ಹೊಸ ವಾಹನಗಳನ್ನು ಪ್ರದರ್ಶಿಸಿದ ಟಾಟಾ ಮೋಟರ್ಸ್

ಟಾಟಾ ಮಾಂಝಾ: ಇದು 66 ಕಿ.ವ್ಯಾಟ್ ನ ಪೆಟ್ರೋಲ್ ಮತ್ತು ಕ್ವಾಡ್ರಾಜೆಟ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರಕುತ್ತಿದೆ. ಇದು ಅತ್ಯಧಿಕ ಗುಣಮಟ್ಟದ ಕಾರೆಂದು ಕಂಪನಿ ಹೇಳಿದೆ.
ಇದರೊಂದಿಗೆ ಕಂಪನಿಯು ಟಾಟಾ ಪ್ರೀಮಾ ಐಷಾರಾಮಿ ಟ್ರಕ್ ಗಳನ್ನು ಕೂಡ ಪ್ರದರ್ಶಿಸಿದೆ. ಇದನ್ನು ಕಂಪನಿ ಗ್ಲೋಬಲ್ ಟ್ರಕ್ ಎಂದು ಕರೆದಿದೆ. ಈ ಪ್ರೀಮಾ ಟ್ರಕ್ ವಿನ್ಯಾಸಕ್ಕಾಗಿ 2009ರಲ್ಲಿ ಕೊರಿಯಾದ ಗ್ರಾಂಡ್ ಪ್ರೈಜ್ ದೊರಕಿತ್ತು.
2012ರ ಆರಂಭದಲ್ಲಿ ಟಾಟಾ ಮೋಟರ್ಸ್ ನೂತನ ಟ್ರಕ್ ಗಳನ್ನು, ಟಿಪ್ಪರ್ ಗಳನ್ನು ದಕ್ಷಿಣಾ ಆಫ್ರಿಕಾದಲ್ಲಿ ಬಿಡುಗಡೆ ಮಾಡಲಿದೆ.
ಜೋಹಾನ್ಸ್ ಬರ್ಗ್ ವಾಹನ ಪ್ರದರ್ಶನದಲ್ಲಿ ಪ್ರದರ್ಶನಗೊಂಡ ವಾಹನಗಳು ಇಂತಿವೆ. ಟಾಟಾ ಪ್ರೀಮಾ ಹಲವು ಆವೃತ್ತಿಗಳು, ಟಾಟಾ ಜಿವಿಡಬ್ಲ್ಯು ಟ್ರಾಕ್ಟರ್, ಪ್ರಯಾಣಿಕ ವಾಹನಗಳಾದ ಟಾಟಾ ವಿಸ್ಟಾ, ಟಾಟಾ ವೆಂಚೂರು, ಟಾಟಾ ಸೂಪರ್ ಏಸ್, ಟಾಟಾ ಕ್ಷೆನನ್ ಸಿಎನ್ ಜಿ ಮುಂತಾದ ವಾಹನಗಳು ಪ್ರದರ್ಶನಗೊಂಡಿವೆ.


Click it and Unblock the Notifications








