ವಿಶ್ವಕಪ್ ಗೆದ್ದರೆ ಆಟಗಾರರಿಗೆ ಹ್ಯುಂಡೈ ಕಾರು

ಹೊಚ್ಚ ಹೊಸ ಹ್ಯುಂಡೈ ವರ್ಣಾ ಕಾರುಗಳನ್ನು ಭಾರತೀಯ ಆಟಗಾರರಿಗೆ ನೀಡಲು ಸಂಸ್ಥೆಗೆ ಕಾತುರದಿಂದ ಕಾದಿದೆ. ವಿಶ್ವಕಪ್ ಅಭಿಯಾನದ ಸಮಯದಲ್ಲಿ ಹ್ಯುಂಡೈ ಅಭಿಮಾನಿಗಳ ಪಾರ್ಕ್, ಫಸ್ಟ್ ಬಾಲ್ ಹಾಗೂ ಲಾಸ್ಟ್ ಬಾಲ್ ಎಂಬ ಹೆಸರಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಕ್ರಿಕೆಟ್ ಕ್ರೇಜ್ ಅನ್ನು ಹಿಡಿದಿಟ್ಟುಕೊಳ್ಳುವಂತೆ ಮಾಡಿದೆ ಎಂದು ಹ್ಯುಂಡೈ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಚ್ ಡಬ್ಲ್ಯೂ ಪಾರ್ಕ್ ಹೇಳಿದ್ದಾರೆ.
ದೆಹಲಿ, ಮುಂಬೈ, ಚೆನ್ನೈ ಸೇರಿದಂತೆ ಪ್ರಮುಖ ನಗರಗಳ ಮಾಲ್ ಗಳಲ್ಲಿ ಹ್ಯುಂಡೈ ಫ್ಯಾನ್ಸ್ ಪಾರ್ಕ್ ಸ್ಥಾಪಿಸಲಾಗಿದ್ದು, ದೊಡ್ಡ ದೊಡ್ಡ ಸ್ಕ್ರೀನ್ ಮೂಲಕ ವಿಶ್ವಕಪ್ ಪಂದ್ಯಗಳನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಫನ್ ಜೋನ್ ಕೂಡ ಸೃಷ್ಟಿಸಲಾಗಿದ್ದು, ಅಭಿಮಾನಿಗಳು ಟ್ಯಾಟ್ಟೋ, ವ್ಯಂಗ್ಯ ಚಿತ್ರಗಳನ್ನು ಬಳಸಿಕೊಂಡು ಕ್ರಿಕೆಟ್ ಅಭಿಮಾನ ಮೆರೆಯುತ್ತಿದ್ದಾರೆ. ವಿವಿಧ ಚುಟುಕು ಸ್ಪರ್ಧೆಗಳನ್ನು ನಡೆಸಿ ಬಹುಮಾನ ಕೂಡಾ ನೀಡಲಾಗುತ್ತಿದೆ.
ಹ್ಯುಂಡೈ ಕ್ರೀಡಾ ಕಾರು ಕೊಂಡ ಗ್ರಾಹಕರಿಗೆ ಕ್ರಿಕೆಟ್ ಸೆಟ್ ಉಡುಗೊರೆಯಾಗಿ ಸಿಗುತ್ತಿದೆ. ವಿಶ್ವಕಪ್ ಆರಂಭದ ಪಂದ್ಯದಲ್ಲಿ ಬಳಸಲಾದ ಚೆಂಡು ಫಸ್ಟ್ ಬಾಲ್ ಹಾಗೂ ವಿಶ್ವಕಪ್ ಫೈನಲ್ಸ್ ನಲ್ಲಿ ಬಳಸಲಾಗುವ ಕ್ರಿಕೆಟ್ ಚೆಂಡಿನ ಪ್ರತಿರೂಪವೇ ಲಾಸ್ಟ್ ಬಾಲ್ ಇವೆರಡು ನವದೆಹಲಿ, ಮುಂಬೈ ಹಾಗೂ ಚೆನ್ನೈ ಮಳಿಗೆಯಲ್ಲಿ ಪ್ರದರ್ಶನಕ್ಕಿವೆ.


Click it and Unblock the Notifications








