ಜಾಗತಿಕವಾಗಿ ಟಾಟಾ ಮೋಟರ್ಸ್ ಆಟ ಹೆಚ್ಚಳ

ಇದೇ ಸಮಯದಲ್ಲಿ ಕಂಪನಿಯ ಐಷಾರಾಮಿ ಬ್ರಾಂಡ್ ಜಾಗ್ವಾರ್ ಲ್ಯಾಂಡ್ ರೋವರ್ ಮಾರಾಟ 29,187 ಯುನಿಟ್ ಗೆ ತಲುಪಿದ್ದು, ಕಳೆದ ವರ್ಷದ ನವೆಂಬರ್ ಗಿಂತ ಶೇಕಡ 27ರಷ್ಟು ಏರಿಕೆ ಕಂಡಿದೆ.
ಆದರೆ ಜಾಗ್ವಾರ್ ಬ್ರಾಂಡ್ ಕಾರು ಮಾರಾಟ 5,315 ಯುನಿಟ್ ಗೆ ತಲುಪಿ ಶೇಕಡ 5ರಷ್ಟು ಇಳಿಕೆ ಕಂಡಿದೆ. ಲ್ಯಾಂಡ್ ರೋವರ್ ಮಾರಾಟ 23,868 ಯುನಿಟ್ ಗೆ ತಲುಪಿ ಶೇಕಡ 38ರಷ್ಟು ಹೆಚ್ಚಾಗಿದೆ. ಕಂಪನಿಯ ಒಟ್ಟಾರೆ ಪ್ರಯಾಣಿಕ ವಾಹನ ಮಾರಾಟ 58,304 ಯುನಿಟ್ ಗೆ ತಲುಪಿ ಶೇಕಡ 47ರಷ್ಟು ಏರಿಕೆ ದಾಖಲಿಸಿದೆ.
ಇದೇ ಸಮಯದಲ್ಲಿ ಕಂಪನಿಯು ಜಾಗತಿಕವಾಗಿ 49,724 ವಾಣಿಜ್ಯ ವಾಹನ ಮಾರಾಟ ಮಾಡಿದ್ದು, ಕಳೆದ ವರ್ಷದ ನವೆಂಬರ್ ಗೆ ಹೋಲಿಸಿದರೆ ಶೇಕಡ 24ರಷ್ಟು ಏರಿಕೆ ಕಂಡಿದೆ. ಕಂಪನಿಯು ಜಾಗತಿಕವಾಗಿ ಟಾಟಾ, ಟಾಟಾ ಡ್ಯೋವೊ ಮತ್ತು ಹಿಸ್ಪಾನೊ ಕರೊಸೆರ ವಾಣಿಜ್ಯ ವಾಹನ ಮಾರಾಟ ಮಾಡುತ್ತಿದೆ.


Click it and Unblock the Notifications