ಮಾರ್ಚ್ ತಿಂಗಳಲ್ಲಿ ಟಾಟಾ ನ್ಯಾನೊ ಡೀಸೆಲ್ ರಸ್ತೆಗೆ

ಟಾಟಾ ಮೋಟರ್ಸ್ ಅಗ್ಗದ ಪುಟ್ಟ ಕಾರು ನ್ಯಾನೊ ಹೊಸ ಅವತಾರದಲ್ಲಿ ರಸ್ತೆಗಿಳಿಯಲಿದೆ. ಕಂಪನಿಯು ನ್ಯಾನೊ ಡೀಸೆಲ್ ಆವೃತ್ತಿಗೆ ಹೊಸದಾಗಿ ವಿ2 ಎಂದು ನಾಮಕರಣ ಮಾಡುವ ನಿರೀಕ್ಷೆಯಿದೆ. ಡೀಸೆಲ್ ಎಂಜಿನ್ ಹೊಂದಿರುವ ಟಾಟಾ ನ್ಯಾನೊ ವಿ2 ತಾಂತ್ರಿಕವಾಗಿ ಸಾಕಷ್ಟು ಅಪ್ ಗ್ರೇಡ್ ಆಗಿ ಬರುವ ನಿರೀಕ್ಷೆಯಿದೆ.
ಕನ್ನಡ ಡ್ರೈವ್ ಸ್ಪಾರ್ಕ್ ಈ ಹಿಂದೆ ವರದಿ ಮಾಡಿದಂತೆ ಬಾಷ್ ಕಂಪನಿಯು ಟಾಟಾ ನ್ಯಾನೊ ಅಭಿವೃದ್ಧಿಪಡಿಸುತ್ತಿದೆ. ಕಡಿಮೆ ದರದ ಪೆಟ್ರೋಲ್ ಕಾರುಗಳನ್ನು ಹೊರತುಪಡಿಸಿದರೆ ನ್ಯಾನೊ ಡೀಸೆಲ್ ಕಾರುಗಳಿಗೆ ಸರಿಯಾದ ಪ್ರತಿಸ್ಪರ್ಧಿ ಕಾರುಗಳು ರಸ್ತೆಯಲ್ಲಿಲ್ಲ.
ನೂತನ ಕಾರಿನ ದರದ ಕುರಿತು ಯಾವುದೇ ಮಾಹಿತಿ ಲಭ್ಯವಿಲ್ಲ. ಹೊಸ ನ್ಯಾನೊ ಕಾರಿನ ಇಂಟಿರಿಯರ್, ಸೀಟ್, ಪೇಂಟ್ ಇತ್ಯಾದಿಗಳು ಇನ್ನಷ್ಟು ಆಕರ್ಷಕವಾಗಿರುವ ನಿರೀಕ್ಷೆಯಿದೆ.
ಡೀಸೆಲ್ ನ್ಯಾನೊ ಕಾರಿನ ಕುರಿತು ಟಾಟಾ ಮೋಟರ್ಸ್ ಒಂದಿಷ್ಟು ಗೌಪ್ಯತೆ ಕಾಯ್ದುಕೊಂಡಿದೆ. ಇದು ಯಾವಾಗ ರಸ್ತೆಗಿಳಿಯಲಿದೆ ಎಂಬುದು ಕೂಡ ಖಚಿತವಾಗಿಲ್ಲ. ಆದರೆ ಮುಂದಿನ ವರ್ಷ ಜನವರಿಯಲ್ಲಿ ದೆಹಲಿಯಲ್ಲಿ ನಡೆಯಲಿರುವ ವಾಹನ ಪ್ರದರ್ಶನದಲ್ಲಿ ಡೀಸೆಲ್ ನ್ಯಾನೊ ಪ್ರದರ್ಶನಗೊಳ್ಳುವ ನಿರೀಕ್ಷೆಯಿದೆ.
ಎಲ್ಲಾ ಡೀಸೆಲ್ ಕಾರುಗಳಂತೆ ನ್ಯಾನೊ ಡೀಸೆಲ್ ಅತ್ಯಧಿಕ ಮೈಲೇಜ್ ನೀಡುವ ನಿರೀಕ್ಷೆಯಿದೆ. ನೂತನ ನ್ಯಾನೊ ವಿ2 ಪ್ರತಿಲೀಟರ್ ಡೀಸೆಲ್ ಗೆ 30 ಕಿ.ಮೀ. ಮೈಲೇಜ್ ನೀಡಲಿದೆಯಂತೆ. ಇಷ್ಟು ಮೈಲೇಜ್ ದೊರಕಿದರೆ ಇದು ದೇಶದ ಮಧ್ಯಮವರ್ಗದ ಜನತೆಯ ನೆಚ್ಚಿನ ಕಾರಾಗಲಿದೆ.
ಆದರೆ ಹೆಚ್ಚಿನವರು ನ್ಯಾನೊ ಬೆಂಕಿ ಕುರಿತು ಭಯ ಪಡುತ್ತಾರೆ. ಆದರೆ ಡೀಸೆಲ್ ನ್ಯಾನೊಗೆ ಯಾವುದೇ ಬೆಂಕಿ ಗಂಡಾಂತರಗಳು ಬಾರದಿರಲಿ ಎಂದುಕೊಳ್ಳೋಣ.


Click it and Unblock the Notifications








