ಹುರ್ರೆ... ನ್ಯಾನೊ ದರ 20 ಸಾವಿರ ರು. ಇಳಿಕೆ

ಹಬ್ಬದ ಸೀಸನ್ ಹತ್ತಿರವಾಗುತ್ತಿರುವುದರಿಂದ ಕಂಪನಿಗಳು ದರ ಇಳಿಕೆಗೆ ತೊಡಗಿವೆ. ಆದರೆ ಟಾಟಾ ನ್ಯಾನೊ ಆಫರ್ ಹಬ್ಬದ ಸೀಸನಿನ ದರ ಇಳಿಕೆಯಲ್ಲ. ಕಂಪನಿಯ ಪುಟ್ಟ ಕಾರಿಗೆ ಬೇಡಿಕೆ ಇಳಿಮುಖವಾಗುವುದನ್ನು ತಪ್ಪಿಸಲು ಕಂಪನಿ ದರದಲ್ಲಿ ವಿನಾಯಿತಿ ಮಾಡಲಿದೆ ಎಂದು ವರದಿಗಳು ಹೇಳಿವೆ. ಆದರೆ ಕಂಪನಿ ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ.
"ನಾವು ಮಾರುಕಟ್ಟೆಯನ್ನು ಅರ್ಥಮಾಡಿಕೊಳ್ಳುವ ಆರಂಭದ ಹಂತದಲ್ಲಿದ್ದೇವೆ. ಬಿಗ್ ಬಜಾರ್ ಮಳಿಗೆಗಳಲ್ಲಿ ಕಾರು ಮಾರಾಟ ಇತ್ಯಾದಿ ಕಾರ್ಯತಂತ್ರಗಳ ಮೂಲಕ ನ್ಯಾನೊ ಮಾರಾಟ ಹೆಚ್ಚಿಸಲು ಪ್ರಯತ್ನಿಸುತ್ತಿದ್ದೇವೆ" ಎಂದು ಕಂಪನಿಯ ಪ್ರಯಾಣಿಕ ಕಾರು ಮಾರಾಟ ವಿಭಾಗದ ಉಪಾಧ್ಯಕ್ಷ ಆರ್ ರಾಮಕೃಷ್ಣನ್ ಕೆಲವು ದಿನಗಳ ಹಿಂದೆ ಹೇಳಿದ್ದರು.
ನ್ಯಾನೊ ದರ ಕಡಿಮೆಯಾದರೆ ನೂತನ ದರ ಈ ಕೆಳಗಿನಂತಿರಲಿದೆ...
ಟಾಟಾ ನ್ಯಾನೊ ಸ್ಟಾಂಡರ್ಡ್
* ಹಿಂದಿನ ದರ: 1.74 ಲಕ್ಷ ರು.
* ನೂತನ ದರ 1.59 ಲಕ್ಷ ರು.
ಟಾಟಾ ನ್ಯಾನೊ ಸಿಎಕ್ಸ್
* ಹಿಂದಿನ ದರ 2.06 ಲಕ್ಷ ರು.
* ನೂತನ ದರ 1.86 ಲಕ್ಷ ರು.
ಟಾಟಾ ನ್ಯಾನೊ ಎಲ್ ಎಕ್ಸ್
* ಹಿಂದಿನ ದರ 2.36 ಲಕ್ಷ ರು.
* ನೂತನ ದರ 2.16 ಲಕ್ಷ ರು.
ಆಯಾ ಮಳಿಗೆಗಳಲ್ಲಿ ದರದಲ್ಲಿ ವ್ಯತ್ಯಾಸವಿರಬಹುದು.


Click it and Unblock the Notifications








