ಫೆರಾರಿ ರೇಸರ್, ಮಕ್ಕಳಿಗೆ ದುಬಾರಿ ಆಟಿಕೆ ಕಾರ್

Ferrari race car
ಮಕ್ಕಳ ಆಟಿಕೆಗಾಗಿ ಕೆಲವು ಸಾವಿರ ರೂಪಾಯಿ ಖರ್ಚು ಮಾಡುವವರು ಇದನ್ನು ಓದಬಹುದು. ಆದರೆ ಅಕ್ಕಪಕ್ಕದಲ್ಲಿ ನಿಮ್ಮ ಪ್ರೀತಿಯ ಪುಟ್ಟಪುಟ್ಟಿ ಇಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಂಡು ಓದಿ. ಸುಮಾರು 4-5ಲಕ್ಷ ರೂ. ದರದ "ಈ ಆಟಿಕೆ ತಂದುಕೊಡು" ಎಂದು ಮಕ್ಕಳು ರಚ್ಚೆ ಹಿಡಿದರೆ ನಿಮಗೆ ತೊಂದರೆಯಾದೀತು.

ಫೆರಾರಿ ಎಫ್ ಎಕ್ಸ್ ಎಕ್ಸ್ ರೇಸರ್ ಪೆಡಲ್ ಗೋ ಕಾರ್ಟ್ ಎಂಬ ಐಷಾರಾಮಿ ಮಕ್ಕಳ ಆಟಿಕೆ ಕಾರನ್ನು ಬರ್ಗ್ ಟಾಯ್ಸ್ ಹೊರತಂದಿದೆ. ರೇಸಿಂಗ್ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಬೆಳೆಸಲು ಇಚ್ಚಿಸಿದರೆ ಈ ಆಟಿಕೆ ತಂದುಕೊಡಬಹುದು. ಪೆಡಲ್ ಸಿಸ್ಟಮ್ ಮೂಲಕ ಬಂದಿರುವುದರಿಂದ ಮಿತಿಮೀರಿದ ವೇಗದಲ್ಲಿ ಇದರಲ್ಲಿ ಹೋಗಲು ಸಾಧ್ಯವಿಲ್ಲ. ಹೀಗಾಗಿ ಮಕ್ಕಳಿಗೆ ಇದು ಸೇಫಾಗಿದೆ ಎನ್ನಬಹುದು.

ನಿಮ್ಮ ಮಗುವಿಗೆ ಇದು ಅತ್ಯದ್ಬುತ ಆಟಿಕೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಇದರಲ್ಲಿರುವುದೆಲ್ಲ ಆಕರ್ಷಕ ಫೀಚರ್ ಗಳೇ. 5 ಸ್ಪೋಕ್ ಅಲಾಯ್ ವೀಲ್ ಹೊಂದಿರುವ ಕಾರ್ಟ್ ನೋಡಲು ಒಂದಿಷ್ಟು ಹಾಟ್ ಆಗಿಯೇ ಇದೆ. ಗೋ ಕಾರ್ಟ್ ಸ್ಪೋರ್ಟ್ಸ್ ಡಿಸ್ಕ್ ಬ್ರೇಕ್ ಹೊಂದಿದ್ದು, ಸೀಟ್ ಬೆಲ್ಟ್ ಕೂಡ ಇದೆ.

ಏರೋಡೈನಾಮಿಕ್ ವಿನ್ಯಾಸ, 12 ಇಂಚಿನ ಹಗುರ ಮೆಟಲ್ ವೀಲ್ ರಿಮ್ ಮತ್ತು 7 ಗೇರ್ ಹೊಂದಿದೆ. ಡಬಲ್ ಡಿಸ್ಕ್ ಬ್ರೇಕ್, ಕಂಪ್ಯೂಟರ್ ಡ್ಯಾಷ್ ಬೋರ್ಡ್, ಮೆತ್ತನೆಯ ಸ್ಪೋರ್ಟ್ ಸೀಟ್, ಚಂದದ ಸ್ಟೀರಿಂಗ್ ವೀಲ್ ಇತ್ಯಾದಿ ಫೀಚರ್ ಗಳೂ ಇವೆ. ಇದಕ್ಕೆ 2 ವರ್ಷದ ವ್ಯಾರಂಟಿಯಿದ್ದು, ತೂಕ 41 ಕೆಜಿ ಇದೆ. ಈಗ ಇದು ಆನ್ ಲೈನ್ ಶಾಪಿಂಗ್ ತಾಣಗಳಲ್ಲಿ ದೊರಕುತ್ತಿದೆ. ಶಿಪ್ಪಿಂಗ್ ದರ ಸೇರಿ ಇದರ ದರ ಸುಮಾರು 5 ಲಕ್ಷ ರೂ. ಇರಬಹುದು.

ಇದಕ್ಕೆ ಇಷ್ಟು ಲಕ್ಷ ರೂ. ಕೊಡುವುದಕ್ಕಿಂತ ಮಗು ಒಂದಿಷ್ಟು ದೊಡ್ಡದಾದ ಮೇಲೆ ರಸ್ತೆಯಲ್ಲಿರುವ ಆಲ್ಟೊ, ಸ್ವಿಫ್ಟ್ ಗಿಫ್ಟ್ ಕೊಡುವುದು ಒಳ್ಳೆಯದು ಎಂದು ಯೋಚಿಸುತ್ತಿದ್ದೀರ? ನಿಮ್ಮಿಷ್ಟ!

More from DriveSpark

Article Published On: Tuesday, February 8, 2011, 10:54 [IST]
English summary
English Summary: How about an awesome toy for your kid. look beyond luxury brand Ferrari, especially if they offer you a model that your kid can actually drive by himself? The car giants have come out with a Ferrari FXX Racers pedal Go-Kart inspired by the car itself.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+