ದೇಶದ ರಸ್ತೆಗೆ ಪೊಲಾರಿಷ್ ಎಲೆಕ್ಟ್ರಿಕ್ ಕಾರು

"ಪೊಲಾರಿಷ್ ಇಂಡಸ್ಟ್ರಿಸ್ ಲಿಮಿಟೆಡ್ ದೇಶದ ರಸ್ತೆಯಲ್ಲಿ ವಹಿವಾಟನ್ನು 2016ಕ್ಕೆ 500 ಕೋಟಿ ರೂಪಾಯಿಗೆ ಹೆಚ್ಚಿಸಲು ಯೋಜಿಸಿದೆ. ಶೀಘ್ರದಲ್ಲಿ ಎಲೆಕ್ಟ್ರಿಕ್ ಕಾರನ್ನು ಹೊರತರುವ ಯೋಜನೆಯೂ ಇದೆ. ಆಫ್ ರೋಡ್ ಮತ್ತು ಆನ್ ರೋಡ್ ವಾಹನ ಮಾರುಕಟ್ಟೆಯಲ್ಲಿ ವಹಿವಾಟು ಹೆಚ್ಚಿಸುವುದು ನಮ್ಮ ಉದ್ದೇಶ" ಎಂದು ಪೊಲಾರಿಷ್ ಇಂಡಿಯಾದ ನಿರ್ದೇಶಕ ಪಂಕಜ್ ದುಬೆ ಹೇಳಿದ್ದಾರೆ.
ಪೊಲಾರಿಷ್ ಕಂಪನಿಯು ಈಗಾಗಲೇ ಅಮೆರಿಕ ಮತ್ತು ಯುರೋಪ್ ಮಾರುಕಟ್ಟೆಯಲ್ಲಿ ಜೆಮ್ ಮತ್ತು ಬ್ರೀಝ್ ಎಂಬ ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡುತ್ತಿದೆ. ಕಂಪನಿಯು ಸದ್ಯ ದೇಶದಲ್ಲಿ ಗಣಿಗಾರಿಕೆ ಮತ್ತು ಕಾಡುಮೇಡು ಸುತ್ತುವ ಆಫ್ ರೋಡ್ ವಾಹನಗಳನ್ನು ಮಾರಾಟ ಮಾಡುತ್ತಿದೆ.


Click it and Unblock the Notifications








