ಐಷರ್ ಮತ್ತು ಪೊಲಾರಿಷ್ ಮೈತ್ರಿ, ಅಗ್ಗದ ಬಂಡಿ ಬರುತ್ತಾ?

Eicher Motors, Polaris Industries Joint Venture
ವಾಣಿಜ್ಯ ವಾಹನ, ಟ್ರಾಕ್ಟರ್ ಮತ್ತು ರೆಟ್ರೊ ಮೋಟರ್ ಸೈಕಲ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ದೇಶದ ವ್ಯಾಪಾರಿ ಸಂಸ್ಥೆ ಐಷರ್, ಅಮೆರಿಕದ ಬ್ರಾಂಡ್ ಪೊಲಾರಿಷ್ ಜೊತೆ 50:50 ಮೈತ್ರಿ ಮಾಡಿಕೊಂಡಿದೆ. ಜಂಟಿ ಉದ್ಯಮವು ಎಟಿವಿ, ಬೈಕ್ ಇತ್ಯಾದಿ ಪರ್ಸನಲ್ ವಾಹನಗಳನ್ನು ಪರಿಚಯಿಸುವ ನಿರೀಕ್ಷೆಯಿದೆ.

ಐಷರ್ ಕಂಪನಿಯು ಸದ್ಯ ರಾಯಲ್ ಎನ್ ಫೀಲ್ಡ್ ನಂತಹ ರೆಟ್ರೊ ಮೋಟರ್ ಬೈಕುಗಳನ್ನು ಪರಿಚಯಿಸುತ್ತಿದೆ. ದೇಶದ ಮಾರುಕಟ್ಟೆಗೆ ಮತ್ತು ವಿದೇಶಿ ಮಾರುಕಟ್ಟೆಗೆ ವಾಹನ ಪೂರೈಸಲು ಕಂಪನಿಗಳೆರಡು ನೂತನ ಘಟಕವನ್ನು ದೇಶದಲ್ಲಿ ಸ್ಥಾಪಿಸಲಿದೆ. ಇದಕ್ಕಾಗಿ ಸುಮಾರು 50 ದಶಲಕ್ಷ ಡಾಲರ್ ಹೂಡಿಕೆ ಮಾಡಲು ನಿರ್ಧರಿಸಿವೆ.

ಐಷರ್ ಪೊಲಾರಿಷ್ ಜಂಟಿ ಉದ್ಯಮದ ನೂತನ ಫ್ಯಾಕ್ಟರಿ 2015ರ ವೇಳೆಗೆ ಉತ್ಪಾದನೆಗೆ ಸಿದ್ಧವಾಗುವ ನಿರೀಕ್ಷೆಯಿದೆ. ನೂತನ ಜಂಟಿ ಉದ್ಯಮದಿಂದಾಗಿ ಪೊಲಾರಿಷ್ ಎಂಟಿವಿಎಸ್ ನಂತಹ ವಾಹನಗಳ ದರ ಕಡಿಮೆಯಾಗುವ ನಿರೀಕ್ಷೆಯಿದೆ. ಸದ್ಯ ಕಂಪನಿಯು ದೇಶಕ್ಕೆ ಈ ಬಂಡಿಗಳನ್ನು ರಫ್ತು ಮಾಡುತ್ತಿರುವುದರಿಂದ ಕೊಂಚ ದುಬಾರಿಯಾಗಿ ಪರಿಣಮಿಸಿದೆ.

2012ರ ದೆಹಲಿ ವಾಹನ ಪ್ರದರ್ಶನದಲ್ಲಿ ಪೊಲಾರಿಷ್ ಕಂಪನಿಯು ಹಲವು ಎಟಿವಿ ವಾಹನಗಳನ್ನು ಅನಾವರಣ ಮಾಡಿತ್ತು. ಈ ಆಫ್ ರೋಡ್ ವಾಹನಗಳು ಅಮೆರಿಕದಲ್ಲಿ ಹೆಚ್ಚು ಜನಪ್ರಿಯವಾಗಿವೆ.

Most Read Articles

Kannada
English summary
Eicher Motors Limited and US based ATV maker Polaris Industries signed 50:50 Joint venture agreement. Joint venture will design, develop, manufacture, market and sell personal vehicles for Indian market and Global Market.
Story first published: Thursday, July 26, 2012, 10:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X