ಬ್ಯಾಂಡ್ಮಿಟನ್ ತಾರೆ ಸೈನಾ ನೆಹ್ವಾಲ್ ಹಳೆ ಕಾರುಪುರಾಣ

Posted By:
ಸೈನಾ ನೆಹ್ವಾಲ್ ಹಳೆಯ ಕಾರುಪುರಾಣ
ಸೈನಾ ನೆಹ್ವಾಲ್ ದೇಶದ ಜನಪ್ರಿಯ ಬ್ಯಾಂಡ್ಮಿಟನ್ ತಾರೆ. ಆಕೆಗೂ ಕಾರುಗಳೆಂದರೆ ಇಷ್ಟ. ಹಾಂಕಾಂಗ್ ಸೀರಿಸ್ ಟೈಟಲ್ ಗೆದ್ದಿರುವುದಕ್ಕೆ ಮಾರುತಿ ಸುಜುಕಿ ಸೈನಾಗೆ ಮಾರುತಿ ಎಸ್ಎಕ್ಸ್4 ನೀಡಿ ಆಕೆಯ ಸಂಭ್ರಮ ಹೆಚ್ಚಿಸಿತ್ತು.

ಏಷ್ಯಾ ಟೈಟಲ್ ಗೆದ್ದರೆ ಐಷಾರಾಮಿ ಕಾರು ಆಡಿ ಆರ್8 ಖರೀದಿಸಲು ಆಕೆ ಯೋಜಿಸಿದ್ದರು. ಆದರೆ ಫೈನಲಿನಲ್ಲಿ ಸೋತರು. ಆಕೆಯ ಆರ್8 ಕನಸು ಸದ್ಯಕ್ಕೆ ಭಗ್ನಗೊಂಡಿತ್ತು.

ಮಾರುತಿ ಎಸ್ಎಕ್ಸ್4: ಮಾರುತಿ ಕಂಪನಿಯ ಇತರ ಕಾರುಗಳಿಗೆ ಹೋಲಿಸಿದರೆ ಎಕ್ಸ್ಎಕ್ಸ್4 ಕೊಂಚ ದುಬಾರಿ ಕಾರು. ಇದು ಪ್ರತಿಲೀಟರ್ ಪೆಟ್ರೋಲ್ ಗೆ ಸಿಟಿ ರಸ್ತೆಯಲ್ಲಿ ಹತ್ತು ಕಿ.ಮೀ. ಮತ್ತು ಹೆದ್ದಾರಿಯಲ್ಲಿ 14 ಕಿ.ಮೀ. ಮೈಲೇಜ್ ನೀಡುತ್ತದೆ.

1.6 ಲೀಟರ್ ಇನ್ ಲೈನ್ 4 ಎಂಜಿನ್ ಹೊಂದಿರುವ ಎಸ್ಎಕ್ಸ್4 ಕಾರು 104 ಹಾರ್ಸ್ ಪವರ್ ನೀಡುತ್ತದೆ. ಮಾರುತಿ ಎಸ್ಎಕ್ಸ್4 5 ಸ್ಪೀಡ್ ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಗೇರ್ ಆಯ್ಕೆಯಲ್ಲಿ ದೊರಕುತ್ತಿದೆ.

ಮಾರುತಿ ಎಸ್ಎಕ್ಸ್4 ಬೆಂಗಳೂರು ಎಕ್ಸ್ ಶೋರೂಂ ದರ
ಎಸ್ಎಕ್ಸ್4 ವಿಎಕ್ಸ್ಐ(ಬಿಎಸ್4)  7,24,030.91 ರು.
 ಎಸ್ಎಕ್ಸ್4 ಗ್ರೀನ್ ವಿಎಕ್ಸ್ಐ  7,82,816.92 ರು.
 ಝಡ್ಎಕ್ಸ್ಐ ಮ್ಯಾನುಯಲ್ ಗೇರ್  8,00,203.71 ರು.
 ವಿಡಿಐ  8,14,214.43 ರು.
 ಝಡ್ಎಕ್ಸ್ಐ ಮ್ಯಾನುಯಲ್ ಗೇರ್ ಲೆದರ್  9,01,729.46 ರು.
 ಝಡ್ಎಕ್ಸ್ಐ ಆಟೋಮ್ಯಾಟಿಕ್  8,67,184.75 ರು.
 ಝಡ್ ಡಿಐ  9,03,391.19
English summary
India’s most famous sports personality Saina Nehwal Cars. Saina won Hong Kong Open Series and got Maruti SX4 from Maruti Suzuki India. Maruti Suzuki SX4 Bangalore Price.
Story first published: Wednesday, November 16, 2011, 13:09 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark