ಹಬ್ಬದ ಆವೃತ್ತಿ: ಹೊಸ ಫಿಯೆಟ್ ಲಿನಿಯಾ, ಪುಂಟೊ
ಫಿಯೆಟ್ ಇಂಡಿಯಾ ಕಂಪನಿಯು ಪುಂಟೊ ಮತ್ತು ಲಿನಿಯಾ ಕಾರುಗಳ ಅಬ್ಸಲ್ಯೂಟ್ ಅಡಿಷನ್ ಪರಿಚಯಿಸಿದೆ. ಹಬ್ಬದ ವಿಶೇಷ ಈ ಆವೃತ್ತಿಗಳನ್ನು ಪರಿಚಯಿಸುವ ಮೂಲಕ ಗ್ರಾಹಕರನ್ನು ಸೆಳೆಯಲು ಕಂಪನಿ ನಿರ್ಧರಿಸಿದೆ. ಹಳೆ ಪುಂಟೊ, ಲಿನಿಯಾ ದರದಲ್ಲೇ ನೂತನ ಆವೃತ್ತಿಗಳನ್ನು ಖರೀದಿಸಬಹುದು.
ಗ್ರಾಹಕರು ಹೊಸ ಹಬ್ಬದ ಪುಂಟೊ ಮತ್ತು ಲಿನಿಯಾ ಖರೀದಿಸುವುದರಿಂದ ಹಲವು ಲಾಭಗಳನ್ನು ಪಡೆಯಬಹುದಾಗಿದೆ. ಕಂಪನಿಯು ಲಿನಿಯಾ ಕಾರಿಗೆ ಸುಮಾರು 78 ಸಾವಿರ ರು.ನ ಹೆಚ್ಚುವರಿ ಫೀಚರುಗಳನ್ನು ಅಳವಡಿಸಿದೆ. ಪುಂಟೊ ಕಾರಿಗೆ 67 ಸಾವಿರ ರು.ನ ಹೆಚ್ಚುವರಿ ವಿಶೇಷತೆಗಳನ್ನು ಸೇರಿಸಿದೆ. ಇದಕ್ಕೆ ಗ್ರಾಹಕರು ಹೆಚ್ಚುವರಿ ಮೊತ್ತ ಪಾವತಿಸುವ ಅಗತ್ಯವಿಲ್ಲ.
ಹೊಸದೇನಿದೆ?
ನೂತನ ಆವೃತ್ತಿಗಳಿಗೆ ಕಂಪನಿಯು 3ಜಿ ಟ್ಯಾಬ್ಲೆಟ್ ಮತ್ತು ಸ್ಮಾರ್ಟ್ ಫೋನ್ ಮೂಲಕ ಕಾರ್ಯನಿರ್ವಹಿಸುವ ಟಚ್ ಸ್ಕ್ರೀನ್ ಜಿಪಿಎಸ್ ನ್ಯಾವಿಗೇಷನ್ ಸಿಸ್ಟಮ್, ರಿವರ್ಸ್ ಪಾರ್ಕಿಂಗ್ ಅಸಿಸ್ಟ್, ಸ್ಪಾಲ್ಸ್ ಗಾರ್ಡ್ಸ್, ಬ್ರಾಂಡೆಡ್ ಮೆಟಾಲಿಕ್ ಡೋರ್ ಸಿಲ್ಸ್, ಬ್ರಾಂಡೆಂಡ್ ಕ್ಯಾಬಿನ್ ಮ್ಯಾಟ್ಸ್, ಅಬ್ಸಲ್ಯೂಟ್ ಬ್ರಾಂಡಿಂಗ್ ಇತ್ಯಾದಿ ಹೊಸ ಫೀಚರುಗಳನ್ನು ಅಳವಡಿಸಿದೆ.
ಲಾಭಗಳು
* ಹೊಸ ಫೀಚರುಗಳು
* ವಿನಿಮಯ ಬೋನಸ್
* ಆಕರ್ಷಕ ವಿಮೆ
* ಉಚಿತ ಸೇವೆ
ಫಿಯೆಟ್ ಇಂಡಿಯಾ ನೀಡಿರುವ ಹೆಚ್ಚುವರಿ ಫೀಚರುಗಳು ಮತ್ತು ಲಾಭಗಳು ನಿಮಗೆ ಇಷ್ಟವಾಯಿತೇ? ಹಾಗಿದ್ದಲ್ಲಿ ಪುಂಟೊ ಅಥವಾ ಲಿನಿಯಾ ಖರೀದಿಸಬಹುದು.

ಹಬ್ಬದ ಬೊಂಬಾಟ್ ಕೊಡುಗೆ
ಹಬ್ಬದ ಆವೃತ್ತಿಯಾಗಿ ಪರಿಚಯಿಸಿದ ನೂತನ ಲಿನಿಯಾ ಮತ್ತು ಪುಂಟೊ ಕಾರುಗಳಿಗೆ ಕಂಪನಿಯು ಹಲವು ವಿಶೇಷತೆಗಳನ್ನು, ಆಫರುಗಳನ್ನು ನೀಡಿದೆ. ಅವುಗಳ ಮಾಹಿತಿಗಾಗಿ ಮುಂದಿನ ಚಿತ್ರವನ್ನು ನೋಡಿರಿ.

ಲಿನಿಯಾ ಕಾರಿಗೆ ಹೊಸತೇನಿದೆ?
ಲಿನಿಯಾ ಕಾರಿಗೆ ಹೊಸ 3 ಜಿ ಟ್ಯಾಬ್ಲೆಟ್ ನೀಡಲಾಗಿದೆ. ಇದು ಟಚ್ ಸ್ಕ್ರೀನ್ ಜಿಪಿಎಸ್ ನ್ಯಾವಿಗೇಷನ್ ಸಿಸ್ಟಮ್ ಹೊಂದಿದೆ. ಇದು 1.0 ಗಿಗಾಹರ್ಟ್ಸ್ ಪ್ರೊಸೆಸರ್ ಮತ್ತು ಆಂಡ್ರಾಯ್ಡ್ 2,3 ಅಪರೇಟಿಂಗ್ ಸಿಸ್ಟಮ್ ಹೊಂದಿದೆ.

ಪುಂಟೊ ಕಾರಿಗೆ ಬೊಂಬಾಟ್
ಹೊಸ ಪುಂಟೊ ಕಾರಿಗೂ ಹಲವು ಫೀಚರುಗಳನ್ನು ನೀಡಲಾಗಿದೆ. ಚಿತ್ರನೋಡಿ. ಇವೆಲ್ಲ ಹೊಸ ಫೀಚರುಗಳ ವೆಚ್ಚ 67 ಸಾವಿರ ರು. ಯಾವುದೇ ಹೆಚ್ಚುವರಿ ಹಣ ಪಡೆಯದೇ ಕಂಪನಿಯು ಈ ಎಲ್ಲಾ ಫೀಚರುಗಳನ್ನು ನೀಡುತ್ತದೆ.

ಲಿನಿಯಾ ಸ್ಟೈಲ್
ಫಿಯೆಟ್ ಲಿನಿಯಾ ಅತ್ಯಾಕರ್ಷಕ ಕಾರು. ಸ್ಮೂತ್ ಸವಾರಿಗೆ ಪೂರಕವಾಗಿದೆ.

ಪುಂಟೊ ಕಾರು
ಪುಂಟೊ ವಿನ್ಯಾಸ ಆಕರ್ಷಕವಾಗಿದ್ದು, ಕಣ್ಮನ ಸೆಳೆಯುತ್ತದೆ.


Click it and Unblock the Notifications








