ಬೆಂಗಳೂರಿನಲ್ಲಿ ಟಾಟಾ ಮೋಟರ್ಸ್ ಟಿಪ್ಪರ್ ಅನಾವರಣ

ನೂತನ ಟಿಪ್ಪರ್ ಆಳ ಗಣಿಗಾರಿಕೆ ಪ್ರದೇಶಗಳಿಗೆ ಉಪಯೋಗವಾಗುವಂತದ್ದು. ಹೀಗಾಗಿ ಇದು ಬಳ್ಳಾರಿಯಂತಹ ಪ್ರದೇಶಗಳಲ್ಲಿ ಹೆಚ್ಚು ಉಪಯುಕ್ತ. ಕರ್ನಾಟಕದಲ್ಲಿ ಟಿಪ್ಪರ್ ವಹಿವಾಟನ್ನು ಹೆಚ್ಚಿಸಲು ನೂತನ ಟಿಪ್ಪರ್ ಕಂಪನಿಗೆ ನೆರವಾಗಲಿದೆ.
"ಆಳ ಗಣಿಗಾರಿಕೆಗೆ ಬಳಸುವ ಈ ಟಿಪ್ಪರ್ ವಾಣಿಜ್ಯ ಮಾರಾಟಕ್ಕೆ ಮುಂದಿನ ವರ್ಷ ದೊರಕಲಿದೆ" ಎಂದು ಟಾಟಾ ಮೋಟರ್ಸ್ ವಾಣಿಜ್ಯ ವಾಹನ ವಿಭಾಗದ ಅಧ್ಯಕ್ಷ ರವಿ ಪಿಶರೊಡಿ ಹೇಳಿದ್ದಾರೆ.
ಕಂಪನಿಯ ಟ್ರಕ್ ವ್ಯಾಪಾರದಲ್ಲಿ ಟಿಪ್ಪರ್ ಸೆಗ್ಮೆಂಟಿನ ಕೊಡುಗೆ ಶೇಕಡ 25ರಿಂದ ಶೇಕಡ 30ರಷ್ಟಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಟಿಪ್ಪರ್ ಮಾರಾಟ ಶೇಕಡ 45ರಿಂದ ಶೇಕಡ 50ರಷ್ಟು ಏರಿಕೆ ಕಂಡಿದೆ. (ಕನ್ನಡ ಡ್ರೈವ್ ಸ್ಪಾರ್ಕ್ )


Click it and Unblock the Notifications








