ನೂತನ ಸ್ಕೋಡಾ ರಾಪಿಡ್ ಸಂಪೂರ್ಣ ವಿಮರ್ಶೆ

Skoda Rapid's Detailed Feature And Price List
ಬಹುನಿರೀಕ್ಷಿತ ಸ್ಕೋಡಾ ರಾಪಿಡ್ ಅನಾವರಣಗೊಂಡಿದೆ. ಇದು ಹೋಂಡಾ ಸಿಟಿ, ಹ್ಯುಂಡೈ ವೆರ್ನಾ, ಫೋರ್ಡ್ ಫಿಯೆಸ್ಟಾ ಮತ್ತು ಫೋಕ್ಸ್ ವ್ಯಾಗನ್ ವೆಂಟೊ ಕಾರುಗಳೊಂದಿಗೆ ಸ್ಪರ್ಧೆ ನಡೆಸುವ ನಿರೀಕ್ಷೆಯಿದೆ. ನಗರದ ರಸ್ತೆಗೆ ಸೂಕ್ತವಾಗುವಂತೆ ರಾಪಿಡ್ ವಿನ್ಯಾಸ ಮಾಡಲಾಗಿದೆ. ಹೆದ್ದಾರಿ ಪ್ರಯಾಣಕ್ಕೆ ಈ ಕಾರು ಮೋಸವಿಲ್ಲ.

ಚಾಲಕ ಸ್ನೇಹಿ ಕಾರಾಗಿ ರಾಪಿಡ್, ಸ್ಕೋಡಾ ಒಕ್ಟಾವಿಯ ಸ್ಥಾನಕ್ಕೆ ಬಂದಿದೆ. ರಾಪಿಡ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರಕುತ್ತದೆ. ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಗೇರ್ ಆಯ್ಕೆ ಕೂಡ ರಾಪಿಡ್ ವಿಶೇಷತೆ.

ರಾಪಿಡ್ ಮೂರು ಆವೃತ್ತಿಗಳಲ್ಲಿ ದೊರಕುತ್ತಿದೆ. ಬೇಸ್ ಆವೃತ್ತಿ ಹೆಸರು ಆಕ್ಟಿವ್, ಮಧ್ಯಮ ಆವೃತ್ತಿ ಆಂಬಿಷನ್ ಮತ್ತು ಟಾಪ್ ಆವೃತ್ತಿ ಹೆಸರು ಎಲೆಗೆನ್ಸ್ ಎಂದಾಗಿದೆ.

ಎರಡು ಪೆಟ್ರೊಲ್, ಒಂದು ಡೀಸೆಲ್ ಎಂಜಿನ್, ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಆವೃತ್ತಿ ಸೇರಿದಂತೆ ಒಟ್ಟು 8 ವಿಧದ ರಾಪಿಡ್ ಕಾರು ಮಾರುಕಟ್ಟೆಗೆ ಬಂದಿದೆ. ಈ ಎಲ್ಲಾ ಆವೃತ್ತಿಗಳು ವೆಂಟೊಗಿಂತ ಕಡಿಮೆ. ಮುಂದೆ ಸಂಪೂರ್ಣ ದರ ಪಟ್ಟಿ ನೀಡಲಾಗಿದೆ. ಇವೆಲ್ಲ ದೆಹಲಿ ಎಕ್ಸ್ ಶೋರೂಂ ದರ. ಬೆಂಗಳೂರು ದರ ಇನ್ನೂ ಪ್ರಕಟವಾಗಿಲ್ಲ.

ಸ್ಕೋಡಾ ರಾಪಿಡ್ ಪೆಟ್ರೋಲ್

ಆಕ್ಟಿವ್ 6.75 ಲಕ್ಷ ರು.
ಆಂಬಿಷನ್ 7.09 ಲಕ್ಷ ರು.
ಎಲೆಗೆನ್ಸ್ 7.99 ಲಕ್ಷ ರು.

ಸ್ಕೋಡಾ ರಾಪಿಡ್ ಪೆಟ್ರೋಲ್ ಆಟೋಮ್ಯಾಟಿಕ್
ಆಂಬಿಷನ್ 8.09 ಲಕ್ಷ ರು.
ಎಲಿಗೆನ್ಸ್ 8.99 ಲಕ್ಷ ರು.

ಸ್ಕೋಡಾ ರಾಪಿಡ್ ಡೀಸೆಲ್

ಆಕ್ಟಿವಾ 7.95 ಲಕ್ಷ ರು.
ಆಂಬಿಷನ್ 8.9 ಲಕ್ಷ ರು.
ಎಲಿಗೆನ್ಸ್ 9.19 ಲಕ್ಷ ರು.

ಮೂರು ಆವೃತ್ತಿಗಳಲ್ಲಿರುವ ದರ ವ್ಯತ್ಯಾಸ ಟ್ರಿಮ್ ಲೆವೆಲ್ ಮತ್ತು ಫೀಚರುಗಳಿಗೆ ಅನುಗುಣವಾಗಿದೆ. ರಾಪಿಡ್ ಮೂರು ಆವೃತ್ತಿಗಳಲ್ಲಿರುವ ವಿಶೇಷತೆಗಳು, ಫೀಚರುಗಳು ಈ ಕೆಳಗಿನಂತೆ ಇವೆ.

