ಗುಜರಾತ್ ಮೇಲೆ ರೆನಾಲ್ಟ್ ಕಣ್ಣು ಬಿತ್ತು!!

ಫ್ರಾನ್ಸ್ ಕಾರು ಕಂಪನಿಯ ಭಾರತದ ವಿಭಾಗ ರೆನಾಲ್ಟ್ ಕೂಡ ಗುಜರಾತಿನಲ್ಲಿ ಘಟಕ ನಿರ್ಮಿಸುವ ಕುರಿತು ಯೋಚಿಸುತ್ತಿದೆ ಎಂದು ವರದಿಗಳು ಹೇಳಿವೆ. ರೆನಾಲ್ಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಗುಜರಾತಿನಲ್ಲಿ ಸುಮಾರು 400 ಎಕರೆ ಭೂಮಿ ಪಡೆಯುವ ಕುರಿತು ಸರಕಾರದೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಮೂಲಗಳು ಹೇಳಿವೆ.
ಈ ಘಟಕ 2014ರ ವೇಳೆಗೆ ನಿರ್ಮಾಣವಾಗುವ ನಿರೀಕ್ಷೆಯಿದೆ. ಇದರಲ್ಲಿ ಕಂಪನಿಯು ವರ್ಷಕ್ಕೆ ಸುಮಾರು 7.7 ಲಕ್ಷ ವಾಹನ ಉತ್ಪಾದನೆ ಕೈಗೊಳ್ಳಲಿದೆಯಂತೆ. ಗುಜರಾತಿನಲ್ಲಿ ಈಗಾಗಲೇ ಫ್ರಾನ್ಸಿನ ಕಾರು ಕಂಪನಿ ಪ್ಯೂಜೊ ಘಟಕ ನಿರ್ಮಿಸುತ್ತಿದೆ.
ಫೋರ್ಬಸ್ ಇಂಡಿಯಾ ವರದಿಯ ಪ್ರಕಾರ ರೆನಾಲ್ಟ್ ಮತ್ತು ನಿಸ್ಸಾನ್ ಮೈತ್ರಿ ಕಂಪನಿಯು ಗುಜರಾತಿನಲ್ಲಿ ಸಣ್ಣಕಾರು ಘಟಕ ನಿರ್ಮಿಸುವ ನಿರೀಕ್ಷೆಯಿದೆ. ಈಗಾಗಲೇ ಇವೆರಡು ಪಾಲುದಾರ ಕಂಪನಿಗಳು ಚೆನ್ನೈನಲ್ಲಿ ಘಟಕ ಹೊಂದಿದ್ದು ವರ್ಷಕ್ಕೆ ಸುಮಾರು 2 ಲಕ್ಷ ವಾಹನ ಉತ್ಪಾದಿಸುತ್ತಿವೆ.


Click it and Unblock the Notifications








