ಟಾಟಾ ಮಾಂಝ್ ಪೆಟ್ರೋಲ್, ದರ 4.99 ಲಕ್ಷ ರು.

ಇಂಡಿಗೊ ಮಾಂಝಾ ಬೇಸ್ ಪೆಟ್ರೋಲ್ ಆವೃತ್ತಿ ಅಕ್ವಾ ದರ ಈಗ 4,99,053 ರುಪಾಯಿ. ಅಂದರೆ ಒರಿಜಿನಲ್ ಎಕ್ಸ್ ಶೋರೂಂ ದರಕ್ಕಿಂತ 32 ಸಾವಿರ ರು. ಕಡಿಮೆಯಾಗಿದೆ. ಇದರೊಂದಿಗೆ ಕಂಪನಿಯು ಮಾಂಝ್ ಡೀಸೆಲ್ ಕಾರಿನ ದರವನ್ನು ಕಡಿಮೆ ಮಾಡಿದೆ.
ಟಾಟಾ ಮಾಂಝಾ ಡೀಸೆಲ್ ಎಕ್ಸ್ ಶೋರೂಂ ದರ ಈಗ 5,73,130 ಲಕ್ಷ ರು.ಗೆ ತಲುಪಿದೆ. ಅಂದರೆ 34 ಸಾವಿರ ರು. ಕಡಿಮೆಯಾಗಿದೆ. ಇದಕ್ಕೂ ಮೊದಲು ಮಾಂಝಾ ಡೀಸೆಲ್ ದರ 6,07,130 ರು. ಆಗಿತ್ತು.
ಮಾಂಝಾ ಔರಾ ಮತ್ತು ಎಲನ್ ದರ ಕೂಡ ಕಡಿಮೆಯಾಗಿದೆ. ಅಂದರೆ ಮಾಂಝಾ ಔರಾ ಡೀಸೆಲ್ ಕಾರಿನ ಎಕ್ಸ್ ಶೋರೂಂ ದರ 6,57,505 ರು.ಗೆ ತಲುಪಿದೆ. ಟಾಪ್ ಎಂಡ್ ಆವೃತ್ತಿ ಎಲನ್ ಆವೃತ್ತಿ ದರ 7,19,191 ರು. ಆಗಿದೆ.
ಟಾಟಾ ಮೋಟರ್ಸ್ ಕಾರು ದರ ಇಳಿಕೆಯಲ್ಲಿ ಆಶ್ಚರ್ಯ ಪಡುವಂತದ್ದೇನಿಲ್ಲ. ಯಾಕೆಂದರೆ ಕಂಪನಿಯ ವಾಹನ ಮಾರಾಟ ಕಳೆದ ಎರಡು ತಿಂಗಳಿನಿಂದ ಇಳಿಕೆ ಕಾಣುತ್ತಿದೆ. ಮಾರಾಟ ಹೆಚ್ಚಿಸಿಕೊಳ್ಳಲು ದರ ಕಡಿಮೆ ಮಾಡುವುದು ಕಂಪನಿಗೆ ಅನಿವಾರ್ಯವೂ ಆಗಿತ್ತು.


Click it and Unblock the Notifications








