ಟಾಟಾ ಸುಮೊ ಗೋಲ್ಡ್ ರಸ್ತೆಗೆ, ದರ 5 ಲಕ್ಷ ರು.

Tata Sumo Gold Launched at Rs.5.04 Lakhs
ಟಾಟಾ ಮೋಟರ್ಸ್ ನೂತನ ಮಲ್ಟಿ ಪರ್ಪೊಸ್ ವೆಹಿಕಲ್ ಟಾಟಾ ಸುಮೊ ಗೋಲ್ಡ್ ಅನಾವರಣ ಮಾಡಿದೆ. ಇದರ ದರ ಕೇವಲ 5.04 ರುಪಾಯಿ. ಉಳಿದ ಮಲ್ಟಿ ಪರ್ಪೋಸ್ ವೆಹಿಕಲ್ ಗಳಿಗೆ ಹೋಲಿಸಿದರೆ ಸುಮೊ ಗೋಲ್ಡ್ ದರ ಅಗ್ಗ.

ನೂತನ ಸುಮೊ ಗೋಲ್ಡ್ ಇತ್ತೀಚೆಗೆ ರಸ್ತೆಗಿಳಿದ ಮಹೀಂದ್ರ ಬೊಲೆರೊ ಝಡ್ಎಲ್ಎಕ್ಸ್ ಗೆ ಪೈಪೋಟಿ ನೀಡುವ ನಿರೀಕ್ಷೆಯಿದೆ. ಇದು ಷೆವರ್ಲೆ ಟವೆರಾ ಮಾರಾಟಕ್ಕೂ ಹೊಡೆತ ನೀಡಲಿದೆ.

ಸುಮೊ ಗೋಲ್ಡ್ ನಾಲ್ಕು ಆವೃತ್ತಿಗಳಲ್ಲಿ ದೊರಕುತ್ತದೆ. ಜಿಎಕ್ಸ್, ಇಎಕ್ಸ್, ಎಲ್ಎಕ್ಸ್ ಮತ್ತು ಸಿಎಕ್ಸ್ ಸುಮೊ ಗೋಲ್ಡ್ ಆವೃತ್ತಿಗಳು ರಸ್ತೆಗಿಳಿದಿವೆ. ಇವೆಲ್ಲ ಎಂಪಿವಿಗಳು 3 ಲೀಟರ್ ಸಿಆರ್ ಎಂಜಿನ್ ಹೊಂದಿವೆ. ಈ ಆವೃತ್ತಿಗಳಲ್ಲಿ ಇಎಕ್ಸ್, ಎಲ್ಎಕ್ಸ್ ಮತ್ತು ಸಿಎಕ್ಸ್ ಆವೃತ್ತಿಗಳು ಬೇಕಿದ್ದಲ್ಲಿ 3 ಲೀಟರಿನ ಟಿಸಿಐಸಿ ಎಂಜಿನ್ ಆಯ್ಕೆಯಲ್ಲೂ ದೊರಕುತ್ತದೆ.

ರಸ್ತೆಯಲ್ಲಿರುವ ಹಳೆಯ ಸುಮೊ ಕಾರುಗಳಿಗೆ ಹೋಲಿಸಿದರೆ ನೂತನ ಸುಮೊ ಗೋಲ್ಡ್ ಕೊಂಚ ಭಿನ್ನ. ಟಾಟಾ ಮೋಟರ್ಸ್ ಈ ಕಾರಿಗೆ ಮೂರು ಲೀಟರಿನ ಕಾಮನ್ ರೈಲ್ ಎಂಜಿನ್ ಅಳವಡಿಸಿದೆ. ಇದು ಇಂಧನ ದಕ್ಷತೆಗೆ ನೆರವಾಗಿದೆ.

ನೂತನ ಡೀಸೆಲ್ ಎಂಜಿನ್ ನ ಮೂಲಕ ಸುಮೊ ಗೋಲ್ಡ್ ನಲ್ಲಿ 80 ಹಾರ್ಸ್ ಪವರ್ ಪಡೆಯಬಹುದಾಗಿದೆ. ಹಳೆಯ ಸುಮೊದಲ್ಲಿ 70 ಹಾರ್ಸ್ ಪವರ್ ದೊರಕುತ್ತಿತ್ತು. ಸಿಆರ್ 4 ಎಂಜಿನ್ ನಲ್ಲಿ ಪ್ರತಿಲೀಟರ್ ಗೆ 14.07 ಕಿ.ಮೀ. ಮೈಲೇಜ್ ದೊರಕುತ್ತದೆ.

More from DriveSpark

Article Published On: Thursday, November 10, 2011, 18:00 [IST]
English summary
Tata Motors has launched the Sumo Gold MUV with a mouth watering starting price of RS.5.04 lakhs. The Tata Sumo Gold's launch rekindles life in to the inexpensive MUV sector. The Sumo has been one of the most successful models in this sector and the launch of the much glossier and posh Sumo Grande had actually turned away several buyers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+