ಹಬ್ಬಕ್ಕೆ ಹೊಸ ಕಾರು ಖರೀದಿಸುವಿರಾ? ಒಂದ್ನಿಮಿಷ
ಷೆವರ್ಲೆ ಸೇಲ್ ಹ್ಯಾಚ್ ಬ್ಯಾಕ್: ಸೆಪ್ಟೆಂಬರ್ ತಿಂಗಳಲ್ಲಿ ಜನರಲ್ ಮೋಟರ್ಸ್ ಕಂಪನಿಯು ಷೆವರ್ಲೆ ಸೇಲ್ ಹ್ಯಾಚ್ ಬ್ಯಾಕ್ ಕಾರು ಪರಿಚಯಿಸುವ ನಿರೀಕ್ಷೆಯಿದೆ. ಸೇಲ್ ಸೆಡಾನ್ ಕಾರು 1.4 ಲೀಟರ್ ಪೆಟ್ರೋಲ್ ಮತ್ತು 1.3 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ರಸ್ತೆಗಿಳಿಯಲಿದೆ. ಕಂಪನಿಯು ಅಧಿಕೃತವಾಗಿ ಸೇಲ್ ದರ ಪ್ರಕಟಿಸಿಲ್ಲ. ಒಂದು ಮೂಲದ ಪ್ರಕಾರ ಇದರ ದರ ಸುಮಾರು 5.70 ಲಕ್ಷ ರುಪಾಯಿಯಿಂದ 7.5 ಲಕ್ಷ ರುಪಾಯಿವರೆಗಿರಲಿದೆಯಂತೆ.
ಮಹೀಂದ್ರ ಸ್ಯಾಂಗ್ಯೊಂಗ್ ರೆಕ್ಸ್ಟಾನ್: ಮಹೀಂದ್ರ ಮತ್ತು ಸ್ಯಾಂಗ್ಯೊಂಗ್ ಮೈತ್ರಿ ಕಂಪನಿಗಳ ಮೊದಲ ಕಾರು ರೆಕ್ಸ್ಟಾನ್ ದೇಶದ ರಸ್ತೆಗೆ ಅಕ್ಟೋಬರ್ ವೇಳೆಗೆ ಆಗಮಿಸುವ ನಿರೀಕ್ಷೆಯಿದೆ. ಇದರ ದರ ಸುಮಾರು 20 ಲಕ್ಷ ರುಪಾಯಿ ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ. ಇದು ನೇರವಾಗಿ ಫೋರ್ಡ್ ಎಂಡೊವರ್ ಕಾರಿಗೆ ಪೈಪೋಟಿ ನೀಡಲಿದೆ.
ಮಾರುತಿ ಆಲ್ಟೊ 800: ಹಬ್ಬಕ್ಕೆ ಆಗಮಿಸುವ ಹತ್ತನೇ ಕಾರಿನಲ್ಲಿ ಒಂದು ಸ್ಥಾನವನ್ನು ಮಾರುತಿ 800 ಬದಲಿ ಆವೃತ್ತಿಗೆ ನೀಡಬಹುದು. ಆದರೆ ಮಾನೆಸರ್ ಗಲಭೆಯ ನಂತರ ಇದರ ಆಗಮನ ವಿಳಂಬವಾಗುವುದೇ ಎಂಬ ಸಂದೇಹವಿದೆ. ಇದೇ ಸಮಯದಲ್ಲಿ ಟಾಟಾ ಮಾಂಝಾ ಸಿಎಸ್, ಆಡಿ ಎಸ್ 6 ಮುಂತಾದ ಕಾರುಗಳೂ ಆಗಮಿಸುವ ನಿರೀಕ್ಷೆಯಿದೆ.
ಈ ಹಬ್ಬಕ್ಕೆ ನೀವು ಈ ಹೊಸ ಕಾರುಗಳನ್ನು ಖರೀದಿಸುವಿರಾ? ಅಥವಾ ರಸ್ತೆಗೆ ಈಗಾಗಲೇ ಆಗಮಿಸಿರುವ ಕಾರುಗಳಲ್ಲಿ ಯಾವುದಾದರೂ ಕಾರನ್ನು ಆಯ್ಕೆ ಮಾಡಿಕೊಳ್ಳುವಿರಾ?
ಓದಿ: ಕಾರು ಖರೀದಿಸುವ ಮುನ್ನ ಈ 5 ಸಲಹೆ ಪಾಲಿಸಿ


Click it and Unblock the Notifications









