ಟಾಟಾ ಆರಿಯಾಕ್ಕೆ ಮಹೀಂದ್ರ XUV500 ಹೊಡೆತ

ಟಾಟಾ ಆರಿಯಾ ಈಗ 2 ವೀಲ್ಹ್ ಮತ್ತು 4 ವೀಲ್ಹ್ ಡ್ರೈವ್ ಆಯ್ಕೆಯಲ್ಲಿ ದೊರಕುತ್ತಿದೆ. ಶೀಘ್ರದಲ್ಲಿ ಆಟೋಮ್ಯಾಟಿಕ್ ಆವೃತ್ತಿಯಲ್ಲೂ ಇದು ರಸ್ತೆಗಿಳಿಯಲಿದೆ. ಈಗ 2 ವೀಲ್ಹ್ ಡ್ರೈವ್ ಆರಿಯಾ ಆವೃತ್ತಿಗೆ ತುಸು ಬೇಡಿಕೆ ಹೆಚ್ಚಿದೆ. ಕಂಪನಿಯು ಕಳೆದ ತಿಂಗಳು ಒಟ್ಟಾರೆ ಮಾರಾಟದಲ್ಲಿ ಗಮನಾರ್ಹವಾಗಿ ಏರಿಕೆ ದಾಖಲಿಸಿದರೂ ಆರಿಯಾ ಮಾರುವಲ್ಲಿ ಹಿನ್ನಡೆ ಅನುಭವಿಸಿದೆ.
ಇದೇ ಸಮಯದಲ್ಲಿ ರಸ್ತೆಗಿಳಿದ ಮಹೀಂದ್ರ XUV500 ಕಾರು ಹೆಚ್ಚು ಜನರನ್ನು ಸೆಳೆದಿದೆ. ಇದು ಕೂಡ ಟಾಟಾ ಆರಿಯಾ ಮಾರಾಟ ಇಳಿಕೆಗೆ ಕಾರಣವಾಗಿದೆ. ಆದರೆ ಮಹೀಂದ್ರ ಕಾರಿಗೆ ಹೋಲಿಸಿದರೆ ಆರಿಯಾ ಬೃಹತ್ ಗಾತ್ರ ಹೊಂದಿದೆ. ಆದರೂ ಹೆಚ್ಚಿನ ಗ್ರಾಹಕರು ಆರಿಯಾಕ್ಕೆ ಗುಡ್ ಬೈ ಹೇಳಿ ಎಕ್ಸ್ ಯುವಿಗೆ ಹಾಯ್ ಹೇಳುತ್ತಿದ್ದಾರೆ. (ಕನ್ನಡ ಡ್ರೈವ್ ಸ್ಪಾರ್ಕ್)


Click it and Unblock the Notifications








