ಈಗ ಸ್ಕೋಡಾ ರಾಪಿಡ್ ಖರೀದಿಸಿ 2016ರಲ್ಲಿ ದುಡ್ಡು ಪಾವತಿಸಿ
ಅಂತರ್ಜಾಲದಲ್ಲಿ ಮನೆ ಮಾತಾಗಿರುವ ಸೀಮಿತ ಅವಧಿಯ 'ಗೂಗಲ್ ಆನ್ಲೈನ್ ಶಾಪಿಂಗ್ ಫೆಸ್ಟಿವಲ್' ಜೊತೆ ಕೈ ಜೋಡಿಸಿಕೊಂಡಿರುವ ಜೆಕ್ ಗಣರಾಜ್ಯದ ಪ್ರತಿಷ್ಠಿತ ಸಂಸ್ಥೆಯಾಗಿರುವ ಸ್ಕೋಡಾ ಇಂಡಿಯಾವು ತನ್ನ ಜನಪ್ರಿಯ ರಾಪಿಡ್ ಮಾದರಿಗೆ ವಿಶೇಷ ಆಫರ್ ವೊಂದನ್ನು ನೀಡುತ್ತಿದೆ.
ಇದರಂತೆ ನೀವೀಗ 1.87 ಲಕ್ಷ ರು. ಡೌನ್ ಪೇಮೆಂಟ್ ಮಾಡಿ ಸ್ಕೋಡಾ ರಾಪಿಡ್ ಖರೀದಿಸಿದ್ದಲ್ಲಿ ಎರಡು ವರ್ಷ ಬಿಟ್ಟು ಅಂದರೆ 2016ನೇ ಸಾಲಿನಿಂದ ಬಾಕಿ ಉಳಿದ ದುಡ್ಡನ್ನು ಮಾಸಿಕ ಇಎಂಐ ರೂಪದಲ್ಲಿ ಪಾವತಿಸಬಹುದಾಗಿದೆ. ಈ ಅಭಿಯಾನಕ್ಕೆ ಸಂಸ್ಥೆಯು 'ಬಯ್ ಇನ್ 2014 ಪೇ ಇನ್ 2016' ಎಂದು ಹೆಸರಿಸಿಕೊಂಡಿದೆ.
ಮುಖ್ಯಾಂಶಗಳು - ಸ್ಕೋಡಾ ರಾಪಿಡ್
- ಡೌನ್ ಪೇಮೆಂಟ್ - 1.87 ಲಕ್ಷ ರು.
- 2015ರಲ್ಲಿ ಇಎಂಐ - ರು. 1 ಮಾತ್ರ
- 2016ರಲ್ಲಿ ಇಎಂಐ - ರು. 17563
- ಇತರ ಹಣಕಾಸು ನೆರವು ಸಹ ಲಭ್ಯ

ಅದೇ ಹೊತ್ತಿಗೆ ಮೊದಲು ಬುಕ್ ಮಾಡಿದ 50 ಅದೃಷ್ಟವಂತ ಗ್ರಾಹಕರಿಗೆ ಉಚಿತ ಗ್ರಾಮೀಣ್ ಪೋರ್ಟಬಲ್ ನೇವಿಗೇಷನ್ ಜೊತೆ ರಿವರ್ಸ್ ಕ್ಯಾಮೆರಾ ಗೆಲ್ಲುವ ಅವಕಾಶವೂ ಇರುತ್ತದೆ.
ಗಾರ್ಮಿನ್ ನುವಿ 2568ಎಲ್‌ಎಂ ವೈಶಿಷ್ಟ್ಯಗಳು:
- ಉಚಿತ ಲೈಫ್ ಟೈಮ್ ಮ್ಯಾಪ್,
- ವೈರ್ ಲೆಸ್ ಕ್ಯಾಮೆರಾ,
- 10 ಪ್ರಾದೇಶಿಕ ಭಾಷೆಗಳು,
- ಜೊಮಾಟೊ,
- ಹಿಸ್ಟೋರಿಕಲ್ ಗೈಡ್,
- ಬ್ಲೂಟೂತ್,
- ಸಿಂಗಾಪುರ ಮತ್ತು ಮಲೇಷ್ಯಾ ಮ್ಯಾಪ್ ಉಚಿತ,
- ಪಾರ್ಕಿಂಗ್ ಮಾಹಿತಿ,
- ಇಕೊ ರೂಟ್
ಸ್ಕೋಡಾ ರಾಪಿಡ್ ವೈಶಿಷ್ಟ್ಯ:
- ಹೊಸ 1.5 ಲೀಟರ್ ಟಿಡಿಐ ಎಂಜಿನ್
- 7 ಸ್ಪೀಡ್ ಆಟೋಮ್ಯಾಟಿಕ್ ಡಿಎಸ್‌ಜಿ ಗೇರ್ ಬಾಕ್ಸ್ (ಡೀಸೆಲ್),
- ಎಬಿಎಸ್ ಮತ್ತು ಡ್ಯುಯಲ್ ಏರ್ ಬ್ಯಾಗ್
- ಕ್ಲೈಮಾಟ್ರಾನಿಕ್ ಆಟೋಮ್ಯಾಟಿಕ್ ಎಸಿ,
- ಕ್ರೂಸ್ ಕಂಟ್ರೋಲ್,
- ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ನಲ್ಲಿ ಕಪ್ಪು ಛಾಯೆ, ಫ್ರಂಟ್ ಫಾಗ್ ಲ್ಯಾಂಪ್
ಅಂದ ಹಾಗೆ ಸ್ಕೋಡಾ ರಾಪಿಡ್ ಡೀಸೆಲ್ ಹಾಗೂ ಪೆಟ್ರೋಲ್ ಎಂಜಿನ್‌ನಲ್ಲಿ ಲಭ್ಯವಿರುತ್ತದೆ. ಹಾಗೆಯೇ ಮ್ಯಾನುವಲ್ ಜೊತೆಗೆ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಇದರಲ್ಲಿರಲಿದೆ. ಇದರ ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್ ಪ್ರಾರಂಭಿಕ ದೆಹಲಿ ಎಕ್ಸ್ ಶೋ ರೂಂ ಬೆಲೆಗಳು ಅನುಕ್ರಮವಾಗಿ 7.22 ಹಾಗೂ 8.41 ಲಕ್ಷ ರು.ಗಳಿಷ್ಟಿದೆ.
ವಿ.ಸೂ:
*ಷರತ್ತುಗಳು ಅನ್ವಯ
*ಸ್ಕೋಡಾ ಡೀಲರುಗಳನ್ನು ಸಂಪರ್ಕಿಸಿ
ಸ್ಕೋಡಾ ರಾಪಿಡ್ ಬುಕ್ ಮಾಡಲು ಇಲ್ಲಿ ಕ್ಲಿಕ್ಕಿಸಿ


Click it and Unblock the Notifications








