ಐದು ಹೊಸ ಅವತಾರದಲ್ಲಿ ರೆನಾಲ್ಟ್ ಡಸ್ಟರ್

ಕಂಪನಿಯು ನೂತನ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ಕುರಿತು ಹೆಚ್ಚಿನ ಮಾಹಿತಿ ನೀಡಿಲ್ಲ. ಆದರೆ ಮೂಲಗಳ ಪ್ರಕಾರ ನೂತನ ಡಸ್ಟರ್ ರಸ್ತೆಗಿಳಿಯುವುದಂತು ಗ್ಯಾರಂಟಿ. ನೂತನ ಡಸ್ಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಗಳ ಐದು ಆವೃತ್ತಿಗಳಲ್ಲಿ ದೊರಕಲಿದೆ.
ನೂತನ ರೆನಾಲ್ಟ್ ಡಸ್ಟರ್ 1.6 ಲೀಟರಿನ ಪೆಟ್ರೋಲ್ ಎಂಜಿನ್ ಮತ್ತು 1.5 ಲೀಟರಿನ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ದೊರಕಲಿದೆ. ಇದೇ ಎಂಜಿನ್ ರೆನಾಲ್ಟ್ ಫ್ಲೂಯೆನ್ಸ್ ಮತ್ತು ಮಹೀಂದ್ರ ವೆರಿಟೊ ಕಾರುಗಳಲ್ಲಿವೆ.
ನೂತನ ಡಸ್ಟರ್ ದರವೆಷ್ಟಿರಬಹುದು ಎಂಬ ಕುತೂಹಲವಿರುವುದು ಸಹಜ. ಮೂಲಗಳ ಪ್ರಕಾರ ನೂತನ ಕಾರಿನ ದರ ಸುಮಾರು 7 ಲಕ್ಷ ರುಪಾಯಿಯಿಂದ 11 ಲಕ್ಷ ರು.ವರೆಗಿರಲಿದೆ. ನೂತನ ಡಸ್ಟರ್ ಕಾರು ನೋಡಲು ಲೊಗನಿ(ಈಗಿನ ಹೆಸರು ವೆರಿಟೊ)ನಂತೆ ಇರಲಿದೆ.


Click it and Unblock the Notifications








