ಸ್ಕೋಡಾ ರಾಪಿಡ್ ರಸ್ತೆಗೆ, ದರ 6.75 ಲಕ್ಷ ರು.

ರಾಪಿಡ್ ಮೂರು ಆವೃತ್ತಿಗಳಲ್ಲಿ ದೊರಕುತ್ತಿದೆ. ಬೇಸ್ ಆವೃತ್ತಿ ಹೆಸರು ಆಕ್ಟಿವ್, ಮಧ್ಯಮ ಆವೃತ್ತಿ ಆಂಬಿಷನ್ ಮತ್ತು ಟಾಪ್ ಆವೃತ್ತಿ ಹೆಸರು ಎಲೆಗೆನ್ಸ್ ಎಂದಾಗಿದೆ. ಈ ಮೂರು ಆವೃತ್ತಿಗಳೂ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ನಲ್ಲಿ ದೊರಕುತ್ತಿದೆ.
ಡೀಸೆಲ್ ಆವೃತ್ತಿ ರಾಪಿಡ್ ದರ ಮಾತ್ರ ವೆಂಟೊ ಕಾರಿಗಿಂತಲೂ ತುಂಬಾ ದುಬಾರಿ. ರಾಪಿಡ್ ಆಕ್ಟಿವ್ ಡೀಸೆಲ್ ಕಾರು ದರ 7.95 ಲಕ್ಷ ರು. ಆದರೆ ವೆಂಟೊ ಟ್ರೆಂಡ್ ಲೈನ್ ಡೀಸೆಲ್ ದರ 7.99 ಲಕ್ಷ ರು. ಹೀಗಾಗಿ ವೆಂಟೊ ಕಾರು ಅಗ್ಗ.
ವೆಂಟೊ ಕಾರಿಗೆ ಯಾಕೆ ಹೋಲಿಸೋದು ಎಂಬ ಪ್ರಶ್ನೆ ಸಹಜ. ಯಾಕೆಂದರೆ ವೆಂಟೊ ತಂತ್ರಜ್ಞಾನವನ್ನೇ ರಾಪಿಡ್ ಗೆ ಬಳಸಲಾಗಿದೆ. ಬಾಡಿ ಪ್ಯಾನೆಲ್ ಸೇರಿದಂತೆ ಹೆಚ್ಚಿನ ಬಿಡಿಭಾಗಗಳು ವೆಂಟೊ ಕಾರಿನದ್ದೇ ಆಗಿವೆ. ಈ ಕುರಿತು ಡ್ರೈವ್ ಸ್ಪಾರ್ಕ್ ಈ ಹಿಂದೆಯೇ ವರದಿ ಮಾಡಿತ್ತು.
ರಾಪಿಡ್ ಕಾರು 1.6 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ದೊರಕಲಿದ್ದು 106 ಹಾರ್ಸ್ ಪವರ್ ಮತ್ತು 160 ಎನ್ ಎಂ ಟಾರ್ಕ್ ಪವರ್ ನೀಡಲಿದೆ. ಡೀಸೆಲ್ ಆವೃತ್ತಿ ರಾಪಿಡ್ ಕೂಡ 1.6 ಲೀಟರ್ ಎಂಜಿನ್ ಹೊಂದಿದೆ. ಆದರೆ ಇದು 105 ಹಾರ್ಸ್ ಪವರ್ ಮತ್ತು 253 ಟಾರ್ಕ್ ಪವರ್ ನೀಡುತ್ತದೆ. ಇವೆರಡು ಎಂಜಿನ್ ಗಳು ಈಗಾಗಲೇ ವೆಂಟೊ ಕಾರಿನಲ್ಲಿವೆ.
ಸ್ಕೋಡಾ ರಾಪಿಡ್ ಆಕ್ಟಿವ್ 5 ಸ್ಪೀಡ್ ಮ್ಯಾನುಯಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ದೊರಕುತ್ತಿದೆ. ಗ್ರಾಹಕರು ಆಂಬಿಷನ್ ಮತ್ತು ಎಲಿಜೆನ್ಸ್ ಆವೃತ್ತಿಗಳನ್ನು ಬೇಕಿದ್ದರೆ 6 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಆಯ್ಕೆಯಲ್ಲಿ ಖರೀದಿಸಬಹುದು. ರಾಪಿಡ್ ಬಗ್ಗೆಗಿನ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಕಣ್ಣು ಕನ್ನಡ ಡ್ರೈವ್ ಸ್ಪಾರ್ಕ್ ಮೇಲಿರಲಿ.


Click it and Unblock the Notifications








