ಟಾಟಾ ಕಾರ್ ದರ ಸುಮಾರು 36 ಸಾವಿರ ರೂ. ಹೆಚ್ಚಳ!

Tata Aria
ದೇಶದ ಪ್ರಮುಖ ವಾಹನ ತಯಾರಿಕಾ ಕಂಪನಿ ಟಾಟಾ ಮೋಟರ್ಸ್ ಕಾರ್ ದರಗಳನ್ನು ಏರಿಕೆ ಮಾಡುವ ನಿರೀಕ್ಷೆಯಿದೆ. ಉತ್ಪಾದನಾ ವೆಚ್ಚ ಹೆಚ್ಚಳ ಹಿನ್ನಲೆಯಲ್ಲಿ ಏಪ್ರಿಲ್ ಒಂದರಿಂದ ಕಂಪನಿಯ ಕಾರ್ ದರಗಳು ಸುಮಾರು 36 ಸಾವಿರ ರೂ.ಗಿಂತ ಹೆಚ್ಚು ದುಬಾರಿಯಾಗಲಿವೆ. "ವೆಚ್ಚ ತಗ್ಗಿಸಲು ಕಂಪನಿ ಸಾಕಷ್ಟು ಕ್ರಮಕೈಗೊಂಡರೂ ಕಚ್ಚಾ ಸಾಮಾಗ್ರಿಗಳ ದರ ದಿನೇ ದಿನೇ ದುಬಾರಿಯಾಗುತ್ತಿರುವ ಹಿನ್ನಲೆಯಲ್ಲಿ ಕಾರ್ ದರಗಳನ್ನು ಹೆಚ್ಚಿಸುವ ಅನಿವಾರ್ಯತೆಗೆ ಕಂಪನಿ ಒಳಗಾಗಿದೆ" ಎಂದು ಕಂಪನಿ ಪ್ರಕಟಣೆ ತಿಳಿಸಿದೆ.

ಕಂಪನಿ ಕಾರ್ ದರಗಳನ್ನು ಪರಿಷ್ಕರಿಸಿದ ಮೇಲೆ ಟಾಟಾ ಇಂಡಿಕಾ ಕಾರ್ ದರಗಳು ಸುಮಾರು 7 ಸಾವಿರ ರೂ.ನಿಂದ 9 ಸಾವಿರ ರೂ.ವಿನಷ್ಟು ಹೆಚ್ಚಾಗಲಿದೆ. ಟಾಟಾ ವಿಸ್ಟಾ ಮತ್ತು ಇಂಡಿಗೊ ದರಗಳು ಸುಮಾರು 8 ಸಾವಿರ ರೂ.ನಿಂದ 11 ಸಾವಿರ ರೂ.ನಷ್ಟು ಹೆಚ್ಚಾಗಲಿದೆ. ಟಾಟಾ ಮಾಂಝಾ ದರ ಸುಮಾರು 10 ಸಾವಿರ ರೂ.ನಿಂದ 15 ಸಾವಿರ ರೂ.ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಆದರೆ ನ್ಯಾನೊ ಕಾರ್ ದುಬಾರಿಯಾಗುವ ಕುರಿತು ಕಂಪನಿ ಇನ್ನೂ ಸ್ಪಷ್ಟಪಡಿಸಿಲ್ಲ.

ಇದರೊಂದಿಗೆ ಟಾಟಾ ಸುಮೊ ದರ 13 ಸಾವಿರ ರೂ.ನಿಂದ 15 ಸಾವಿರ ರೂ.ನಷ್ಟು ಹೆಚ್ಚಾಗಲಿದೆ. ಗ್ರಾಂಡೆ ದರ 16-19 ಸಾವಿರ ರೂ.ನಷ್ಟು, ಸಫಾರಿ 18-29 ಸಾವಿರ ರೂ.ನಷ್ಟು, ಟಾಟಾ ಆರಿಯಾ ದರ ಸುಮಾರು 30 ಸಾವಿರ ರೂ.ನಿಂದ 36 ಸಾವಿರ ರೂ.ವಿನಷ್ಟು ಮತ್ತು ಟಾಟಾ ವೆಂಚ್ಯೂರ್ ಸುಮಾರು 9 ಸಾವಿರ ರೂ.ನಿಂದ 12 ಸಾವಿರ ರೂ.ವಿನಷ್ಟು ಏರಿಕೆ ಕಾಣಲಿದೆ. ಏಪ್ರಿಲ್ ಒಂದರಿಂದ ಟಾಟಾ ಮೋಟರ್ಸ್ ಕಾರ್ ದರಗಳನ್ನು ಹೆಚ್ಚಿಸುವ ನಿರೀಕ್ಷೆಗಳಿವೆ.

More from DriveSpark

Article Published On: Saturday, March 19, 2011, 10:31 [IST]
English summary
Tata Motors Likely hike its car prices upto Rs 36,000 with effective from April 1st because of rising input costs. Tata Indica will get costly around Rs 7,000-Rs 9,000, Tata Vista and Indigo CS by Rs 8,000-Rs 11,000 and Tata Manza by Rs 10,000-Rs 15,000.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+