ರಾಪಿಡ್ ಆಕ್ಟಿವ್

* ಹದಿನಾಲ್ಕು ಇಂಚಿನ ಸ್ಟೀಲ್ ವೀಲ್
* ಮ್ಯಾನುಯಲ್ ಸೆಂಟ್ರಲ್ ಡೋರ್ ಲಾಕ್
* ಮ್ಯಾನುಯಲ್ ಡಿಮ್ ಇನ್ ಸೈಡ್ ಮಿರರ್
* ಹಿಂಭಾಗ ಮತ್ತು ಮುಂಭಾಗದಲ್ಲಿ ಪವರ್ ವಿಂಡೋ
* ಬಿಸಿಲಿನಿಂದ ರಕ್ಷಿಸಲು ಬಣ್ಣದ ಗ್ಲಾಸ್(ಟಿಂಟೆಡ್ ಗ್ಲಾಸ್)
* ಹಿಂಭಾಗದಲ್ಲಿ ವೈಂಡ್ ಸ್ಕ್ರೀನ್ ಡಿಫಾಗರ್
* ರೇಡಿಯೋ(ಸ್ಪೀಕರ್ ನಾವೇ ಅಳವಡಿಸಿಕೊಳ್ಳಬೇಕಂತೆ).
* ಮ್ಯಾನುಯಲ್ ಏರ್ ಕಂಡಿಷನ್
* ಹಿಂಭಾಗದಲ್ಲಿ ಏಸಿ ವೆಂಟ್ಸ್
* ಬಾಗುವ ಮತ್ತು ಟೆಲಿಸ್ಕೋಪಿಕ್ ಸ್ಟಿಯರಿಂಗ್ ವೀಲ್
* ಪವರ್ ಸ್ಟಿಯರಿಂಗ್
* ಹೊಂದಾಣಿಕೆ ಮಾಡಿಕೊಳ್ಳಬಹುದಾದ ಸೀಟ್ ಬೆಲ್ಟ್
* ಫ್ರಂಟ್ ಸೆಂಟರ್ ಆರ್ಮ್ ರೆಸ್ಟ್
* ಎಂಜಿನ್ ಇಮೊಬಿಲೈಜರ್

ಮಧ್ಯಮ ಶ್ರೇಣಿಯ ರಾಪಿಡ್ ಆಂಬಿಷನ್ ಕಾರಿನಲ್ಲಿ ಆಕ್ಟಿವಾಕ್ಕಿಂತ ಹೆಚ್ಚಿರುವ ಫೀಚರುಗಳು ಈ ಕೆಳಗಿನಂತೆ ಇವೆ.
* ಎಬಿಎಸ್
* ಮಿಣುಗು ದೀಪ ಅಥವಾ ಫಾಗ್ ಲ್ಯಾಂಪ್
* ಮೆಟಾಲಿಕ್ ಬಾಡಿ ಪೇಂಟ್
* ಬಾಡಿ ಬಣ್ಣದ ವಿಂಗ್ ಮಿರರ್ ಮತ್ತು ಡೋರ್ ಹ್ಯಾಂಡಲ್ ಗಳು
* ಡ್ರೈವರ್ ಏರ್ ಬ್ಯಾಗ್
* ಹೊಂದಾಣಿಕೆ ಮಾಡಿಕೊಳ್ಳಬಹುದಾದ ಡ್ರೈವರ್ ಸೀಟು
* ರಿಯರ್ ಸೆಂಟರ್ ಆರ್ಮ್ ರೆಸ್ಟ್
* ರಿಯರ್ ರೀಡಿಂಗ್ ಲ್ಯಾಂಪ್ ಅಥವಾ ಹಿಂಭಾಗದಲ್ಲಿ ಓದಲು ದೀಪ

ರಾಪಿಡ್ ನ ಉನ್ನತ ಶ್ರೇಣಿಯ ಆವೃತ್ತಿ ಎಲಿಗೆನ್ಸ್ ಕಾರಿನಲ್ಲಿ ಇನ್ನೂ ಆಕರ್ಷಕ ಫೀಚರುಗಳಿವೆ. ಅವು ಯಾವುದೆಂದರೆ..
* 15 ಇಂಚಿನ ಅಲಾಯ್ ವೀಲ್
* ವಿಂಗ್ ಮಿರರಿಗೆ ಎಲೆಕ್ಟ್ರಾನಿಕ್ ಹೊಂದಾಣಿಕೆ
* ಸಿಡಿ, ಎಂಪಿ3, ಆಡಿಯೋ ಪ್ಲೇಯರ್, ಆಡಿಯೋ ಸಾಕೆಟ್
* ಮುಂಭಾಗದ ಪ್ರಯಾಣಿಕನಿಗೂ ಏರ್ ಬ್ಯಾಗ್
* ಮುಂಭಾಗ ಮತ್ತು ಹಿಂಭಾಗದಲ್ಲಿ ಸ್ಪೀಕರ್
* ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್
* ಆನ್ ಬೋರ್ಡ್ ಕಂಪ್ಯೂಟರ್

More from DriveSpark

Article Published On: Wednesday, November 16, 2011, 17:13 [IST]
English summary
Skoda Rapid's Detailed Feature And Price List. Now with the two petrol and one diesel engine and the manual and automatic gearbox we have eight variants of the Rapid. Each of these variants are priced just below the closest Vento. Hereis the full price and Feature list.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+