ದೇಶದ ರಸ್ತೆಗೆ ಲೆಕ್ಷಸ್ ಕಾರು: ಟೊಯೊಟಾ ಮ್ಯಾಜಿಕ್

ದೇಶದಲ್ಲಿ ಲೆಕ್ಷಸ್ ಎಕ್ಸ್ ಕ್ಲೂಸಿವ್ ಡೀಲರ್ಷಿಪ್ ಕೇಂದ್ರಗಳನ್ನು ತೆರೆಯಲು ಟೊಯೊಟಾ ನಿರ್ಧರಿಸಿದೆ. ಈಗಾಗಲೇ ಹಲವು ಜಾಗತಿಕ ಐಷಾರಾಮಿ ಕಾರು ಕಂಪನಿಗಳು ದೇಶದಲ್ಲಿ ಕಾರುಗಳನ್ನು ಮಾರಾಟ ಮಾಡುತ್ತಿವೆ. ಇಲ್ಲಿ ಐಷಾರಾಮಿ ಕಾರುಗಳನ್ನು ಖರೀದಿಸುವರ ಸಂಖ್ಯೆಯೂ ದಿನೇ ದಿನೇ ಏರಿಕೆಯಾಗುತ್ತಿದೆ.
ಟೊಯೊಟಾ ಮೋಟರ್ ಕಾರ್ಪೊರೇಷನ್ 2013ರ ವೇಳೆಗೆ ಲೆಕ್ಷಸ್ ಕಾರುಗಳನ್ನು ಭಾರತಕ್ಕೆ ಪರಿಚಯಿಸುವ ನಿರೀಕ್ಷೆಯಿದೆ. ಆದರೆ ಯಾವಾಗ ಎಂದು ಖಚಿತವಾಗಿ ಕಂಪನಿ ಪ್ರಕಟಿಸಿಲ್ಲ.
"ನಾವು ಲೆಕ್ಷಸ್ ಬ್ರಾಂಡನ್ನು ದೇಶಕ್ಕೆ ಪರಿಚಯಿಸಲು ನಿರ್ಧರಿಸಿದ್ದೇವೆ. ಆದರೆ ಯಾವಾಗ ಎಂದು ಖಚಿತವಾಗಿ ಈಗಲೇ ಹೇಳುವುದು ಸಾಧ್ಯವಿಲ್ಲ" ಎಂದು ಟೊಯೊಟಾ ಕಿರ್ಲೊಸ್ಕರ್ ಮೋಟರ್ ಕಂಪನಿಯ ಸಹಾಯಕ ವ್ಯವಸ್ಥಾಪಕ ನಿರ್ದೇಶಕ ಶೇಖರ್ ವಿಶ್ವನಾಥನ್ ಹೇಳಿದ್ದಾರೆ.


Click it and Unblock the Notifications








