ಹಬ್ಬದ ಸಂಭ್ರಮದಲ್ಲಿ ಆಗಮಿಸಲಿರುವ ಹತ್ತು ಕಾರುಗಳು

ಈ ವರ್ಷ ಹತ್ತು ಹಲವು ಕಾರುಗಳು ದೇಶದ ರಸ್ತೆಗಿಳಿಯಲು ಸರದಿ ಸಾಲಿನಲ್ಲಿ ನಿಂತಿವೆ. ಅದರಲ್ಲಿ ಮುಂದಿನ ಒಂದೆರಡು ತಿಂಗಳಲ್ಲಿ ಆಗಮಿಸಲಿರುವ ಕಾರುಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ಇದೇ ದಿನ ಈ ಕಾರುಗಳು ರಸ್ತೆಗಿಳಿಯಲಿದೆ ಎಂದು ಇದಮಿತ್ಥಂ ಹೇಳುವುದು ಕಷ್ಟ. ನಿಮ್ಮ ಇಷ್ಟದ ಕಾರಿನ ಸ್ವಾಗತಕ್ಕೆ ರೆಡಿಯಾಗಿ.
ರೆನೊ ಸ್ಕಾಲಾ: ಮುಂದಿನ ತಿಂಗಳು ಅಂದರೆ ಸೆಪ್ಟೆಂಬರ್ ನಲ್ಲಿ ನೂತನ ರೆನೊ ಸ್ಕಾಲಾ ಕಾರು ದೇಶದ ರಸ್ತೆಗೆ ಆಗಮಿಸಲಿದೆ. ಇದು ನಿಸ್ಸಾನ್ ಸನ್ನಿ ಕಾರಿನ ಪಡಿಯಚ್ಚು ಆಗಿರಲಿದೆ. ಕೊಂಚ ವಿನ್ಯಾಸ ಬದಲಾವಣೆ ಹೊರತುಪಡಿಸಿದರೆ ಸನ್ನಿಗಿಂತ ಹೆಚ್ಚಿನ ಬದಲಾವಣೆ ನಿರೀಕ್ಷಿಸುವಂತಿಲ್ಲ.
ರೆನೊ ಸ್ಕಾಲಾ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿರಲಿದೆ. ಇದರಲ್ಲಿ ಪೆಟ್ರೋಲ್ ಆವೃತ್ತಿಯು ಎಕ್ಸ್ ಎಚ್2 ಎಂಜಿನ್ ಮತ್ತು ಡೀಸೆಲ್ ಆವೃತ್ತಿಯು ರೆನೊ ಕೆ9ಕೆ ಎಂಜಿನ್ ಹೊಂದಿರುವ ನಿರೀಕ್ಷೆಯಿದೆ. ಈ ಕಾರಿನಲ್ಲಿ ಐದು ಜನರು ಕುಳಿತುಕೊಳ್ಳಬಹುದಾಗಿದೆ.
ನಿಸ್ಸಾನ್ ಇವಾಲಿಯಾ ಎಕ್ಸ್ ವಿ: ಬಹುನಿರೀಕ್ಷಿತ ಮಲ್ಟಿ ಪರ್ಪೊಸ್ ವೆಹಿಕಲ್ ಇವಾಲಿಯಾ ಎಕ್ಸ್ ವಿ ಕೂಡ ಸೆಪ್ಟೆಂಬರ್ ತಿಂಗಳಲ್ಲಿ ದೇಶದ ರಸ್ತೆಗೆ ಆಗಮಿಸುವ ನಿರೀಕ್ಷೆಗಳಿವೆ. ಇದು ಎಕ್ಸ್ ಇ, ಎಕ್ಸ್ಇ ಪ್ಲಸ್, ಎಕ್ಸ್ಎಲ್ ಮತ್ತು ಎಕ್ಸ್ ವಿ ಎಂಬ ನಾಲ್ಕು ಡೀಸೆಲ್ ಎಂಜಿನ್ ಆವೃತ್ತಿಗಳಲ್ಲಿ ಲಭ್ಯವಿರಲಿದೆ. ಇದರ ದರ 7 ರಿಂದ 9 ಲಕ್ಷ ರು. ಆಸುಪಾಸಿನಲ್ಲಿರಲಿದೆ.
ಆಕರ್ಷಕ ಹೆಡ್ ರೂಮ್, ಲೆಗ್ ರೂಮ್ ಮತ್ತು ವಿಶಾಲತೆಯನ್ನು ಗಮನದಲ್ಲಿಟ್ಟುಕೊಂಡು ಇವಾಲಿಯಾ ಕಾರನ್ನು ನಿಸ್ಸಾನ್ ವಿನ್ಯಾಸ ಮಾಡಿದೆ. ವಿಶೇಷವೆಂದರೆ ಈ ಕಾರು ರಸ್ತೆಗಿಳಿಯುವ ಮುನ್ನವೇ ನಾವು ನಂದಿ ಹಿಲ್ಸ್ ನಲ್ಲಿ ಇದನ್ನು ಫಸ್ಟ್ ಡ್ರೈವ್ ಮಾಡಿದ್ದೇವೆ. ಅದರ ಸಂಪೂರ್ಣ ವಿಮರ್ಶೆಯನ್ನು ಈ ಲಿಂಕ್ ಪ್ರವೇಶಿಸಿ ಓದಿಕೊಳ್ಳಬಹುದು.
ಹಬ್ಬದ ಅವಧಿಗೆ ಆಗಮಿಸಲಿರುವ ಫೋರ್ಡ್, ಮಹೀಂದ್ರ, ಫೋರ್ಸ್ ಮತ್ತು ಷೆವರ್ಲೆ ಕಾರುಗಳ ಮಾಹಿತಿ ಮುಂದಿನ ಪುಟದಲ್ಲಿದೆ.


Click it and Unblock the Notifications








