ಮಾರುತಿ ಘಟಕದಲ್ಲಿ ಗಲಭೆ: 1 ಸಾವು, 100 ಬಂಧನ

ಮಾರುತಿ ಸುಜುಕಿ ಮಾನೆಸರ್ ಘಟಕದಲ್ಲಿ ಮತ್ತೆ ಗಲಭೆ ಆರಂಭವಾಗಿದೆ. ನಿನ್ನೆ(ಬುಧವಾರ) ನೌಕರರು ಮತ್ತು ಆಡಳಿತ ಮಂಡಳಿ ನಡುವೆ ನಡೆದ ಜಗಳ ಆರಂಭವಾಗಿತ್ತು. ಇಂದು ಸುಮಾರು ನೂರು ನೌಕರರನ್ನು ಬಂಧಿಸಲಾಗಿದ್ದು, ಘಟಕಕ್ಕೆ ಬಾಗಿಲು ಹಾಕಲಾಗಿದೆ. ಘಟಕದ ಸುತ್ತಮುತ್ತ ಸುಮಾರು 1 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

ನಿನ್ನೆ ಮಾರುತಿ ಘಟಕದಲ್ಲಿ ನಡೆದ ಗಲಭೆಯಲ್ಲಿ ಒಬ್ಬ ಸಾವನ್ನಪ್ಪಿದ್ದು, 85ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಕೊಲೆ ಯತ್ನ ಮತ್ತು ಆಸ್ತಿ ಹಾನಿ ಅನ್ವಯ ಸುಮಾರು 50 ಜನರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ವರದಿಗಳು ಹೇಳಿವೆ.

ಸುಪರ್ ವೈಸರೊಬ್ಬರು ಕಿರಿಯ ನೌಕರನನ್ನು ಟೀಕಿಸಿದ ಕಾರಣದಿಂದ ನಿನ್ನೆ ಜಗಳ ಆರಂಭವಾಯಿತು. ನೌಕರನ ಬೆಂಬಲಕ್ಕೆ ಉಳಿದ ನೌಕರರು ಆಗಮಿಸಿದರು. ಆ ನೌಕರನು ಸೂಪರ್ ವೈಸರಿಗೆ ಹೊಡದ ಕಾರಣಕ್ಕಾಗಿ, ಕಂಪನಿಯ ಆಡಳಿತ ಮಂಡಳಿಯು ಉದ್ಯೋಗಿಯನ್ನು ಸಸ್ಪೆಂಡ್ ಮಾಡಿತ್ತು. ಇದನ್ನು ವಿರೋಧಿಸಿ ನೌಕರರು ಪ್ರತಿಭಟನೆ ಆರಂಭಿಸಿದ್ದರು.

ಪ್ರತಿಭಟನೆ ನಿರತ ಸಿಬ್ಬಂದಿಗಳು ಘಟಕದ ಆಸುಪಾಸಿನಲ್ಲಿ ಬೆಂಕಿ ಹಚ್ಚಿದರು. ಈಗ ಮಾನೆಸರ್ ಘಟಕದಲ್ಲಿ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ. ಗುರ್ ಗಾಂವ್ ಘಟಕದಲ್ಲಿ ಉತ್ಪಾದನೆ ನಡೆಯುತ್ತಿದೆ.

More from DriveSpark

Article Published On: Thursday, July 19, 2012, 15:34 [IST]
English summary
Workers Clash At Maruti's Manesar Plant 100 arrested. Even as Maruti Suzuki recovers from the damage caused by the spate of strikes at its Manesar plant, new signs of unrest are being reported.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+