ್ತಡ ಹೆಚ್ಚಾಗಿರುವುದು ಅವರ ಪ್ರತಿಭಟನೆಯ ಹಿಂದಿರುವ ಕಾರಣ.

ಕೆಲಸದ ಒತ್ತಡ ಹೆಚ್ಚುಗೊಳಿಸುವ ಮುನ್ನ ಕಂಪನಿಯ ಆಡಳಿತ ಮಂಡಳಿ ಹ್ಯುಂಡೈ ಮೋಟರ್ ಇಂಡಿಯಾ ಉದ್ಯೋಗಿಗಳ ಸಂಘ(ಎಚ್ ಎಂಐಇಯು) ಜೊತೆ ಮಾತುಕತೆ ನಡೆಸದೆ ಇರುವುದು ಕೂಡ ನೌಕರರ ಕೋಪಕ್ಕೆ ಕಾರಣವಾಗಿದೆ.

ಈ ಹಿಂದಿನ ಪ್ರತಿಭಟನೆ ಸಮಯದಲ್ಲಿ ಕೆಲಸ ಕಳೆದುಕೊಂಡ ನೌಕರರನ್ನು ಮರುನೇಮಕ ಮಾಡಿಕೊಳ್ಳುವಂತೆ ಕೂಡ ಕೆಲಸಗಾರರು ಬೇಡಿಕೆಯಿಟ್ಟಿದ್ದಾರೆ.

ಈ ಪ್ರತಿಭಟನೆಯ ಸೂಚನೆ ನಮಗೆ ಮಾರುತಿ ಸುಜುಕಿ ಮಾನೆಸರ್ ಘಟಕವನ್ನು ನೆನಪಿಗೆ ತರುತ್ತಿದೆ. ಅಲ್ಲಿ ನಡೆದ ಮೂರು ಪ್ರತ್ಯೇಕ ಪ್ರತಿಭಟನೆಯಿಂದ ಕಂಪನಿಯ ಕಾರು ಮಾರಾಟಕ್ಕೆ ಹಿನ್ನಡೆಯಾಗಿತ್ತು. ಹ್ಯುಂಡೈ ಮೋಟರ್ಸ್ ತನ್ನ ಉತ್ಪಾದನೆಯಲ್ಲಿ ಶೇಕಡ 40ರಷ್ಟನ್ನು ರಫ್ತು ಮಾಡುತ್ತಿದ್ದು, ಪ್ರತಿಭಟನೆ ನಡೆದರೆ ರಫ್ತು ವಹಿವಾಟು ಹಿನ್ನಡೆಯಾಗಲಿದೆ.

ಆದರೆ ನೌಕರರ ಮುಷ್ಕರ ಸಾಧ್ಯತೆಯನ್ನು ಹ್ಯುಂಡೈ ಮೋಟರ್ ಇಂಡಿಯಾ ನಿರಾಕರಿಸಿದೆ. ಮಾರುತಿ ಸುಜುಕಿ ನೌಕರರ ಪ್ರತಿಭಟನೆಗೂ ಮುನ್ನ ಇಂತದ್ದೇ ವಾತಾವರಣವಿದ್ದದ್ದನ್ನು ಮರೆಯುವ ಹಾಗಿಲ್ಲ. ಕಳೆದ ವರ್ಷ ನೌಕರರ ಎರಡು ದಿನದ ಪ್ರತಿಭಟನೆಯಿಂದ ಹ್ಯುಂಡೈನ 3.800 ಕಾರು ಉತ್ಪಾದನೆಗೆ ಹಿನ್ನಡೆಯಾಗಿತ್ತು. ಈ ವರ್ಷ ಈ ಪರಿಸ್ಥಿತಿ ಮರುಕರಿಸದಿರಲಿ.

More from DriveSpark

Article Published On: Tuesday, November 22, 2011, 10:05 [IST]
English summary
The workers at Hyundai Motors car plant near Chennai are reportedly contemplating to go on a strike. The workers intend to demand a roll back of increased workload. They allege the workers union, the Hyundai Motor India Employees Union (HMIEU) was not consulted by the management when the workload was increased.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+