ಟಾಟಾ ಮೋಟರ್ಸ್ ನಿಂದ ಅಗ್ಗದ ಆರಿಯಾ ಕ್ರಾಸೊವರ್

Tata Aria
ಕಳೆದ ವರ್ಷ ಅಕ್ಟೋಬರ್ ನಲ್ಲಿ ರಸ್ತೆಗಿಳಿದ "ಟಾಟಾ ಆರಿಯಾ" ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿತ್ತು. ಈ ಕಾರನ್ನು ಹೆಚ್ಚು ಜನರು ಇಷ್ಟಪಟ್ಟರೂ ಮಾರಾಟ ಮಾತ್ರ ಹೆಚ್ಚಾಗಿರಲಿಲ್ಲ. ದುಬಾರಿ ಕಾರಿನಿಂದ ಜನರು ದೂರವಾಗುವುದನ್ನು ಅರಿತ ಕಂಪನಿಯು ಶೀಘ್ರದಲ್ಲಿ ಅಗ್ಗದ ಆರಿಯಾ ಕಾರನ್ನು ಹೊರತರಲು ನಿರ್ಧರಿಸಿದೆ. ಇದರಲ್ಲಿ ಫೀಚರ್ ಗಳು ಕಡಿಮೆ ಇರುವ ನಿರೀಕ್ಷೆಯಿದೆ.

ನೂತನ ಆರಿಯಾ ದರ ಸುಮಾರು 10ರಿಂದ 11 ಲಕ್ಷ ರು. ಇರುವ ನಿರೀಕ್ಷೆಯಿದೆ. ಇದೆಂಥ ಅಗ್ಗ ಎನ್ನದಿರಿ. ಅಕ್ಟೋಬರ್ ನಲ್ಲಿ ಹೊರಬಂದ ಆರಿಯಾ ದರ 13.54 ಲಕ್ಷ ರು.ನಿಂದ 46 ಲಕ್ಷ ರು.ವರೆಗಿತ್ತು. ದೇಶದ ವಾಹನ ತಯಾರಿಕರ ಒಕ್ಕೂಟ ಹೇಳುವ ಪ್ರಕಾರ ದೇಶದಲ್ಲಿ ಈಗ ಪ್ರತಿತಿಂಗಳು ನೂರರಿಂದ 300ರಷ್ಟು ಆರಿಯಾ ಕಾರುಗಳು ಮಾರಾಟವಾಗತ್ತಿವೆ.

"ಟಾಟಾ ಆರಿಯಾ ಕಾರು ದುಬಾರಿಯಾಗಿರುವುದರಿಂದ ಹೆಚ್ಚು ಜನರು ಇಷ್ಟಪಡುವುದಿಲ್ಲ" ಎಂದು ಡೀಲರ್ ಒಬ್ಬರು ಹೇಳಿದ್ದಾರೆ. ದರ ಕಡಿಮೆಯಾದರೆ ಜನರಿಗೆ ಇಷ್ಟವಾಗಬಹುದು ಎಂದಿದ್ದಾರೆ. ಆರಿಯಾ ಒಟ್ಟು ಎಷ್ಟು ಮಾರಾಟವಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಲು ಟಾಟಾ ಮೋಟರ್ಸ್ ವಕ್ತಾರರು ನಿರಾಕರಿಸಿದ್ದಾರೆ. ಆದರೆ ಜೆಡಿ ಪವರ್ ಏಷ್ಯಾ ಪೆಸಿಫಿಕ್ ಹೇಳುವ ಪ್ರಕಾರ ಕಳೆದ 5 ತಿಂಗಳಲ್ಲಿ ಸುಮಾರು 900 ಆರಿಯಾ ಕಾರುಗಳು ಮಾರಾಟವಾಗಿದೆ.

ಟೊಯೊಟಾ ಇನ್ನೋವಾ ಮತ್ತು ಮಹೀಂದ್ರ ಕ್ಷೈಲೊ ಕಾರುಗಳು ಟಾಟಾ ಆರಿಯಾಕ್ಕಿರುವ ಪ್ರಮುಖ ಪ್ರತಿಸ್ಪರ್ಧಿ ಕಾರುಗಳಾಗಿವೆ. ಆರಿಯಾದ 36 ಫೀಚರ್ ಗಳನ್ನು ಹೈಲೈಟ್ ಮಾಡುವ ಮೂಲಕ ಟಾಟಾ ಮೋಟರ್ಸ್ ಹೊಸ ಮಾರಾಟ ತಂತ್ರ ಅನುಸರಿಸಿದೆ.

More from DriveSpark

Article Published On: Monday, July 4, 2011, 13:23 [IST]
English summary
Tata Motors launched its first crossover the Tata Aria with much fanfare in October last year. This initial hype around the Aria has not been translated to solid sales. Hence the carmaker as decided to launch a cheaper Aria that will have a two-wheel-drive system and lesser number of features. The cheaper aria is expected to be priced around Rs.10 – 11 lakh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+