ಹೊಸ ಕಾರುಗಳ ಸ್ವಾಗತಕ್ಕೆ ಕಟ್ಟೋಣ ತಳಿರುತೋರಣ
ಮಹೀಂದ್ರ ಕ್ಯಾಂಟೊ: ದೇಶದ ರಸ್ತೆಗೆ ಶೀಘ್ರದಲ್ಲಿ ಆಗಮಿಸಲಿರುವ ಮಹೀಂದ್ರ ಯುಟಿಲಿಟಿ ವಾಹನದ ಹೆಸರು "ಮಹೀಂದ್ರ ಕ್ವಾಂಟೊ". ಈ ಹಿಂದೆ ಇದನ್ನು ಮಿನಿ ಕ್ಷೈಲೊ ಎನ್ನಲಾಗಿತ್ತು. ಆದರೆ ಕಂಪನಿಯು ಇದರ ಹೆಸರನ್ನು ಕ್ಯಾಂಟೊ ಎಂದು ಬದಲಾಯಿಸಿದೆ.
ನೂತನ ಮಹೀಂದ್ರ ಕ್ಯಾಂಟೊ ಆವೃತ್ತಿಯ ದರ ಸುಮಾರು 4.5 ಲಕ್ಷ ರು.ನಿಂದ 5.5 ಲಕ್ಷ ರು. ನಡುವೆ ಇರುವ ನಿರೀಕ್ಷೆಯಿದೆ. ಮಹೀಂದ್ರ ಕ್ಯಾಂಟೊ ದೇಶದ ರಸ್ತೆಗೆ ಅಕ್ಟೋಬರ್ ತಿಂಗಳ ವೇಳೆಗೆ ಆಗಮಿಸುವ ನಿರೀಕ್ಷಯಿದೆ.
ಷೆವರ್ಲೆ ಎಂಜಾಯ್: ಅಕ್ಟೋಬರ್ ತಿಂಗಳ ವೇಳೆಗೆ ಜನರಲ್ ಮೋಟರ್ಸ್ ಕಂಪನಿಯ ಬಹುನಿರೀಕ್ಷಿತ ಎಂಪಿವಿ "ಷೆವರ್ಲೆ ಎಂಜಾಯ್" ಆಗಮಿಸುವ ನಿರೀಕ್ಷೆಯಿದೆ. ಇದು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರಲಿದೆ. ಇದರ ದರ 7ರಿಂದ 9 ಲಕ್ಷ ರುಪಾಯಿವರೆಗೆ ಇರುವ ನಿರೀಕ್ಷೆಯಿದೆ. ಇದು ಮಾರುತಿ ಸುಜುಕಿ ಎರ್ಟಿಗಾ ಜೊತೆ ಮಾರುಕಟ್ಟೆಯಲ್ಲಿ ಪೈಪೋಟಿ ನಡೆಸುವ ನಿರೀಕ್ಷೆಯಿದೆ.
ಫೋರ್ಸ್ ಒನ್ ಎಸ್ ಯುವಿ 4x4: ಫೋರ್ಸ್ ಮೋಟರ್ಸ್ ಕಂಪನಿಯು ಫೋರ್ ವೀಲ್ ಡ್ರೈವ್ ಸಾಮರ್ಥ್ಯದ ನೂತನ ಫೋರ್ಸ್ ಒನ್ ಕಾರನ್ನು ಅಕ್ಟೋಬರ್ ತಿಂಗಳಲ್ಲಿ ದೇಶದ ರಸ್ತೆಗೆ ಪರಿಚಯಿಸಲಿದೆ. ಇದರ ದರ ಸುಮಾರು 11 ಲಕ್ಷ ರು. ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ.
ಟಾಟಾ, ಮಾರುತಿ ಕಂಪನಿಗಳು ಸೇರಿದಂತೆ ಇನ್ನು ಕೆಲವು ಕಾರುಗಳು ಹಬ್ಬದ ವೇಳೆಗೆ ಆಗಮಿಸಲಿವೆ. ಯಾವುದದು? ಮುಂದಿನ ಪುಟ ನೋಡಿ.


Click it and Unblock the Notifications









