ಮಹೀಂದ್ರ ರೇವಾಕ್ಕೆ ಪ್ರತಿಸ್ಪರ್ಧಿ ಕಾರು ಬರುತ್ತಿದೆ!!

"ನಾವು ಜಿಇಎಂ ಮೂಲಕಡ ಹಲವು ಪ್ರಯಾಣಿಕ ಮತ್ತು ಗೂಡ್ಸ್ ವಾಹನಗಳನ್ನು ಹೊರತರಲಿದ್ದೇವೆ. ಕಂಪನಿಯು ಶೀಘ್ರದಲ್ಲಿ ಹಲವು ವಾಹನಗಳನ್ನು ಭಾರತಕ್ಕೆ ಪರಿಚಯಿಸಲಿದ್ದೇವೆ" ಎಂದು ಪೊಲಾರಿಷ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾದ ಪಂಕಜ್ ದುಬೆ ಹೇಳಿದ್ದಾರೆ.
ಜಿಇಎಂ ಮೂರು ಎಲೆಕ್ಟ್ರಿಕ್ ಕಾರು ಮತ್ತು ಮೂರು ವಾಣಿಜ್ಯ ವಾಹನಗಳನ್ನು ಹೊರತರಲಿದೆ. ಈ ಎಲೆಕ್ಟ್ರಿಕ್ ಕಾರುಗಳ ದರ ಸುಮಾರು 3.7 ಲಕ್ಷ ರು.ನಿಂದ 6.72 ಲಕ್ಷ ರು.ವರೆಗಿರುವ ನಿರೀಕ್ಷೆಯಿದೆ. ವಾಣಿಜ್ಯ ವಾಹನ ದರ ಸುಮಾರು 4-6 ಲಕ್ಷ ರು. ಇರುವ ನಿರೀಕ್ಷೆಯಿದೆ.
ಪೊಲಾರಿಷ್ ಇಂಡಿಯಾ ಇತ್ತೀಚೆಗೆ ದೇಶದಲ್ಲಿ ತನ್ನ ಡೀಲರ್ಷಿಪ್ ಕೇಂದ್ರ ಸ್ಥಾಪಿಸಿತ್ತು. ದೇಶದಲ್ಲಿ ಸುಮಾರು 25 ಡೀಲರ್ಷಿಪ್ ನೆಟ್ ವರ್ಕ್ ಸ್ಥಾಪಿಸುವ ಗುರಿ ಕಂಪನಿಗಿದೆಯಂತೆ. ಕಂಪನಿಯ ಆಫ್ ರೋಡ್ ವಾಹನಗಳು ಈಗಾಗಲೇ ಇಲ್ಲಿ ಮಾರಾಟವಾಗುತ್ತಿದೆ.


Click it and Unblock the Notifications








